ಫಿಫಾ ವಿಶ್ವಕಪ್: ವಿಶ್ವದ ಅತಿದೊಡ್ಡ ಕ್ರೀಡಾ ಹಬ್ಬಕ್ಕೆ ಇನ್ನೊಂದೇ ವಾರ ಬಾಕಿ

Date:

2026ರ ವಿಶ್ವಕಪ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳ ಲೆಕ್ಕಾಚಾರವನ್ನು ಕ್ರೀಡಾ ಪಂಡಿತರು ಈಗಾಗಲೇ ಆರಂಭಿಸಿದ್ದಾರೆ. ಹಾಲಿ ಚಾಂಪಿಯನ್ ಅರ್ಜೆಂಟೀನಾ, ಬಲಿಷ್ಠ ಆಟಗಾರರನ್ನು ಹೊಂದಿರುವ ಫ್ರಾನ್ಸ್, ಯುವ ಪ್ರತಿಭೆಗಳಿರುವ ಇಂಗ್ಲೆಂಡ್, ಅನುಭವಿ ಬ್ರೆಜಿಲ್ ಮತ್ತು ಸ್ಪೇನ್ ತಂಡಗಳು ಪ್ರಶಸ್ತಿ ಗೆಲ್ಲುವ ಮುಂಚೂಣಿ ರೇಸ್‌ನಲ್ಲಿವೆ. ಇವುಗಳ ಜೊತೆಗೆ ಜರ್ಮನಿ ಹಾಗೂ ಪೋರ್ಚುಗಲ್ ಕೂಡ ಪ್ರಬಲ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದ್ದು, ಈ ಬಾರಿಯ ಟ್ರೋಫಿ ಯಾರ ಪಾಲಾಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

- Advertisement -

ಫುಟ್‌ಬಾಲ್ ಜಗತ್ತಿನ ಅತ್ಯಂತ ದೊಡ್ಡ ಹಾಗೂ ರೋಮಾಂಚಕಾರಿ ಹಬ್ಬವಾದ 2026ರ ಫಿಫಾ ಪುರುಷರ ವಿಶ್ವಕಪ್ ಪಂದ್ಯಾವಳಿಗೆ ಇನ್ನು ಕೇವಲ ಒಂದು ವಾರದ ಕ್ಷಣಗಣನೆ ಬಾಕಿಯಿದೆ. ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ದೇಶಗಳ 16 ವಿವಿಧ ನಗರಗಳ ಜಂಟಿ ಆತಿಥ್ಯದಲ್ಲಿ ಜೂನ್ 11ರಂದು ಆರಂಭವಾಗಲಿರುವ ಈ ಬಾರಿಯ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಬೃಹತ್ ಕ್ರೀಡಾಕೂಟವಾಗಿ ಹೊರಹೊಮ್ಮಲಿದೆ. ಜಗತ್ತಿನಾದ್ಯಂತ ಕೋಟ್ಯಂತರ ಕ್ರೀಡಾಭಿಮಾನಿಗಳಲ್ಲಿ ಈಗಾಗಲೇ ಈ ಟೂರ್ನಿಯ ಕುರಿತು ಭಾರೀ ನಿರೀಕ್ಷೆ, ಕಾತುರ ಮತ್ತು ಉಮ್ಮಸ್ಸು ಮನೆಮಾಡಿದ್ದು, ಫುಟ್‌ಬಾಲ್ ಜ್ವರ ಶಿಖರಕ್ಕೇರಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಈ ಬಾರಿಯ ವಿಶ್ವಕಪ್‌ನಲ್ಲಿ ಒಟ್ಟು 48 ತಂಡಗಳು ಭಾಗವಹಿಸುತ್ತಿರುವುದು ಟೂರ್ನಿಯ ಅತಿದೊಡ್ಡ ಬದಲಾವಣೆ ಹಾಗೂ ಪ್ರಮುಖ ಆಕರ್ಷಣೆಯಾಗಿದೆ. ಜೂನ್ 11ರಿಂದ ಆರಂಭಗೊಂಡು ಜುಲೈ 19ರವರೆಗೆ, ಅಂದರೆ ಬರೋಬ್ಬರಿ 39 ದಿನಗಳ ಸುದೀರ್ಘ ಕಾಲ ಈ ಕ್ರೀಡಾಕೂಟ ನಡೆಯಲಿದೆ. ಒಟ್ಟು 12 ಗುಂಪುಗಳಾಗಿ ವಿಂಗಡಿಸಲಾದ 48 ತಂಡಗಳು ಕಣಕ್ಕಿಳಿಯಲಿದ್ದು, ದಾಖಲೆಯ 104 ಪಂದ್ಯಗಳ ಮೂಲಕ ಫುಟ್‌ಬಾಲ್ ಪ್ರೇಮಿಗಳಿಗೆ ಪ್ರತಿದಿನವೂ ರಸದೌತಣ ಲಭ್ಯವಾಗಲಿದೆ. ಹಿಂದಿನ 32 ತಂಡಗಳ ಸ್ವರೂಪಕ್ಕೆ ಹೋಲಿಸಿದರೆ ಇದು ಫಿಫಾ ತೆಗೆದುಕೊಂಡ ಐತಿಹಾಸಿಕ ಹೆಜ್ಜೆಯಾಗಿದೆ.

