ಏಷ್ಯನ್ ಗೇಮ್ಸ್ | ಟೀಂ ಇಂಡಿಯಾಗೆ ‘ವೆರಿ ವೆರಿ ಸ್ಪೆಷಲ್’; ವಿವಿಎಸ್‌ ಲಕ್ಷ್ಮಣ್ ಹೆಡ್‌ ಕೋಚ್!

Date:

ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ, ಶ್ರೇಯಸ್ ಅಯ್ಯರ್ ಹಾಗೂ ಯುವ ಅಚ್ಚರಿ ವೈಭವ್ ಸೂರ್ಯವಂಶಿಯಂತಹ ಅನುಭವಿ-ಯುವ ಪ್ರತಿಭೆಗಳ ಸಮ್ಮಿಶ್ರಣವಿರುವ ಭಾರತ ತಂಡಕ್ಕೆ, ವಿವಿಎಸ್ ಲಕ್ಷ್ಮಣ್ ಅವರ ಅನುಭವ ಮತ್ತು ತಂತ್ರಗಾರಿಕೆ ಪದಕ ಗೆಲ್ಲಿಸಲು ನಿರ್ಣಾಯಕ ಪಾತ್ರ ವಹಿಸಬಹುದು

- Advertisement -

ಶ್ರೇಯಸ್ ಅಯ್ಯರ್ ನೇತೃತ್ವದ ಬಲಿಷ್ಠ ಭಾರತ ತಂಡ ಏಷ್ಯಾಡ್‌ಗೆ ಸಜ್ಜಾಗಿದೆ. ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 20ನೇ ಏಷ್ಯನ್ ಗೇಮ್ಸ್‌ನಲ್ಲಿ, ಸೆಪ್ಟೆಂಬರ್ 28ರಂದು ತನ್ನ ಅಭಿಯಾನ ಆರಂಭಿಸಲಿರುವ ಭಾರತ ಪುರುಷರ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ದಿಗ್ಗಜ ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ನೇಮಕಗೊಂಡಿದ್ದಾರೆ. ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ನಡೆಯುತ್ತಿರುವುದರಿಂದ ಗೌತಮ್ ಗಂಭೀರ್ ನೇತೃತ್ವದ ನಿಯಮಿತ ಕೋಚಿಂಗ್ ಬಳಗ ಅಲ್ಲಿ ಕಾರ್ಯನಿರ್ವಹಿಸಲಿದೆ. ಹೀಗಾಗಿ, ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ತನ್ನ ಅತ್ಯಂತ ನಂಬಿಕಸ್ಥ ಮಾರ್ಗದರ್ಶಕ ಲಕ್ಷ್ಮಣ್ ಅವರ ಹೆಗಲಿಗೆ ಏಷ್ಯನ್ ಗೇಮ್ಸ್ ಜವಾಬ್ದಾರಿಯನ್ನು ನೀಡಿದೆ. ಅವರೊಂದಿಗೆ ಹೃಷಿಕೇಶ್ ಕಾನಿಟ್ಕರ್, ಕನ್ನಡಿಗ ಸುನಿಲ್ ಜೋಶಿ ಹಾಗೂ ಶುಭದೀಪ್ ಘೋಷ್ ನೆರವಾಗಲಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

