ಐಪಿಎಲ್ 2023 |ರೋಚಕ ಪಂದ್ಯದಲ್ಲಿ ಮಿಂಚಿದ ರವೀಂದ್ರ ಜಡೇಜಾ; ಚೆನ್ನೈ ಸೂಪರ್‌ ಕಿಂಗ್ಸ್‌ 5ನೇ ಬಾರಿ ಚಾಂಪಿಯನ್

Date:

Advertisements

ಆಲ್‌ರೌಂಡರ್‌ ರವಿಂದ್ರ ಜಡೇಜಾ ಅಂತಿಮ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್‌ ಹಾಗೂ ಬೌಂಡರಿ ಸಿಡಿಸುವ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಐದನೇ ಬಾರಿಗೆ ಐಪಿಎಲ್ ಟ್ರೋಫಿ ತಂದುಕೊಟ್ಟರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಹೆಸರಿನಲ್ಲಿ ಇದ್ದ ದಾಖಲೆಯನ್ನು ಚೆನ್ನೈ ತಂಡ ಸರಿಗಟ್ಟಿತು.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌2023ರ 16ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ 171 ರನ್‌ಗಳ ಗುರಿಯನ್ನು 15ನೇ ಓವರ್‌ನ ಕೊನೆಯ ಎಸೆತದಲ್ಲಿ ಜಯ ದಾಖಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಚೆನ್ನೈ ಬ್ಯಾಟಿಂಗ್‌ ಶುರುವಾದ ಮೊದಲ ಓವರ್‌ನಲ್ಲಿಯೇ ಸುರಿದ ಮಳೆಯಿಂದಾಗಿ ಎರಡೂವರೆ ಗಂಟೆ ತಡವಾಗಿ ಪಂದ್ಯ ಆರಂಭವಾಯಿತು. ಆಟವನ್ನು ರಾತ್ರಿ 12.10ಕ್ಕೆ ಮುಂದುವರಿಸಲು ಅಂಪೈರ್ ಗಳು ನಿರ್ಧರಿಸಿದರು. ಡೆಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 15 ಓವರ್‌ಗಳಿಗೆ ಸೀಮಿತಗೊಳಿಸಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡಕ್ಕೆ ಗುಜರಾತ್‌ ಟೈಟಾನ್ಸ್ ನೀಡಿದ 215 ರನ್‌ಗಳ ಗುರಿಗೆ ಬದಲಾಗಿ 171 ರನ್‌ಗಳ ಗುರಿ ನೀಡಲಾಯಿತು.

Advertisements

ಗುಜರಾತ್‌ ನೀಡಿದ ಸವಾಲನ್ನು ಬೆನ್ನಟ್ಟಿದ ಚೆನ್ನೈ ತಂಡ, ಶಿವಂ ದುಬೆ ಅಜೇಯ 32, ರವೀಂದ್ರ ಜಡೇಜಾ ಅಜೇಯ 15, ಡೆವೋನ್‌ ಕಾನ್ವೆ(47),ಅಜಿಂಕ್ಯಾ ರಹಾನೆ(27),ಅಂಬಟಿ ರಾಯುಡು(19) ಹಾಗೂ ಋತುರಾಜ್‌ ಗಾಯಕ್ವಾಡ್ (26) ಅವರ ಸಮಯೋಚಿತ ಹಾಗೂ ಸ್ಫೋಟಕ ಆಟದ ನೆರವಿನಿಂದ 5 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು.

ಗುಜರಾತ್‌ ಪರ ನೂರ್ ಅಹ್ಮದ್ 17/2 ಹಾಗೂ ಮೋಹಿತ್ ಶರ್ಮಾ 36/3 ವಿಕೆಟ್‌ ಪಡೆದು ಸೋಲಿನಲ್ಲೂ ಮಿಂಚಿದರು.

