ಸನ್ ರೈಸರ್ಸ್ ಹೈದರಾಬಾದ್ ನೀಡಿದ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ,ತಂಡದ ಬೌಲರ್‌ಗಳು ಹಾಗೂ ಬ್ಯಾಟ್ಸ್‌ಮನ್‌ಗಳ ಸಾಂಘಿಕ ಪ್ರಯತ್ನದಿಂದ ಗೆಲುವು ಸಾಧಿಸಿತು. ಈ ಮೂಲಕ ಶುಭಮನ್ ಗಿಲ್ ನೇತೃತ್ವದ ತಂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡನೇ ಜಯ ಪಡೆಯಿತು.
ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎಸ್‌ಆರ್‌ಹೆಚ್ ನೀಡಿದ 163 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡ 19.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗೆಲುವು ಸಾಧಿಸಿತು.
ಗುಜರಾತ್ ಪರ ನಾಯಕ ಶುಭಮನ್ ಗಿಲ್ 36 (28 ಎಸೆತ, 2 ಬೌಂಡರಿ, 1 ಸಿಕ್ಸ್), ವೃದ್ಧಿಮಾನ್ ಶಾ 25 (13 ಚೆಂಡು, 1 ಬೌಂಡರಿ, ಎರಡು ಸಿಕ್ಸ್), ಸಾಯಿ ಸುದರ್ಶನ್ 45( 36 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಡೇವಿಡ್ ಮಿಲ್ಲರ್ ಅಜೇಯ 44 (27 ಚೆಂಡು, 4 ಬೌಂಡರಿ, 2 ಸಿಕ್ಸ್) ರನ್ ಗಳಿಸಿ ಗೆಲುವಿನ ರೂವಾರಿಗಳಾದರು.
ಎಸ್ಆರ್‌ಹೆಚ್ ಪರ ಶಹಬಾಜ್, ಪ್ಯಾಟ್ ಕಮ್ಮಿನ್ಸ್ ಹಾಗೂ ಮಾಯಾಂಕ್ ಮಾರ್ಕಾಂಡೆ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣೆ – ಐಪಿಎಲ್ ಕ್ರಿಕೆಟ್‌ನಲ್ಲಿ ಅಪ್ಪ-ಮಗನ ಆಟ
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟ್ ಮಾಡಿದ ಎಸ್‌ಆರ್‌ಹೆಚ್ ತಂಡ ಟಾಸ್ ಗೆದ್ದ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡರು.
ಎರಡು ಬೌಂಡರಿಗಳೊಂದಿಗೆ 16 ರನ್ ಬಾರಿಸಿದ್ದ ಮಾಯಾಂಕ್ ಅಗರವಾಲ್ 5ನೇ ಓವರ್‌ನಲ್ಲಿ ಒಮರ್‌ಜಾಯಿ ಬೌಲಿಂಗ್‌ನಲ್ಲಿ ಔಟಾದರು. ಹಿಂದಿನ ಪಂದ್ಯದಲ್ಲಿ ಭರ್ಜರಿ ಆಟವಾಡಿದ ಟ್ರಾವಿಸ್ ಹೆಡ್ 7ನೇ ಓವರ್‌ನಲ್ಲಿ 3 ರನ್ ಗಳಿಸಿ 19 ರನ್ ಗಳಿಸಿ ಪೆವಿಲಿಯನ್‌ಗೆ ತೆರಳಿದರು.
ಕಳೆದ ಪಂದ್ಯದಲ್ಲಿ ಸ್ಪೋಟಕ ಆಟವಾಡಿದ್ದ ಅಭಿಷೇಕ್ ಶರ್ಮಾ ಇಂದು ಕೂಡ ಬ್ಯಾಟ್ ಬೀಸುತ್ತಾ ಲಯ ಕಂಡುಕೊಳ್ಳಲು ಶುರು ಮಾಡಿದರು. ಆದರೆ 10ನೇ ಓವರ್‌ನ ಕಡೆಯ ಚೆಂಡಿನಲ್ಲಿ ಮೋಹಿತ್ ಶರ್ಮಾ ಮಾಡಿದ ಬೌಲಿಂಗ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್‌ಗೆ ಕ್ಯಾಚ್ ನೀಡಿ ಔಟಾದರು. ಅಭಿಷೇಕ್‌ನ 20 ಎಸೆತಗಳ 29 ರನ್‌ಗಳ ಆಟದಲ್ಲಿ 2 ಬೌಂಡರಿ ಎರಡು ಸಿಕ್ಸರ್‌ಗಳಿದ್ದವು.
ಮುಂಬೈ ತಂಡದ ವಿರುದ್ಧ ಸಿಕ್ಸರ್‌ಗಳ ಸುರಿಮಳೆ ಸುರಿದಿದ್ದ ಹೆನ್‌ರಿಚ್ ಕ್ಲಾಸೆನ್ ಸ್ಪೋಟಕವಾಗಿ ಆಟವಾಡಲು ಶುರು ಮಾಡಿದರು. ಆದರೆ 14 ನೇ ಓವರ್‌ನಲ್ಲಿ ರಶೀದ್ ಖಾನ್ ಬೌಲಿಂಗ್ ದಾಳಿಗೆ ಸಿಲುಕಿ 24(13 ಎಸೆತ, 2 ಸಿಕ್ಸರ್, 1 ಬೌಂಡರಿ) ರನ್‌ಗಳಿಗೆ ಬೌಲ್ಡ್ ಆದರು.
ಮಾರ್ಕಾಮ್ 17 ರನ್ ಗಳಿಸಿ ಉಮೇಶ್ ಯಾದವ್ ಬೌಲಿಂಗ್‌ನಲ್ಲಿ ಔಟಾದರು. ಅಂತಿಮವಾಗಿ ಕೊನೆಯಲ್ಲಿ ಬ್ಯಾಟ್ ಬೀಸಿದ ಅಬ್ದುಲ್ ಸಮದ್(29) ಹಾಗೂ ಶಹಬಾಜ್ ಅಹಮದ್(22) ಅವರ ಆಟದೊಂದಿಗೆ ಎಸ್‌ಆರ್‌ಹೆಚ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು.
ಗುಜರಾತ್ ಪರ ಒಮರ್ಜಾಯ್,ಉಮೇಶ್ ಯಾದವ್,ರಶೀದ್ ಖಾನ್, ನೂರ್ ಅಹ್ಮದ್ ಹಾಗೂ ಮೋಹಿತ್ ಶರ್ಮಾ ತಲಾ ಒಂದೊಂದು ವಿಕೆಟ್ ಕಬಳಿಸಿದರು
