ಐಪಿಎಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್‌ಸಿಬಿ ಸೇಡು ತೀರಿಸಿಕೊಂಡಿದ್ದು, ಏಳು ವಿಕೆಟ್‌ಗಳ ಅಂತರದ ಜಯ ಗಳಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂಜಾಬ್ ವಿರುದ್ಧ ಸೋಲು ಕಂಡಿದ್ದ ಆರ್‌ಸಿಬಿ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂಜಾಬ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
ಇದನ್ನು ಓದಿದ್ದೀರಾ? ಐಪಿಎಲ್ 2025 | ಇಂದು ಆರ್‌ಸಿಬಿ – ಪಂಜಾಬ್ ಪಂದ್ಯ
ಆರ್‌ಸಿಬಿ ಬೌಲರ್‌ಗಳ ದಾಳಿಗೆ ಬೆಚ್ಚಿದ ಪಂಜಾಬ್ ದಾಂಡಿಗರು ಆರು ವಿಕೆಟ್ ನಷ್ಟಕ್ಕೆ 157 ರನ್‌ಗಳನ್ನಷ್ಟೇ ಗಳಿಸಿದರು. ಆರ್‌ಸಿಬಿ 158 ರನ್‌ಗಳ ಗುರಿಯನ್ನು ಬೆನ್ನತ್ತಲು ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ ಸಹಾಯ ಮಾಡಿದರು.
Smacking them with ease 🤌
— IndianPremierLeague (@IPL) April 20, 2025
Virat Kohli is in the mood to finish this early 🔥
Updates ▶ https://t.co/6htVhCbTiX#TATAIPL | #PBKSvRCB | @imVkohli pic.twitter.com/iuT58bJY2A
ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 73 ರನ್ ಗಳಿಸಿ ಔಟಾಗದೆ ಉಳಿದರೆ, ಪಡಿಕ್ಕಲ್ 61 ರನ್ ಗಳಿಸಿದ್ದಾರೆ. ಇವರಿಬ್ಬರ ನೆರವಿನಿಂದ ಆರ್‌ಸಿಬಿ 18.5 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ.
