ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 280 ರನ್‌ಗಳಿಂದ ಗೆದ್ದು ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಭಾರತೀಯ ಸ್ಟಾರ್ ಸ್ಪಿನ್ನರ್ ಆರ್ ಅಶ್ವಿನ್ ಅವರ ಆರು ವಿಕೆಟ್‌ಗಳ ನೆರವಿನಿಂದ ಭಾರತ ಬಾಂಗ್ಲಾದೇಶವನ್ನು ಅಲೌಟ್ ಮಾಡಿದೆ. ಉಭಯ ತಂಡಗಳು ಕಾನ್ಪುರದಲ್ಲಿ 2ನೇ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
ಮೊದಲ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂತೊ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಇದರಿಂದಾಗಿ ಭಾರತ ಮೊದಲೇ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿಯಬೇಕಾಯಿತು.
ಇದನ್ನು ಓದಿದ್ದೀರಾ? T20 ವಿಶ್ವಕಪ್ | ಆಸೀಸ್-ಬಾಂಗ್ಲಾದೇಶ-ಅಫ್ಘಾನ್; ಮೂವರಿಗೂ ಇದೆ ಸೆಮಿಫೈನಲ್ ಅವಕಾಶ; ಹೇಗೆ?
ಟೀಮ್ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್ (113) ಶತಕ ಸಿಡಿಸಿದ್ದು, ರವೀಂದ್ರ ಜಡೇಜಾ (86) ಹಾಗೂ ಯಶಸ್ವಿ ಜೈಸ್ವಾಲ್ (56) ಅರ್ಧಶತಕ ಬಾರಿಸಿದರು. ಒಟ್ಟಾಗಿ ಭಾರತ ತಂಡ 371 ರನ್ ಪಡೆದು ಆಲೌಟ್ ಆಯಿತು.
ಇದರ ಬಳಿಕ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡವು ಕೇವಲ 149 ರನ್‌ಗಳನ್ನು ಪಡೆದು ಆಲೌಟ್ ಆಗಿದೆ.
A game-changing TON 💯 & 6⃣ Wickets! 👌 👌
— BCCI (@BCCI) September 22, 2024
For his brilliant all-round show on his home ground, R Ashwin bags the Player of the Match award 👏 👏
Scorecard ▶️ https://t.co/jV4wK7BOKA #TeamIndia | #INDvBAN | @ashwinravi99 | @IDFCFIRSTBank pic.twitter.com/Nj2yeCzkm8
