ಏಷ್ಯಾ ಕಪ್‌ | ʻಹೈಬ್ರಿಡ್ ಮಾದರಿʼಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಒಪ್ಪಿಗೆ

Date:

ಏಷ್ಯಾ ಕಪ್‌‌ ಕ್ರಿಕೆಟ್‌ ಟೂರ್ನಿ ಆಯೋಜನೆಗೆ ಸಂಬಂಧಪಟ್ಟ ಗೊಂದಲಗಳಿಗೆ ಕೊನೆಗೂ ತೆರೆಬಿದ್ದಿದೆ. ʻಹೈಬ್ರಿಡ್‌ ಮಾದರಿʼಯಲ್ಲಿ ಪಂದ್ಯಾವಳಿ ಆಯೋಜಿಸಲು ಜಯ್‌ ಶಾ ಅಧ್ಯಕ್ಷರಾಗಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಗುರುವಾರ ಒಪ್ಪಿಗೆ ಸೂಚಿಸಿದೆ. ಇದರನ್ವಯ, 6 ತಂಡಗಳು ಭಾಗವಹಿಸುವ ಟೂರ್ನಿಯು ಆಗಸ್ಟ್ 31ರಂದು ಆರಂಭವಾಗಲಿದ್ದು, ಸೆಪ್ಟೆಂಬರ್ 17ರವರೆಗೆ ಪಾಕಿಸ್ತಾನ ಮತ್ತು ʻತಠಸ್ಥ ತಾಣʼ  ಶ್ರೀಲಂಕಾದಲ್ಲಿ ನಡೆಯಲಿದೆ.

- Advertisement -

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು, ಈ ಬಾರಿಯ ಏಷ್ಯಾ ಕಪ್‌ ಟೂರ್ನಿಯಲ್ಲಿ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆಯಿದೆ. ಟೂರ್ನಿಯ ಅಧಿಕೃತ ವೇಳಾಪಟ್ಟಿ ಇನ್ನಷ್ಟೇ ಹೊರಬರಬೇಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದೇವಾ: ಸಂಗೀತ ಲೋಕದ ‘ತೇನಿಸೈ ತೆಂಡ್ರಲ್’

ಅಪಾರ ಶ್ರಮ, ನಿರಂತರ ಅಧ್ಯಯನ ಹಾಗೂ ಸತತ ಪ್ರಯತ್ನಗಳಿಂದ ಸಂಗೀತ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿ, ಭಾರಿ ಜನಪ್ರಿಯತೆ ಗಳಿಸಿದರೂ ಸದಾ ವಿನಯ ಮತ್ತು ಸರಳತೆ ದೇವಾ ಅವರಲ್ಲಿ ಎದ್ದು ಕಾಣುತ್ತಿತ್ತು. ಇಂತಹ...

ಜಿರಳೆ ಪ್ರತಿಕೃತಿ ದಹನದ ನೆಪದಲ್ಲಿ ಯುವ ದನಿಯನ್ನು ಹತ್ತಿಕ್ಕುವ...

ದೆಹಲಿಯ ಪೀತಾಂಪುರದಲ್ಲಿ ಮಂಗಳವಾರ ನಡೆದ ದಸರಾ ಆಚರಣೆಯು ಈ ಬಾರಿ ಧಾರ್ಮಿಕ ಶ್ರದ್ಧೆಗಿಂತ ಹೆಚ್ಚಾಗಿ ಆಡಳಿತಾರೂಢ ಬಿಜೆಪಿ ಸರ್ಕಾರದ ಅಹಂಕಾರ ಮತ್ತು ಯುವಜನ ವಿರೋಧಿ ಮನಸ್ಥಿತಿಯ ನೇರ ಪ್ರದರ್ಶನವಾಗಿ ಮಾರ್ಪಟ್ಟಿತು. ರಾವಣ, ಕುಂಭಕರ್ಣ...

ಪಶ್ಚಿಮ ಪದವೀಧರರ ಕ್ಷೇತ್ರ: ಭದ್ರಕೋಟೆ ಮರುಹಿಡಿಯಲು ಕಾಂಗ್ರೆಸ್ ಯತ್ನ;...

ಪಶ್ಚಿಮ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣಾ ಕಾವು ಗರಿಗೆದರಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ವೇದಿಕೆ ಸಜ್ಜಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಪಶ್ಚಿಮ ಪದವೀಧರರ ಕ್ಷೇತ್ರವೀಗ ಬಿಜೆಪಿಯ...

ಪೂರ್ವ ನಿಗದಿಯಂತೆ ಏಷ್ಯಾ ಕಪ್‌- 2023 ಟೂರ್ನಿಯು ಪಾಕಿಸ್ತಾನದಲ್ಲಿ ನಡೆಯಬೇಕಾಗಿತ್ತು. ಆದರೆ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದ ಹಿನ್ನಲೆಯಲ್ಲಿ  ʻಹೈಬ್ರಿಡ್‌ ಮಾದರಿಗೆʼ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ (ಪಿಸಿಬಿ) ಅನಿವಾರ್ಯವಾಗಿ ಸಹಕರಿಸಬೇಕಾಗಿದೆ. ಅದಾಗಿಯೂ ಟೂರ್ನಿಯ ಆತಿಥ್ಯ ಪಾಕಿಸ್ತಾನದ ಬಳಿ ಉಳಿಯಲಿದೆ. ಎಸಿಸಿ ನಿರ್ಧಾರವನ್ನು ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಸ್ವಾಗತಿಸಿದ್ದಾರೆ.