ಇನ್ನು ಚಾಂಪಿಯನ್ಸ್‌ಗಳ ಇತಿಹಾಸವನ್ನು ನಿಖರವಾಗಿ ಗಮನಿಸುವುದಾದರೆ, ಕಳೆದ (2022ರ) ಬಾರಿಯ ಕತಾರ್ ವಿಶ್ವಕಪ್‌ನಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿ ಲಿಯೊನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ದಾಖಲೆ ದಕ್ಷಿಣ ಅಮೆರಿಕಾದ ದಿಗ್ಗಜ ಬ್ರೆಜಿಲ್ ತಂಡದ ಹೆಸರಿನಲ್ಲಿದೆ. ಫುಟ್‌ಬಾಲ್ ಸಾಮ್ರಾಟ ದಿವಂಗತ ಪೆಲೆ ಅವರ ನಾಡಾದ ಬ್ರೆಜಿಲ್ ಇದುವರೆಗೆ ಒಟ್ಟು 5 ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡು ಅಗ್ರಸ್ಥಾನದಲ್ಲಿದೆ.

2026ರ ವಿಶ್ವಕಪ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳ ಲೆಕ್ಕಾಚಾರವನ್ನು ಕ್ರೀಡಾ ಪಂಡಿತರು ಈಗಾಗಲೇ ಆರಂಭಿಸಿದ್ದಾರೆ. ಹಾಲಿ ಚಾಂಪಿಯನ್ ಅರ್ಜೆಂಟೀನಾ, ಬಲಿಷ್ಠ ಆಟಗಾರರನ್ನು ಹೊಂದಿರುವ ಫ್ರಾನ್ಸ್, ಯುವ ಪ್ರತಿಭೆಗಳಿರುವ ಇಂಗ್ಲೆಂಡ್, ಅನುಭವಿ ಬ್ರೆಜಿಲ್ ಮತ್ತು ಸ್ಪೇನ್ ತಂಡಗಳು ಪ್ರಶಸ್ತಿ ಗೆಲ್ಲುವ ಮುಂಚೂಣಿ ರೇಸ್‌ನಲ್ಲಿವೆ. ಇವುಗಳ ಜೊತೆಗೆ ಜರ್ಮನಿ ಹಾಗೂ ಪೋರ್ಚುಗಲ್ ಕೂಡ ಪ್ರಬಲ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದ್ದು, ಈ ಬಾರಿಯ ಟ್ರೋಫಿ ಯಾರ ಪಾಲಾಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಇದನ್ನು ಓದಿದ್ದೀರಾ? ದಬ್ಬಾಳಿಕೆಗೆ ಬೆದರದ ಹೆಜ್ಜೆ: ವಿದೇಶದಲ್ಲಿ ಒಂದಾದ ಅಫ್ಘಾನ್ ಮಹಿಳಾ ಫುಟ್ಬಾಲ್ ತಂಡ

