WPL| ಸತತ 5 ಜಯದೊಂದಿಗೆ ಪ್ಲೇಆಫ್ ಪ್ರವೇಶಿಸಿದ ಆರ್‌ಸಿಬಿ

Date:

ಗೌತಮಿ ನಾಯಕ್ ಅವರ ಸೊಗಸಾದ ಅರ್ಧಶತಕ ಹಾಗೂ ಬೌಲರ್‌ಗಳ ಸಾಂಘಿಕ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಸೋಮವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ 61 ರನ್‌ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು. ಅದರೊಂದಿಗೆ ಟೂರ್ನಿಯಲ್ಲಿ ಸತತ ಐದು ಗೆಲುವಿನೊಂದಿಗೆ ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆಯಿತು.

- Advertisement -

ಗುಜರಾತ್‌ನ ವಡೋದರದ ಕೋತಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ತಂಡಕ್ಕೆ ಗೌತಮಿ (73; 55ಎ, 4×7, 6×1) ಆಸರೆಯಾದರು. ಅವರ ಆಟದ ಬಲದಿಂದ ಮಂದಾನ ಬಳಗವು ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗೆ 178 ರನ್ ಗಳಿಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ...

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತದ ವಿರುದ್ಧ ಯೂರೋಪಿನ ಹಲವು ದೇಶಗಳಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಫ್ರಾನ್ಸ್‌ನಿಂದ ಇಟಲಿ, ಬೆಲ್ಜಿಯಂ, ಸ್ಪೇನ್...

ಬೆಳಗಾವಿ | ಅಲೆಮಾರಿಗಳಿಗೆ ಆಧಾರ್ ಕಾರ್ಡ್ ಸಮಸ್ಯೆ; ʼಈದಿನʼದ...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಸುಮಾರು 25ರಿಂದ 30 ವರ್ಷಗಳಿಂದ ವಾಸಿಸುತ್ತಿರುವ ಅಲೆಮಾರಿ ಸಮುದಾಯದವರ ಬದುಕಿನ ಕಥೆ ಕೇಳಿದರೆ ಎಂಥವರಿಗೂ ಕನಿಕರ ಬರುತ್ತದೆ. ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ...

ಶಿವಮೊಗ್ಗ | ಜಿ.ಪಂ., ತಾ.ಪಂ. ಚುನಾವಣೆ: ಗ್ರಾಮೀಣ ರಾಜಕೀಯದಲ್ಲಿ...

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತಿ (ಜಿ.ಪಂ.) ಹಾಗೂ ತಾಲೂಕು ಪಂಚಾಯತಿ (ತಾ.ಪಂ.) ಚುನಾವಣೆಗಳ ಕುರಿತು ರಾಜಕೀಯ ಚರ್ಚೆಗಳು ಮತ್ತು ನಿರೀಕ್ಷೆಗಳು ಹೆಚ್ಚುತ್ತಿವೆ. ದೀರ್ಘಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ನಡೆಯುತ್ತಿರುವ ಹಿನ್ನೆಲೆಯಲ್ಲಿ,...

ಸವಾಲಿನ ಗುರಿ ಬೆನ್ನಟ್ಟಿ ಜೈಂಟ್ಸ್‌ ತಂಡಕ್ಕೆ ಬಲಗೈ ವೇಗಿ ಸಾಯ್ಲಿ ಸತ್ಘರೆ (21ಕ್ಕೆ3) ಆಘಾತ ನೀಡಿದರು. ಟೂರ್ನಿಯಲ್ಲಿ ಎರಡನೇ ಪಂದ್ಯ ಆಡಿದ ಅವರು ಜೈಂಟ್ಸ್‌ ತಂಡದ ಪ್ರಮುಖ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಆರಂಭದಲ್ಲಿ ಬೆತ್‌ ಮೂನಿ (3; 4ಎ) ಹಾಗೂ ಸೋಫಿ ಡಿವೈನ್‌ (0; 4ಎ) ಅವರ ವಿಕೆಟ್‌ ಪಡೆದ ಸಾಯ್ಲಿ, ಅರ್ಧಶತಕ ಗಳಿಸಿದ್ದ ನಾಯಕಿ ಆ್ಯಷ್ಲೆ ಗಾರ್ಡನರ್‌ (54;43ಎ) ಅವರಿಗೂ ಪೆವಿಲಿಯನ್‌ ಹಾದಿ ತೋರಿಸಿದರು.

ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ನದೀನ್‌ ಡಿ ಕ್ಲರ್ಕ್‌ ಎರಡು ವಿಕೆಟ್‌ ಪಡೆದರೆ, ಲಾರೆನ್‌ ಬೆಲ್‌, ರಾಧಾ ಯಾದವ್‌ ಹಾಗೂ ಶ್ರೇಯಾಂಕಾ ಪಾಟೀಲ ಅವರು ತಲಾ ಒಂದು ವಿಕೆಟ್‌ ಪಡೆದರು.