ಹೈಬ್ರಿಡ್ ಮಾದರಿಯಲ್ಲಿ ನಡೆಯುವ ಏಷ್ಯಾ ಕಪ್‌- 2023 ಟೂರ್ನಿಯ ಒಟ್ಟು 13 ಪಂದ್ಯಗಳ ಪೈಕಿ, ಪಾಕಿಸ್ತಾನದಲ್ಲಿ 4 ಮತ್ತು ಉಳಿದ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಪಾಕಿಸ್ತಾನದ ಪಂದ್ಯಗಳು ಲಾಹೋರ್‌ನಲ್ಲಿ ಮತ್ತು ಶ್ರೀಲಂಕಾದ ಪಂದ್ಯಗಳಿಗೆ ಕ್ಯಾಂಡಿ ಮತ್ತು ಪಲ್ಲೆಕೆಲೆ ಮೈದಾನ ಆತಿಥ್ಯ ವಹಿಸಲಿದೆ.  

ಒಂದೇ ಗುಂಪಿನಲ್ಲಿ ಭಾರತ-ಪಾಕಿಸ್ತಾನ!

ಭಾರತ, ಪಾಕಿಸ್ತಾನ, ನೇಪಾಳ ಒಂದು ಗುಂಪಿನಲ್ಲಿ ಮತ್ತು ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡಗಳು ಮತ್ತೊಂದು ಗುಂಪಿನಲ್ಲಿ ಸ್ಥಾನ ಪಡೆದಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ʻಸೂಪರ್ ಫೋರ್ʼ ಹಂತಕ್ಕೆ ಅರ್ಹತೆ ಪಡೆಯಲಿವೆ. ಬಳಿಕ ʻಸೂಪರ್ ಫೋರ್; ಹಂತದಿಂದ ಅಗ್ರ ಎರಡು ತಂಡಗಳು ಫೈನಲ್‌ ಪ್ರವೇಶಿಸಲಿವೆ.

ಅಕ್ಟೋಬರ್-ನವೆಂಬರ್‌ನಲ್ಲಿ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯು ಭಾರತದಲ್ಲಿ ನಡೆಯಲಿದೆ. ಈ ಮಹತ್ವದ ಟೂರ್ನಿಗೆ ಪೂರ್ವಸಿದ್ಧತೆ ಎಂಬಂತೆ ಈ ಬಾರಿಯ ಏಷ್ಯಾ ಕಪ್‌ ಪಂದ್ಯಾವಳಿಯು 50 ಓವರ್‌ಗಳ ಮಾದರಿಯಲ್ಲಿ ನಡೆಯಲಿದೆ.

2008ರ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಪ್ರಮುಖ ಟೂರ್ನಿಯು ನಡೆಯುತ್ತಿರುವುದು ವಿಶೇಷ.  ಪಂದ್ಯಾವಳಿಯ ಪಂದ್ಯಗಳು ನಡೆಯುತ್ತಿರುವುದು ಇದೇ ಮೊದಲು. ಕಳೆದ 15 ವರ್ಷಗಳಿಂದ ಭಾರತ ತಂಡ ಪಾಕ್‌ ನೆಲದಲ್ಲಿ ಕ್ರಿಕೆಟ್‌ ಆಡಿಲ್ಲ. ಈ ಬಾರಿಯೂ ಪಾಕಿಸ್ತಾನದ ಅಭಿಮಾನಿಗಳಿಗೆ ಇಂಡೋ-ಪಾಕ್‌ ಪಂದ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ಕೈ ತಪ್ಪಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಷ್ಟ್ರಪತಿ ಭವನದತ್ತ ‘ಇಂಡಿಯಾ’ ಒಕ್ಕೂಟದ ಮೆರವಣಿಗೆ, ವಿಜಯ್ ಚೌಕ್‌ನಲ್ಲಿ ದಿಢೀರ್ ಧರಣಿ

​ಎಸ್.ಐ.ಆರ್. ನಲ್ಲಿ (SIR) ಭಾರಿ ಅಕ್ರಮಗಳು ನಡೆದಿವೆ ಎಂದು ಗಂಭೀರವಾಗಿ ಆರೋಪಿಸಿರುವ...

ಕ್ರೀಡೆ, ವ್ಯಾಪಾರ ಮತ್ತು ಮೌನ: ಲಿಯೋನೆಲ್ ಮೆಸ್ಸಿ ಎಂಬ ‘ವಿವಾದಿತ ಆಟಗಾರ’ನ ಅಸಲಿ ಮುಖ

2013ರ ಪ್ರವಾಸದ ವೇಳೆ ಅವರು ಇಸ್ರೇಲ್‌ನ ವೆಸ್ಟರ್ನ್ ವಾಲ್‌ನಲ್ಲಿ 'ಕಿಪ್ಪಾ' (ಯಹೂದಿಗಳ...

2036ರ ಒಲಿಂಪಿಕ್ಸ್ ಆತಿಥ್ಯ: ಕಣದಲ್ಲಿರುವ 7 ರಾಷ್ಟ್ರಗಳಲ್ಲಿ ಭಾರತವೂ ಭಾಗಿ

2036ರ ಒಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯ ವಹಿಸಲು ಅಧಿಕೃತವಾಗಿ ಆಸಕ್ತಿ ತೋರಿರುವ ಏಳು...