ಆರಂಭಿಕರಾಗಿ ಬ್ಯಾಟಿಂಗ್‌ ಮಾಡಿದ ಋತುರಾಜ್‌ ಗಾಯಕ್‌ವಾಡ್ ಹಾಗೂ ಡೆವೋನ್‌ ಕಾನ್ವೆ ಸ್ಟೋಟಕ ಬ್ಯಾಟಿಂಗ್‌ ಶುರು ಮಾಡಿದರು. ಋತುರಾಜ್‌ ಕೇವಲ 16 ಚೆಂಡುಗಳಲ್ಲಿ3 ಬೌಂಡರಿ ಹಾಗೂ 1 ಸಿಕ್ಸರ್‌ನೊಂದಿಗೆ 26 ರನ್‌ ಗಳಿಸಿ ಔಟಾದರೆ, ಕಾನ್ವೆ ಕೇವಲ 25 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್‌ನೊಂದಿಗೆ 47 ರನ್ ಚಚ್ಚಿದರು.

ನಂತರ ಆಗಮಿಸಿದ ನಾಲ್ಕನೇ ಕ್ರಮಾಂಕದ ಬ್ಯಾಟ್ಸಮೆನ್‌ ಅಜಿಂಕ್ಯ ರಹಾನೆ ಕೂಡ ಸ್ಪೋಟಕ ಬ್ಯಾಟಿಂಗ್‌ ಆಡಿ 13 ಚೆಂಡುಗಳಲ್ಲಿ 2 ಸಿಕ್ಸರ್ ಹಾಗೂ 2 ಬೌಂಡರಿಗಳೊಂದಿಗೆ 27 ರನ್‌ ಬಾರಿಸಿ ಮೋಹಿತ್‌ ಶರ್ಮಾ ಬೌಲಿಂಗ್‌ನಲ್ಲಿ ಔಟಾದರು.

ಇದಕ್ಕೂ ಮೊದಲು ಟಾಸ್‌ ಸೋತ ಗುಜರಾತ್‌ ಟೈಟಾನ್ಸ್ ತಂಡ ಸಾಯಿ ಸುದರ್ಶನ್ ಸ್ಫೋಟಕ ಬ್ಯಾಟಿಂಗ್ ಹಾಗೂ ವೃದ್ಧಿಮಾನ್ ಸಾಹ ಆಕರ್ಷಕ ಅರ್ಧ ಶತಕದ ನೆರವಿನಿಂದ ಚೆನ್ನೈ ಸೂಪರ್‌ಕಿಂಗ್ಸ್ ತಂಡಕ್ಕೆ 215 ರನ್‌ ಗುರಿ ನೀಡಿತು.

ಶುಭಮನ್ ಗಿಲ್ ಹಾಗೂ ವೃದ್ದಿಮಾನ್ ಸಾಹ ಜೊತೆಯಾಟಕ್ಕೆ ಚೆನ್ನೈ ಬೌಲರ್‌ಗಳು ಸುಸ್ತಾದರು. ಕಳೆದ ಕೆಲ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದ ವೃದ್ಧಿಮಾನ್‌ ಸಾಹ ಫೈನಲ್‌ನಲ್ಲಿ ಅಬ್ಬರಿಸಿದರು.

ಆರಂಭದಲ್ಲಿ 20 ಚೆಂಡುಗಳಲ್ಲಿ 7 ಬೌಂಡರಿಗಳೊಂದಿಗೆ  39 ರನ್ ಸಿಡಿಸಿ ಶುಭಮನ್ ಗಿಲ್ ಧೋನಿ ಮಿಂಚಿನ ಸ್ಟಂಪಿಂಗ್‌ಗೆ ಔಟ್ ಆದರು. ಗಿಲ್ ವಿಕೆಟ್ ಪತನ ಬಳಿಕ ಸಾಹ ಹಾಗೂ ಸಾಯಿ ಸುದರ್ಶನ್ ಆರ್ಭಟ ಆರಂಭಗೊಂಡಿತು. ಸಾಹ 39 ಎಸೆತದಲ್ಲಿ 5 ಬೌಂಡರಿ 1 ಸಿಕ್ಸರ್‌ನೊಂದಿಗೆ 54 ರನ್ ಗಳಿಸಿ ಔಟಾದರು. ಆದರೆ ಸಾಯಿ ಸುದರ್ಶನ್ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದರು. 

