2025ರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ ಮತ್ತು ಆಲ್ರೌಂಡರ್ ಶಿವಂ ದುಬೆ ಅವರ ಮಾರಕ ಬೌಲಿಂಗ್ ನೆರವಿನಿಂದ ದುರ್ಬಲ ಯುಎಇ ತಂಡವನ್ನು 57 ರನ್ ಗಳಿಗೆ ಕಟ್ಟಿ ಹಾಕಿ 9 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಗೆಲುವಿನೊಂದಿಗೆ ಶುಭ ಆರಂಭ ಮಾಡಿದೆ. ಬುಧವಾರ ನಡೆದ ಎ ಬಣದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ ಕೇವಲ 13.1 ಓವರ್ ಗಳಲ್ಲಿ 57 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತ ತಂಡ ಕೇವಲ 4.3 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಜಯಭೇರಿ ಸಾಧಿಸಿತು. ಈ ಮೂಲಕ 2 ಅಂಕ ಗಳಿಸಿದ ಸೂರ್ಯ ಕುಮಾರ್ ಯಾದವ್ ಪಡೆ ಅಂಕಪಟ್ಟಿಯಲ್ಲಿ 10.483 ರನ್ ರೇಟ್ ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಏಷ್ಯಾಕಪ್ನ ಆರಂಭಿಕ ಪಂದ್ಯದಲ್ಲಿ ಭಾರತ ಯುಎಇಯನ್ನು ಸುಲಭವಾಗಿ ಸೋಲಿಸಿದ ಪಂದ್ಯದಲ್ಲಿ ಒಂದು ವಿಶೇಷ ಘಟನೆ ನಡೆಯಿತು. ಅಂಪೈರ್ ರನ್ ಔಟ್ ಎಂದು ತೀರ್ಪು ನೀಡಿದರೂ, ಭಾರತ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಮೇಲ್ಮನವಿಯನ್ನು ಹಿಂತೆಗೆದುಕೊಂಡರು. ಇದು ಅವರ ಕ್ರೀಡಾ ಮನೋಭಾವವನ್ನು ತೋರಿಸಿತು.