ಕೇವಲ ಕ್ರೀಡೆಯಾಗಿ ಮಾತ್ರವಲ್ಲದೆ, ಈ ವಿಶ್ವಕಪ್‌ನಿಂದ ಬೃಹತ್ ಮಟ್ಟದ ಆರ್ಥಿಕ ವಹಿವಾಟು ಕೂಡ ನಡೆಯಲಿದೆ. ಫಿಫಾ (FIFA) ಸಂಸ್ಥೆಗೆ ಈ ಬಾರಿ ಸುಮಾರು 11 ಶತಕೋಟಿ ಡಾಲರ್‌ಗಳಷ್ಟು (ಅಂದಾಜು 92 ಸಾವಿರ ಕೋಟಿ ರೂ.) ದಾಖಲೆಯ ಆದಾಯ ನಿರೀಕ್ಷಿಸಲಾಗಿದೆ. ಟಿಕೆಟ್ ಮಾರಾಟ, ಪ್ರಸಾರ ಹಕ್ಕು, ಪ್ರವಾಸೋದ್ಯಮ ಹಾಗೂ ಪ್ರಾಯೋಜಕತ್ವದಿಂದ ಒಟ್ಟಾರೆ ಜಾಗತಿಕ ಆರ್ಥಿಕತೆಯ ಮೇಲೆ ಸುಮಾರು 40 ಶತಕೋಟಿ ಡಾಲರ್‌ಗಳಷ್ಟು (ಸುಮಾರು 3.3 ಲಕ್ಷ ಕೋಟಿ ರೂ. – ಇದು ಬಿಹಾರ – ಆಂಧ್ರ ಪ್ರದೇಶದ ಬಜೆಟ್‌ಗೆ ಸಮ) ಆರ್ಥಿಕ ವಹಿವಾಟು ನಡೆಯಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಭಾರತೀಯ ಫುಟ್‌ಬಾಲ್ ಅಭಿಮಾನಿಳು ಕೂಡ ಅತೀ ಆಸಕ್ತಿಯಿಂದ ಫುಟ್‌ಬಾಲ್‌ ಹಬ್ಬವನ್ನು ವೀಕ್ಷಿಸುತ್ತಾರೆ. ಭಾರತದಲ್ಲಿ 2026ರ ಫಿಫಾ ವಿಶ್ವಕಪ್‌ನ ಅಧಿಕೃತ ಪ್ರಸಾರ ಹಕ್ಕನ್ನು ಝೀ ಟೀವಿ ನೆಟ್‌ವರ್ಕ್‌ ಪಡೆದುಕೊಳ್ಳುವುದು ಖಚಿತವಾಗಲಿದೆ. ಹಾಗಾದರೆ ಝೀ5, ಝೀ ಸಮೂಹದ ಕ್ರೀಡಾ ಚಾನೆಲ್‌ಗಳಲ್ಲಿ ಫಿಫಾ ಪ್ರಸಾರವಾಗಲಿದೆ.

ಟೂರ್ನಿಯ ಹೊಸ ಸ್ವರೂಪದ ಅಡಿಯಲ್ಲಿ ನಾಕೌಟ್ ಹಂತ ಮತ್ತಷ್ಟು ರೋಚಕವಾಗಿರಲಿದೆ. 48 ತಂಡಗಳಿಗೆ ಅವಕಾಶ ನೀಡಿರುವುದರಿಂದ, ಗುಂಪು ಹಂತದ ನಂತರ ‘ರೌಂಡ್ ಆಫ್ 32’ ಎಂಬ ಹೊಸ ನಾಕೌಟ್ ಹಂತ ಸೇರ್ಪಡೆಯಾಗಿದೆ. 12 ಗುಂಪುಗಳ ಪೈಕಿ ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಹಾಗೂ ಅತ್ಯುತ್ತಮ 8 ಮೂರನೇ ಸ್ಥಾನಿ ತಂಡಗಳು ಈ ಹಂತಕ್ಕೆ ಲಗ್ಗೆ ಇಡಲಿವೆ. ಇದರಿಂದಾಗಿ ಪ್ರತಿ ಪಂದ್ಯಕ್ಕೂ ಮಾಡು ಇಲ್ಲವೆ ಮಡಿ ಎಂಬ ಸ್ಥಿತಿ ನಿರ್ಮಾಣವಾಗಲಿದ್ದು, ಪ್ರೇಕ್ಷಕರಿಗೆ ರೋಚಕ ಕ್ಷಣಗಳು ಖಚಿತವಾಗಿವೆ.

