ಬುಧವಾರ ನಡೆದ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರ ಪುರುಷರ ಶಾಟ್ ಪುಟ್ ಎಫ್46 ಫೈನಲ್‌ನಲ್ಲಿ ಸಚಿನ್ ಖಿಲಾರಿ ಬೆಳ್ಳಿ ಪದಕ ಗೆದಿದ್ದಾರೆ.
ಶಾಟ್ ಪುಟ್ ಪಂದ್ಯದಲ್ಲಿ ಸಚಿನ್ ಖಿಲಾರಿ 16.32 ಮೀಟರ್ ಎಸೆತದೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕೆನಡಾದ ಗ್ರೆಗ್ ಸ್ಟೀವರ್ಟ್ 16.38 ಮೀಟರ್ ಅಂತರದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದು ಈ ಸೀಸನ್‌ನ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
ಇದನ್ನು ಓದಿದ್ದೀರಾ? ಪ್ಯಾರಾಲಿಂಪಿಕ್ಸ್ | ಡಿಸ್ಕಸ್ ಥ್ರೋ; ಬೆಳಿ ಗೆದ್ದ ಭಾರತದ ಯೋಗೇಶ್ ಕಥುನಿಯಾ
ಸಚಿನ್ ಖಿಲಾರಿ ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟ ಬಳಿಕ ಭಾರತವು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಗಳಿಸಿದ ಪದಕಗಳ ಸಂಖ್ಯೆಯು 21ಕ್ಕೆ ಏರಿಕೆಯಾಗಿದೆ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರಲ್ಲಿ ಭಾರತವು ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಗೆದ್ದ ಪದಕಕ್ಕಿಂತ ಅಧಿಕ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಮೂರು ವರ್ಷಗಳ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ 19 ಪದಕಗಳನ್ನು ಭಾರತ ಗೆದ್ದಿತ್ತು. ಈಗ ಆ ಸಾಧನೆಯನ್ನು ಮೀರಿ ಭಾರತವು ಈವರೆಗೆ 21 ಪದಕಗಳನ್ನು ಗಳಿಸಿದೆ. ಈ ಪೈಕಿ ಮೂರು ಚಿನ್ನ, 8 ಬೆಳ್ಳಿ, 10 ಕಂಚಿನ ಪದಕವಾಗಿದೆ.
Paris Paralympics: Sachin Sarjerao Khilari wins silver medal in the men's shot put – F46 event with the best throw of 16.32m.
— IANS (@ians_india) September 4, 2024
Nihd Yasser (14.21m) and Rohit Kumar (14.10m) finish eighth and ninth, respectively pic.twitter.com/MDhYxiHg37
