ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಭಾನುವಾರ ತನ್ನ ಎದುರಾಳಿ ಪಾಕಿಸ್ತಾನವನ್ನು ಆರು ವಿಕೆಟ್‌ಗಳಿಂದ ಮಣಿಸಿದೆ.
ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ಭಾರತದ ಬೌಲರ್‌ಗಳ ಅಮೋಘ ಪ್ರದರ್ಶನದಿಂದಾಗಿ 105 ರನ್‌ಗಳನ್ನಷ್ಟೆ ಪಡೆಯವಲ್ಲಿ ಸಫಲವಾಯಿತು.
ಇದನ್ನು ಓದಿದ್ದೀರಾ? ಟಿ20 ವಿಶ್ವಕಪ್ | ಟೀಮ್ ಇಂಡಿಯಾ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪಾಕಿಸ್ತಾನ
106 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತ ತಂಡ ಏಳು ಎಸೆತಗಳು ಬಾಕಿ ಇರುವಾಗಲೇ ಯಶಸ್ವಿಯಾಗಿ ಗುರಿ ಮುಟ್ಟಿ ಗೆದ್ದು ಬೀಗಿದೆ. ಆದರೆ, ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕತ್ತಿನ ಗಾಯದಿಂದಾಗಿ ಪಂದ್ಯದಿಂದ ಹೊರಗುಳಿದರು.
ಭಾರತದ ಬೌಲರ್‌ಗಳು ಅದ್ಭುತ ಪ್ರದರ್ಶನ ತೋರಿದ್ದು, ಇದು ಪಾಕಿಸ್ತಾನದ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿತು. ಶಿಸ್ತಿನ ಬೌಲಿಂಗ್ ಎದುರಾಳಿಗಳ ವಿರುದ್ಧ ಭಾರತದ ಗೆಲುವಿಗೆ ಸಾಥ್ ನೀಡಿತು.
India bring their Women's #T20WorldCup 2024 campaign back on track with a win over Pakistan 👏#WhateverItTakes #INDvPAK
— T20 World Cup (@T20WorldCup) October 6, 2024
📝: https://t.co/NpwFzdYiaw pic.twitter.com/pF0vObc5t1