ಜೂನ್ 11 ರಿಂದ ಜೂನ್ 27, 2026ರವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿವೆ. ಜೂನ್ 28 ರಿಂದ ಜುಲೈ 3ರವರೆಗೆ ‘ರೌಂಡ್ ಆಫ್ 32’, ಜುಲೈ 4 ರಿಂದ 7ರವರೆಗೆ ‘ರೌಂಡ್ ಆಫ್ 16’ (ಪ್ರೀ-ಕ್ವಾರ್ಟರ್ಸ್) ಹಾಗೂ ಜುಲೈ 9 ರಿಂದ 11ರವರೆಗೆ ಕ್ವಾರ್ಟರ್ ಫೈನಲ್ಸ್ ಜರುಗಲಿವೆ. ಜುಲೈ 14 ಮತ್ತು 15ರಂದು ಸೆಮಿಫೈನಲ್ಸ್, ಜುಲೈ 18ರಂದು ಮೂರನೇ ಸ್ಥಾನಕ್ಕಾಗಿ ಪಂದ್ಯ ನಡೆಯಲಿದ್ದು, ಜುಲೈ 19ರಂದು ನ್ಯೂಜೆರ್ಸಿಯ ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ಅಂತಿಮ ಹಣಾಹಣಿ (ಫೈನಲ್) ನಡೆಯಲಿದೆ. ಬಹುತೇಕ ಪಂದ್ಯಗಳು ಭಾರತೀಯ ಕಾಲಮಾನದಲ್ಲಿ ಮಧ್ಯರಾತ್ರಿ 12.30, ರಾತ್ರಿ. 3.30, 9.30 ಹಾಗೂ ಕೆಲವು ಪಂದ್ಯಗಳು ಮುಂಜಾನೆ 6.30 ಕ್ಕೆ ಪ್ರಸಾರವಾಗಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾತ್ರೋರಾತ್ರಿ ತುರ್ತು ವಿಚಾರಣೆ ಕೋರಿ ದೆಹಲಿ ಹೈಕೋರ್ಟ್ ಮೊರೆಹೋದ ಸಿಜೆಪಿ ನಾಯಕರು

ತಮ್ಮ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ)...

ಹೊರದೇಶಗಳ ದೊಂಬಿಯನ್ನು ಭಾರತದ ಯುವ ಹೋರಾಟಕ್ಕೆ ಸಮೀಕರಿಸುತ್ತಿರುವ ʼಮಡಿಲ ಮಾಧ್ಯಮʼಗಳು; ಇದೇನಾ ಪತ್ರಿಕೋದ್ಯಮ?

ಹೊರದೇಶಗಳ ಬೀದಿಗಳಲ್ಲಿ ನಡೆಯುವ ದೊಂಬಿ, ಲೂಟಿಗೂ, ಭಾರತದ ಯುವಕರು ಸಂವಿಧಾನದತ್ತ ಹಕ್ಕಿಗಾಗಿ...

ಪ್ರಧಾನಿ ಮೋದಿ ಜೊತೆ ನಾಳೆ ಖರ್ಗೆ ಸಭೆ: ಎಸ್‌ಐಆರ್, ಕ್ಷೇತ್ರ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ ಕುರಿತು ಚರ್ಚೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಕ್ಷೇತ್ರ ಮರುವಿಂಗಡಣೆ ಮತ್ತು...

ಏಷ್ಯನ್ ಪ್ಯಾರಾ ಗೇಮ್ಸ್: ಮಹಿಳೆಯರ 200 ಮೀಟರ್ಸ್ ಓಟದಲ್ಲಿ ಸಿಮ್ರಾನ್‌ಗೆ ಚಿನ್ನ, ತೇಜಲ್‌ಬೆನ್‌ಗೆ ಕಂಚು

ಮಂಗಳವಾರ ಜಪಾನಿನ ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ 200...