ಗದಗ | ಅಕ್ರಮ ಗಣಿಗಾರಿಕೆ ಸಂಪತ್ತು ವಸೂಲಾತಿ ಆಯುಕ್ತರ ನೇಮಕಕ್ಕೆ ಸರ್ಕಾರ ಗೆಜೆಟ್ : ಸಚಿವ ಎಚ್ ಕೆ ಪಾಟೀಲ

Date:

“ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ ಉತ್ಪತ್ತಿಯಾದ ಅಂದಾಜು 78 ಸಾವಿರ ಕೋಟಿ ಮೊತ್ತವನ್ನು ವಸೂಲಿ ಮಾಡಲು ರಾಜ್ಯ ಸರ್ಕಾರ ಸೆ.9 ರಂದು ಗೆಜೆಟ್ ಹೊರಡಿಸಿದೆ. ಸರ್ಕಾರದ ಕಾರ್ಯದರ್ಶಿ ಸಮಾನಾಂತರ ಅಧಿಕಾರಿಯನ್ನು ಆಯುಕ್ತರಾಗಿ ನೇಮಕ ಮಾಡಲಾಗುವುದು” ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.

- Advertisement -

ಗದಗ ನಗರದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, “ಅಕ್ರಮ ಗಣಿಗಾರಿಕೆ ಮತ್ತು ಅಪರಾಧ ಉತ್ಪತ್ತಿಯಿಂದ ಸ್ವತ್ತು ವಸೂಲಾತಿ ಮತ್ತು ಜಪ್ತಿಗೆ ಆಯುಕ್ತರ ನೇಮಕದ ಕುರಿತು ಗೆಜೆಟ್ ಹೊರಡಿಸಲಾಗಿದೆ. ಆಯುಕ್ತರ ನೇಮಕ ಕುರಿತು ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಮಸೂದೆ ಮಂಡನೆ ಆಗಿತ್ತು. ಸೆ.9 ರಂದು ಮಂಗಳವಾರ ರಾಜ್ಯಪಾಲರು ಮಸೂದೆ ಕರಡು ಪ್ರತಿಗೆ ಅಂಕಿತ ಹಾಕಿದ್ದಾರೆ. ತದ ನಂತರ ಸರ್ಕಾರ ಶ್ರೀಘ್ರದಲ್ಲಿ ಗೆಜೆಟ್ ಹೊರಡಿಸಿದೆ. ಈ ಕಾನೂನಿಂದ ಆಥಿರ್ಕ ಶಿಸ್ತು ಪಾಲನೆ ಮಾಡಿದಂತೆ ಆಗುತ್ತದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

“ರಾಜ್ಯದಲ್ಲಿ 2009 – 10ರ ಅವಧಿಯಲ್ಲಿ 12000 ಕೋಟಿ ರೂ. ಮೊತ್ತದ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಅಂದಾಜಿಸಲಾಗಿತ್ತು. ಪ್ರಸ್ತುತ ಅಕ್ರಮ ಗಣಿ ಸಂಪತ್ತಿನ ಬೆಲೆ 78000 ಕೋಟಿ ರೂ. ಆಗಬಹುದು ಎಂದು ಸಚಿವ ಸಂಪುಟ ಸಭೆಯಲ್ಲಿ ಅಂದಾಜಿಸಲಾಗಿತ್ತು. ಈಗ ಒಂದು ಲಕ್ಷ ಕೋಟಿಗೂ ಅಧಿಕ ಸಂಪತ್ತು ಲೂಟಿ ಆಗಿದೆ” ಎಂದು ಆರೋಪಿಸಿದರು.

“ಅಕ್ರಮ ಗಣಿ ಸಂಪತ್ತು ವಸೂಲಾತಿಗಾಗಿ ಕಳೆದ ಜು. 5 ರಂದು ಸಚಿವ ಸಂಪುಟದ ಉಪ ಸಮಿತಿ ಅಧ್ಯಕ್ಷನಾಗಿ ನನ್ನನ್ನು ನೇಮಕ ಮಾಡಲಾಗಿತ್ತು. ಅದರ ಭಾಗವಾಗಿ ಆ. 8 ರಂದು ಸಮಿತಿಯು ವರದಿ ರ್ಪೂಣ ಗೊಳಿಸಿ ಆ. 12ಕ್ಕೆ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಆ.14 ರಂದು ಸಚಿವ ಸಂಪುಟ ಸಭೆಯಲ್ಲಿ ವರದಿ ಯಥಾವತ್ತಾಗಿ ಸ್ವೀಕರಿಸಲಾಯಿತು. ಮುಂದುವರಿದು ಈಗ ಗೆಜೆಟ್ ಪ್ರಕಟನೆಗೊಂಡು ಕಾನೂನು ಜಾರಿ ಆಗಿದೆ” ಎಂದರು.

ಈ ವೇಳೆ ಇಂಧನ ಸಚಿವ ಕೆ.ಜೆ. ಜಾರ್ಜ, ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ ಆರ್ ಪಾಟೀಲ, ಬಿ.ಬಿ. ಅಸೂಟಿ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಬಸ್, ಬೈಕ್ ಡಿಕ್ಕಿ: ಬೈಕ್ ಹಿಂಬದಿ ಸವಾರ ಸಾವು

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ...

ಕಲಬುರಗಿ | ಗಾಂಜಾ ಮಾರಾಟ; ಮೂವರು ಬಂಧನ, ₹7,500 ಮೌಲ್ಯದ ವಸ್ತು ವಶ

ಕಲಬುರಗಿ ನಗರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ...

ಕಲಬುರಗಿ | ಎಸ್‌ಐಆರ್ ರದ್ದತಿಗೆ ಅ.2ರಂದು ಬೃಹತ್ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ರದ್ದುಗೊಳಿಸುವುದು, ಪಟ್ಟಿಯಿಂದ...

ಕಲಬುರಗಿ | ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶವ ಪತ್ತೆ; ಕೊಲೆ ಶಂಕೆ

ಕಮಲಾಪುರ ತಾಲ್ಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಯೊಬ್ಬರ ಮೃತದೇಹ...