ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಅವರು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆ ಗಾಲ್ಫ್ ಆಟವಾಡಿರುವ ದೃಶ್ಯ ಹಾಗೂ ಭಾವಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ದುಬೈ ಮೂಲದ ಉದ್ಯಮಿಯಾಗಿರುವ ಸಾಂಘ್ವಿ ಅವರು ಎಂ ಎಸ್ ಧೋನಿ ಜೊತೆಗಿದ್ದರು ಮತ್ತು ಅವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಧೋನಿ ಹಾಗೂ ಟ್ರಂಪ್ ಅವರ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ದಿನದ ಹಿಂದೆ, ಧೋನಿ ಮತ್ತು ಸಾಂಘ್ವಿ ಇಬ್ಬರು ಯುಎಸ್ ಓಪನ್ ಟೆನಿಸ್‌ನಲ್ಲಿ ಕಾಣಿಸಿಕೊಂಡರು.
ಧೋನಿ ಅವರು ಅಮೆರಿಕ ಪ್ರವಾಸದಲ್ಲಿದ್ದಾರೆ ಎಂಬುದನ್ನು ಅರಿತು ಸ್ವತಃ ಟ್ರಂಪ್ ಅವರೇ ಧೋನಿಯನ್ನು ಗಾಲ್ಫ್ ಆಟಕ್ಕೆ ಆಹ್ವಾನಿಸಿದ್ದರು. ಸೆಪ್ಟೆಂಬರ್ 6 ರಂದು, ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಕಾರ್ಲೋಸ್ ಅಲ್ಕರಾಜ್ ಮತ್ತು ಅಲೆಕ್ಸಾಂಡರ್ ಜ್ವೆರೆವ್ ನಡುವಿನ ಟೆನಿಸ್ ಆಟವನ್ನು ವೀಕ್ಷಿಸಲು ಧೋನಿ ಆರ್ಥರ್ ಆ್ಯಶ್ ಸ್ಟೇಡಿಯಂನಲ್ಲಿ ಹಾಜರಿದ್ದರು. ಇದರ ವಿಡಿಯೋ ಕೂಡ ಎರಡು ದಿನಗಳ ಹಿಂದೆ ವೈರಲ್ ಆಗಿತ್ತು.
ಈ ಸುದ್ದಿ ಓದಿದ್ದೀರಾ? ಏಷ್ಯಾ ಕಪ್ ಕ್ರಿಕೆಟ್ | 10 ವಿಕೆಟ್ ಗೆಲುವಿನೊಂದಿಗೆ ಸೂಪರ್ 4 ಪ್ರವೇಶಿಸಿದ ಭಾರತ
ಎಂ ಎಸ್ ಧೋನಿ ಅಮೆರಿಕಾ ಪ್ರವಾಸದಿಂದ ಶೀಘ್ರದಲ್ಲೇ ಭಾರತಕ್ಕೆ ಮರಳಲಿದ್ದು, ಐಪಿಎಲ್‌ನ 2024ನೇ ಆವೃತ್ತಿಗಾಗಿ ತಯಾರಿ ಆರಂಭಿಸಲಿದ್ದಾರೆ. 2023 ರಲ್ಲಿ ಐದನೇ ಐಪಿಎಲ್ ಟ್ರೋಪಿಯನ್ನು ಗೆದ್ದ ನಂತರ, ಧೋನಿ ಅವರು ಲೀಗ್‌ನಿಂದ ಇನ್ನೂ ನಿವೃತ್ತಿಯಾಗಿಲ್ಲ ಎಂದು ಹೇಳಿದ್ದರು.
ಈ ವರ್ಷದ ಆರಂಭದಲ್ಲಿ, ಮಹೇಂದ್ರ ಸಿಂಗ್ ಧೋನಿ ಮುಂಬೈ ಆಸ್ಪತ್ರೆಯಲ್ಲಿ ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದನೇ ಐಪಿಎಲ್ ಪ್ರಶಸ್ತಿ ದೊರಕಿಸಿಕೊಟ್ಟ ನಂತರ ಧೋನಿ ಅಹಮದಾಬಾದ್‌ನಿಂದ ಮುಂಬೈಗೆ ತೆರಳಿದ್ದರು. ಖ್ಯಾತ ಕ್ರೀಡಾ ಮೂಳೆ ಶಸ್ತ್ರಚಿಕಿತ್ಸಕ ಡಾ. ದಿನ್ಶಾ ಪಾರ್ದಿವಾಲಾ ಅವರನ್ನು ಭೇಟಿಯಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪಾರ್ದಿವಾಲಾ ಅವರು ರಿಷಬ್ ಪಂತ್ ಸೇರಿದಂತೆ ಹಲವು ಕ್ರಿಕೆಟರಿಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.