ಲಕ್ಷ್ಮಣ್ ಅವರನ್ನೇ ಈ ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಲು ಪ್ರಮುಖ ಕಾರಣ ಅವರ ಹಿಂದಿನ ಯಶಸ್ಸು ಮತ್ತು ಯುವ ಆಟಗಾರರೊಂದಿಗಿನ ನಿರಂತರ ಒಡನಾಟ. ನಾಲ್ಕು ವರ್ಷಗಳ ಹಿಂದೆ 2023ರಲ್ಲಿ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲೂ ಲಕ್ಷ್ಮಣ್ ಮಾರ್ಗದರ್ಶನದಲ್ಲಿ ರುತುರಾಜ್ ಗಾಯಕ್ವಾಡ್ ನೇತೃತ್ವದ ಭಾರತ ತಂಡವು ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿತ್ತು. ಅಲ್ಲದೆ, ಪ್ರಸ್ತುತ ಬಿಸಿಸಿಐನ ‘ಸೆಂಟರ್ ಆಫ್ ಎಕ್ಸಲೆನ್ಸ್’ (ಹಿಂದಿನ ಎನ್‌ಸಿಎ) ಮುಖ್ಯಸ್ಥರಾಗಿರುವ ಅವರಿಗೆ ಭಾರತದ ದೇಶೀಯ ಕ್ರಿಕೆಟ್ ಹಾಗೂ ಬೆಂಚ್ ಸ್ಟ್ರೆಂತ್‌ನ ಸಂಪೂರ್ಣ ಅರಿವಿದೆ. ಬಿಕ್ಕಟ್ಟಿನ ಸಮಯದಲ್ಲಿ ತಂಡವನ್ನು ಮುನ್ನಡೆಸುವ ಅವರ ಈ ಹಿಂದಿನ ಯಶಸ್ವಿ ಟ್ರ್ಯಾಕ್ ರೆಕಾರ್ಡ್ ಅವರನ್ನು ಈ ಸ್ಥಾನಕ್ಕೆ ಅತ್ಯಂತ ಅರ್ಹರನ್ನಾಗಿಸಿದೆ.

ಲಕ್ಷ್ಮಣ್ ಅವರ ಬಾಲ್ಯ ಜೀವನವೂ ಅವರ ಕ್ರಿಕೆಟ್ ಇನಿಂಗ್ಸ್‌ನಷ್ಟೇ ಕುತೂಹಲಕಾರಿಯಾಗಿದೆ. 1974ರ ನವೆಂಬರ್ 1ರಂದು ಹೈದರಾಬಾದ್‌ನಲ್ಲಿ ಜನಿಸಿದ ವಂಗಿಪುರಪು ವೆಂಕಟ ಸಾಯಿ ಲಕ್ಷ್ಮಣ್ ಅವರ ಪೋಷಕರಾದ ಶಾಂತಾರಾಮ್ ಮತ್ತು ಸತ್ಯಭಾಮ ಇಬ್ಬರೂ ವೈದ್ಯರು. ತಾಯಿಯ ಕಡೆಯ ಸೋದರಮಾವ ಬಾಬಾ ಕೃಷ್ಣಮೋಹನ್ ಅವರ ನೆರವಿನಿಂದ 11ನೇ ವಯಸ್ಸಿಗೆ ‘ಸೇಂಟ್ ಜಾನ್ಸ್ ಕ್ರಿಕೆಟ್ ಅಕಾಡೆಮಿ’ ಸೇರಿದರು. ಲಕ್ಷ್ಮಣ್ ಅವರ 17ರ ವಯಸ್ಸಿನಲ್ಲಿ ವೈದ್ಯಕೀಯ ಶಿಕ್ಷಣದತ್ತ ಸಾಗುವ ಅವಕಾಶವಿದ್ದರೂ, ಕ್ರಿಕೆಟ್ ಅಥವಾ ವೈದ್ಯಕೀಯ ಎಂಬ ಮಹತ್ವದ ಆಯ್ಕೆಯ ಸಂದರ್ಭದಲ್ಲಿ ಪೋಷಕರ ಬೆಂಬಲದೊಂದಿಗೆ ಕ್ರಿಕೆಟ್ ಆರಿಸಿಕೊಂಡರು.