ಬೌಂಡರಿ , ಸಿಕ್ಸರ್ ಆಟದ ಮೂಲಕ ಚೆನ್ನೈ ಬೌಲರ್‌ಗಳ ಬೆವರಿಳಿಸಿದರು. ಶತಕದ ಸಮೀಪದಲ್ಲಿದ್ದಾಗ ಸಾಯಿ ಸುದರ್ಶನ್ ಪತಿರಾಣ ಬೌಲಿಂಗ್‌ ಎಲ್‌ಬಿ ಬಲೆಗೆ ಬಿದ್ದರು. 47 ಎಸೆತದಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ 96 ರನ್ ಸಿಡಿಸಿದರು.

ರಶೀದ್ ಖಾನ್ ಈ ಪಂದ್ಯದಲ್ಲಿ ಅಬ್ಬರಿಸಲಿಲ್ಲ. ಆದರೆ ನಾಯಕ ಹಾರ್ದಿಕ್ ಪಾಂಡ್ಯ 12 ಎಸೆತದಲ್ಲಿ ಅಜೇಯ 21 ರನ್ ಸಿಡಿಸಿದರು. ಅಂತಿಮವಾಗಿ ಗುಜರಾತ್ ಟೈಟಾನ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಪೇರಿಸಿತು. 

ಪಂದ್ಯ ಶ್ರೇಷ್ಠ; ಡೆವೋನ್‌ ಕಾನ್ವೆ

ಸರಣಿ ಶ್ರೇಷ್ಠ; ಶುಭಮನ್‌ ಗಿಲ್‌

ಗುಜರಾತ್‌ ಆಟಗಾರರಿಗೆ ಒಲಿದ ಆರೆಂಜ್‌, ಪರ್ಪಲ್‌ ಕ್ಯಾಪ್‌

ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದವರಿಗೆ ನೀಡುವ ‘ಆರೆಂಜ್‌ ಕ್ಯಾಪ್‌’ ಮತ್ತು ಹೆಚ್ಚು ವಿಕೆಟ್ ಕಬಳಿಸಿದವರಿಗೆ ಕೊಡುವ ‘ಪರ್ಪಲ್‌ ಕ್ಯಾಪ್‌’ ಗುಜರಾತ್ ಟೈಟಾನ್ಸ್ ತಂಡದ ಆಟಗಾರರ ಪಾಲಾದವು.

ಟೂರ್ನಿಯುದ್ದಕ್ಕೂ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ ಭರವಸೆಯ ಬ್ಯಾಟರ್‌ ಶುಭಮನ್ ಗಿಲ್‌ ‘ಆರೆಂಜ್‌ ಕ್ಯಾಪ್‌’ ಮತ್ತು ಅತಿಹೆಚ್ಚು ವಿಕೆಟ್ ಕಬಳಿಸಿದ ಸಾಧನೆ ಮಾಡಿದ ಮೊಹಮ್ಮದ್‌ ಶಮಿ ‘ಪರ್ಪಲ್‌ ಕ್ಯಾಪ್‌’ ತೊಟ್ಟರು.

ಗಿಲ್‌ 17 ಪಂದ್ಯಗಳಲ್ಲಿ ಮೂರು ಶತಕ ಸಹಿತ 890 ರನ್‌ ಗಳಿಸಿದ್ದಾರೆ. ಶಮಿ ಕೂಡ ಇಷ್ಟೇ ಪಂದ್ಯಗಳಿಂದ 28 ವಿಕೆಟ್‌ ಉರುಳಿಸಿದ್ದಾರೆ.

