ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 18ನೇ ಆವೃತ್ತಿಯ ಐಪಿಎಲ್ ಯಾವಾಗ ಆರಂಭ ಎಂಬುದರ ಬಗ್ಗೆ ಮಾಹಿತಿ ಹೊರಬಿದ್ದಿದೆ.
2025ರ ಐಪಿಎಲ್ ಟೂರ್ನಿಯು ಮಾರ್ಚ್ 14ರಿಂದ ಮೇ 25ರ ವರೆಗೆ ನಡೆಯಲಿದೆ. ಆದೇ ರೀತಿ 2026ರ ಐಪಿಎಲ್ ಟೂರ್ನಿಯು ಮಾರ್ಚ್ 15 ರಿಂದ ಮೇ 31 ಮತ್ತು 2027ರ ಐಪಿಎಲ್ ಟೂರ್ನಿಯು ಮಾರ್ಚ್ 14ರಿಂದ ಮೇ 30 ವರೆಗೆ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಶುಕ್ರವಾರ ಪ್ರಕಟಿಸಿದೆ.
2025 ರ ಐಪಿಎಲ್ ಮೆಗಾ ಹರಾಜಿಗೆ ವೇದಿಕೆ ಸಜ್ಜಾಗಿದೆ. ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ 574 ಆಟಗಾರರ ಬಿಡ್ಡಿಂಗ್ ನಡೆಯಲಿದೆ. ಆದರೆ ಅದಕ್ಕೂ ಮುನ್ನ ಮುಂದಿನ ಆವೃತ್ತಿಯ (18ನೇ ಆವೃತ್ತಿಯ) ಐಪಿಎಲ್ ದಿನಾಂಕ ಘೋಷಣೆಯಾಗಿದೆ.