ಇದನ್ನು ಓದಿದ್ದೀರಾ? WPLನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕನ್ನಡತಿ ಶ್ರೇಯಾಂಕಾ ಪಾಟೀಲ್

ಲೀಗ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಇದು ಸತತ ಐದನೇ ಗೆಲುವಾಗಿದ್ದು, ಈ ಸಾಧನೆ ಮಾಡಿದ ಮೊದಲ ತಂಡ ಎನಿಸಿತು.

ಇದಕ್ಕೆ ಮೊದಲು, ಲೀಗ್‌ನಲ್ಲಿ ಅಜೇಯವಾಗಿರುವ ಬೆಂಗಳೂರು ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭ ಆಟಗಾರ್ತಿ ಗ್ರೇಸ್‌ ಹ್ಯಾರಿಸ್ (1) ಮತ್ತು ಮೂರನೇ ಕ್ರಮಾಂಕದ ಜಾರ್ಜಿಯಾ ವೋಲ್ (1) ಅವರು ಕೇವಲ 9 ರನ್‌ಗಳಾಗುವಷ್ಟರಲ್ಲಿ ನಿರ್ಗಮಿಸಿದ್ದರು. ನಾಯಕಿ ಸ್ಮೃತಿ ಮಂದಾನ (26, 23 ಎಸೆತ) ಜೊತೆಗೂಡಿದ ಗೌತಮಿ ಮೂರನೇ ವಿಕೆಟ್‌ಗೆ 60 ರನ್ (47 ಎಸೆತ) ಸೇರಿಸಿ ಇನಿಂಗ್ಸ್‌ಗೆ ಸ್ಥಿರತೆ ಒದಗಿಸಿದರು.

ಗೌತಮಿ ಅವರು ರಿಚಾ ಘೋಷ್‌ (27; 20ಎ, 6×3) ಜೊತೆಗೂಡಿ ನಾಲ್ಕನೇ ವಿಕೆಟ್‌ಗೆ ಉಪಯುಕ್ತ 69 ರನ್ ಪೇರಿಸಿದರು. 18ನೇ ಓವರಿನಲ್ಲಿ ಗಾರ್ಡನರ್ ಬೌಲಿಂಗ್‌ನಲ್ಲಿ ಬೌಲ್ಡ್‌ ಆಗುವ ಮೂಲಕ ಗೌತಮಿ ಅವರ ಆಟ ಕೊನೆಗೊಂಡಿತು.

ಗುಜರಾತ್‌ ಜೈಂಟ್ಸ್‌ನ 18 ವರ್ಷ ವಯಸ್ಸಿನ ಮಧ್ಯಮ ವೇಗದ ಬೌಲರ್ ಹ್ಯಾಪಿ ಕುಮಾರಿ ಅವರು ಈ ಪಂದ್ಯದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದರು.

ಸಂಕ್ಷಿಪ್ತ ಸ್ಕೋರು: ಆರ್‌ಸಿಬಿ: 20 ಓವರುಗಳಲ್ಲಿ 6 ವಿಕೆಟ್‌ಗೆ 178 (ಸ್ಮೃತಿ ಮಂದಾನ 26, ಗೌತಮಿ ನಾಯಕ್ 73, ರಿಚಾ ಘೋಷ್‌ 27, ಕಾಶ್ವಿ ಗೌತಮ್ 38ಕ್ಕೆ2, ಗಾರ್ಡನರ್ 43ಕ್ಕೆ2).

ಗುಜರಾತ್ ಜೈಂಟ್ಸ್‌:20 ಓವರುಗಳಲ್ಲಿ 8 ವಿಕೆಟ್‌ಗೆ 117 (ಆ್ಯಷ್ಲೆ ಗಾರ್ಡನರ್‌ 54;ಸಾಯ್ಲಿ ಸತ್ಘರೆ 21ಕ್ಕೆ3,ನದೀನ್‌ ಡಿ ಕ್ಲರ್ಕ್‌ 17ಕ್ಕೆ2).

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಷ್ಟ್ರಪತಿ ಭವನದತ್ತ ‘ಇಂಡಿಯಾ’ ಒಕ್ಕೂಟದ ಮೆರವಣಿಗೆ, ವಿಜಯ್ ಚೌಕ್‌ನಲ್ಲಿ ದಿಢೀರ್ ಧರಣಿ

​ಎಸ್.ಐ.ಆರ್. ನಲ್ಲಿ (SIR) ಭಾರಿ ಅಕ್ರಮಗಳು ನಡೆದಿವೆ ಎಂದು ಗಂಭೀರವಾಗಿ ಆರೋಪಿಸಿರುವ...

ಕ್ರೀಡೆ, ವ್ಯಾಪಾರ ಮತ್ತು ಮೌನ: ಲಿಯೋನೆಲ್ ಮೆಸ್ಸಿ ಎಂಬ ‘ವಿವಾದಿತ ಆಟಗಾರ’ನ ಅಸಲಿ ಮುಖ

2013ರ ಪ್ರವಾಸದ ವೇಳೆ ಅವರು ಇಸ್ರೇಲ್‌ನ ವೆಸ್ಟರ್ನ್ ವಾಲ್‌ನಲ್ಲಿ 'ಕಿಪ್ಪಾ' (ಯಹೂದಿಗಳ...