ಅತಿ ಹೆಚ್ಚು ರನ್ ಗಳಿಸಿದ ಐವರು
01.ಶುಭಮನ್‌ ಗಿಲ್‌ (ಗುಜರಾತ್‌ ಟೈಟನ್ಸ್‌) – 890 ರನ್‌
02. ಪಫ್‌ ಡುಪ್ಲೆಸಿ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು) – 730 ರನ್‌
03. ಡೆವೋನ್‌ ಕಾನ್ವೆ (ಚೆನ್ನೈ ಸೂಪರ್‌ ಕಿಂಗ್ಸ್‌) – 672 ರನ್‌
04. ವಿರಾಟ್‌ ಕೊಹ್ಲಿ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು) – 639 ರನ್‌
05. ಯಶಸ್ವಿ ಜೈಸ್ವಾಲ್‌ (ರಾಜಸ್ಥಾನ ರಾಯಲ್ಸ್) – 625 ರನ್‌

ಅತಿ ಹೆಚ್ಚು ವಿಕೆಟ್‌ ಪಡೆದ ಐವರು
01. ಮೊಹಮ್ಮದ್‌ ಶಮಿ (ಗುಜರಾತ್‌ ಟೈಟನ್ಸ್‌) – 28 ವಿಕೆಟ್‌
02. ಮೋಹಿತ್‌ ಶರ್ಮಾ (ಗುಜರಾತ್‌ ಟೈಟನ್ಸ್‌) – 27 ವಿಕೆಟ್‌
03. ರಶೀದ್‌ ಖಾನ್ (ಗುಜರಾತ್‌ ಟೈಟನ್ಸ್‌) – 27 ವಿಕೆಟ್‌
04. ಪಿಯೂಶ್‌ ಚಾವ್ಲಾ (ಮುಂಬೈ ಇಂಡಿಯನ್ಸ್‌) – 22 ವಿಕೆಟ್‌
05. ಯಜುವೇಂದ್ರ ಚಾಹಲ್‌ (ರಾಜಸ್ಥಾನ ರಾಯಲ್ಸ್) – 21 ವಿಕೆಟ್‌

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಚಾಂಪಿಯನ್‌ಶಿಪ್‌ | 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚು ಗೆದ್ದ ಮನು ಭಾಕರ್

ಕಝಾಕಿಸ್ತಾನದ ಶಿಮ್ಕೆಂಟ್‌ನಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 10 ಮೀಟರ್...

ಬುಲಾ ಚೌಧರಿ ಪದ್ಮಶ್ರೀ ಪದಕ ಕಳವು: ‘ಎಲ್ಲವನ್ನೂ ಕಳೆದುಕೊಂಡೆ’ ಎಂದ ಈಜುಪಟು

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಮ್ಮ ಪೂರ್ವಜರ ಮನೆಯಿಂದ ಪದ್ಮಶ್ರೀ ಪದಕ...

RCBಯದ್ದು ಕಳ್ಳ ಒಪ್ಪಂದ; ಆರ್‌ ಅಶ್ವಿನ್ ಬಹಿರಂಗ ಟೀಕೆ

2025ರ ಐಪಿಎಲ್‌ ಟೂರ್ನಿಗಾಗಿ ನಡೆದ ಮೆಗಾ ಹರಾಜಿನ ಸಮಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್...

ದಾವಣಗೆರೆ | ಸರ್ಕಾರಿ ಶಾಲೆ ಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆ ಸಿಕ್ಕರೆ ಅತ್ಯುನ್ನತ ಸಾಧನೆ, ಸಾಮರ್ಥ್ಯ ಅನಾವರಣ

"ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ಸರ್ಕಾರಿ ಶಾಲೆಗಳ ಮಕ್ಕಳು ಯಾವುದರಲ್ಲಿಯೂ ಕಡಿಮೆ...

Download Eedina App Android / iOS

X