ಕೋಟ್ಯಂತರ ಅಭಿಮಾನಿಗಳ ಕಾಯುವಿಕೆ ಕೊನೆಯಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐತಿಹಾಸಿಕ ಐಪಿಎಲ್ 2025 ಪ್ರಶಸ್ತಿ ಗೆದ್ದಿದೆ.
ಅಹಮದಾಬಾದ್ನಲ್ಲಿ ಮಂಗಳವಾರ (ಜೂ.3) ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್ಗಳ ಜಯ ಸಾಧಿಸಿದ ರಜತ್ ಪಾಟೀದಾರ್ ನಾಯಕತ್ವದ ಆರ್ಸಿಬಿ ಪಡೆ ಚೊಚ್ಚಲ ಬಾರಿ ಟ್ರೋಫಿ ಎತ್ತಿ ಹಿಡಿಯಿತು. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿತು.
ಈ ಸಂಭ್ರಮವನ್ನು ಆಚರಿಸಲು ಆರ್‌ಸಿಬಿ ಜೂ.4 ರಂದು ಬೆಂಗಳೂರಿನಲ್ಲಿ ವಿಜಯೋತ್ಸವ ಮೆರವಣಿಗೆಯನ್ನು ಆಯೋಜಿಸಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಭವ್ಯ ವಿಜಯೋತ್ಸವ ಬಸ್ ಮೆರವಣಿಗೆ ನಡೆಯಲಿದ್ದು, ಅಭಿಮಾನಿಗಳು ತಮ್ಮ ಪ್ರಶಸ್ತಿ ವಿಜೇತ ಕ್ರಿಕೆಟಿಗರನ್ನು ಹತ್ತಿರದಿಂದ ನೋಡಲು ಅವಕಾಶ ಪಡೆಯಲಿದ್ದಾರೆ.
ಆರ್‌ಸಿಬಿಯ ಬಹುನಿರೀಕ್ಷಿತ ವಿಜಯೋತ್ಸವದ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಮಾಜಿ ಆರ್‌ಸಿಬಿ ದಂತಕಥೆಗಳಾದ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಕೂಡ ವಿಜಯೋತ್ಸವ ಮೆರವಣಿಗೆ ದೃಢಪಡಿಸಿದ್ದಾರೆ.
ಆರ್ಸಿಬಿ ಐಪಿಎಲ್ ಕಿರೀಟ ಧರಿಸುತ್ತಿದ್ದಂತೆಯೇ ದೇಶದೆಲ್ಲೆಡೆ ಅಭಿಮಾನಿಗಳ ಸಂಭ್ರಮ ಉಕ್ಕಿ ಹರಿಯಿತು. ಹದಿನೆಂಟು ವರ್ಷಗಳಿಂದ ಈ ಕ್ಷಣಕ್ಕಾಗಿ ಕಾದಿದ್ದ ಲಕ್ಷಾಂತರ ಜನರು ಬೀದಿಗಿಳಿದು ಸಂಭ್ರಮಿಸಿದರು. ಕುಣಿದರು, ಸಿಹಿ ಹಂಚಿದರು. ಬುಧವಾರ ಬೆಳಗಿನ ಜಾವದವರೆಗೂ ‘ಆರ್‌ಸಿಬಿ..ಆರ್‌ಸಿಬಿ..’ ಎಂಬ ಕೂಗುಗಳು ಪ್ರತಿಧ್ವನಿಸಿದವು.
ಇಂದು ಆರ್‌ಸಿಬಿ ಆಟಗಾರರೇ ವಿಜಯೋತ್ಸವ ಬಸ್ ಮೆರವಣಿಯಲ್ಲಿರುವುದರಿಂದ ಅಭಿಮಾನಿಗಳ ಹರ್ಷಕ್ಕೆ ಪಾರವೇ ಇಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಕೂಡ ವ್ಯಾಪಕ ಭದ್ರತೆ ಮತ್ತು ಟ್ರಾಫಿಕ್ ನಿಯಂತ್ರಣಕ್ಕೆ ಈಗಾಗಲೇ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸ್ಥಳದಲ್ಲಿ ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗುತ್ತಿದೆ.
🚨 RCB Victory Parade in Bengaluru ‼️
— Royal Challengers Bengaluru (@RCBTweets) June 4, 2025
This one’s for you, 12th Man Army.
For every cheer, every tear, every year.
𝐋𝐨𝐲𝐚𝐥𝐭𝐲 𝐢𝐬 𝐑𝐨𝐲𝐚𝐥𝐭𝐲 𝐚𝐧𝐝 𝐭𝐨𝐝𝐚𝐲, 𝐭𝐡𝐞 𝐜𝐫𝐨𝐰𝐧 𝐢𝐬 𝐲𝐨𝐮𝐫𝐬.🏆
More details soon… pic.twitter.com/fMWuCGkVWX