VVS Lakshman 1

1992-93ರಲ್ಲಿ ಹೈದರಾಬಾದ್ ಪರ ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅವರು, 1999-2000 ರಣಜಿ ಋತುವಿನಲ್ಲಿ ಕೇವಲ 9 ಪಂದ್ಯಗಳಲ್ಲಿ 8 ಶತಕಗಳೊಂದಿಗೆ ದಾಖಲೆಯ 1,415 ರನ್ ಸಿಡಿಸಿ ರಾಷ್ಟ್ರೀಯ ಆಯ್ಕೆಗಾರರ ಗಮನ ಸೆಳೆದರು. 1996ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಹಮದಾಬಾದ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರೂ, ಪದಾರ್ಪಣೆಯ ನಂತರದ ವರ್ಷಗಳಲ್ಲಿ ತಂಡದ ಅಗತ್ಯಕ್ಕಾಗಿ ಆರಂಭಿಕನಾಗಿಯೂ ಆಡಬೇಕಾಯಿತು. ನಂತರ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಪಡೆದು ತಮ್ಮ ನೈಜ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದರು.

2001ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಲಕ್ಷ್ಮಣ್ ಬಾರಿಸಿದ 281 ರನ್‌ಗಳ ಐತಿಹಾಸಿಕ ಇನಿಂಗ್ಸ್ ಅವರ ವೃತ್ತಿಜೀವನಕ್ಕೆ ಅತಿ ದೊಡ್ಡ ತಿರುವು ನೀಡಿತು. ಮೊದಲ ಇನಿಂಗ್ಸ್ ಹಿನ್ನಡೆಯಿಂದಾಗಿ ‘ಫಾಲೋ-ಆನ್’ ಹೇರಲ್ಪಟ್ಟಿದ್ದ ಪಂದ್ಯದಲ್ಲಿ, ರಾಹುಲ್ ದ್ರಾವಿಡ್ (180) ಜೊತೆಗೂಡಿ 376 ರನ್‌ಗಳ ಮರೆಯಲಾಗದ ಜೊತೆಯಾಟವಾಡಿದರು. ಆ ಮೂಲಕ ಆಸ್ಟ್ರೇಲಿಯಾದ ಸತತ 16 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದರು. ಇದು ಕ್ರಿಕೆಟ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಇನಿಂಗ್ಸ್‌ಗಳಲ್ಲಿ ಆರನೇ ಸ್ಥಾನ ಪಡೆದಿದೆ ಹಾಗೂ ಸುನಿಲ್ ಗವಾಸ್ಕರ್ ಅವರ ಅಂದಿನ ಗರಿಷ್ಠ ಮೊತ್ತದ ದಾಖಲೆಯನ್ನು ಅಳಿಸಿಹಾಕಿತ್ತು.

ಆಸ್ಟ್ರೇಲಿಯಾ ಎಂದರೆ ಲಕ್ಷ್ಮಣ್ ಅವರ ಬ್ಯಾಟ್ ಸಹಜವಾಗಿಯೇ ಅಬ್ಬರಿಸುತ್ತಿತ್ತು. ಸಿಡ್ನಿಯಲ್ಲಿ 167, ಅಡಿಲೇಡ್‌ನಲ್ಲಿ 148, ಹಾಗೂ ದೆಹಲಿಯಲ್ಲಿ ಅಜೇಯ ದ್ವಿಶತಕ (200*) ಸಿಡಿಸಿ ಕಾಂಗರೂ ಪಡೆಯ ನಿದ್ದೆಗೆಡಿಸಿದ್ದರು. ಅವರು ಗಳಿಸಿದ 17 ಟೆಸ್ಟ್ ಶತಕಗಳ ಪೈಕಿ 6 ಶತಕಗಳು ಹಾಗೂ 6 ಏಕದಿನ ಶತಕಗಳ ಪೈಕಿ 4 ಶತಕಗಳು ಆಸ್ಟ್ರೇಲಿಯಾ ವಿರುದ್ಧವೇ ಮೂಡಿಬಂದಿವೆ. ಬಲಿಷ್ಠ ಆಸೀಸ್ ಪಡೆಯ ವಿರುದ್ಧ ಅವರು ತೋರುತ್ತಿದ್ದ ಈ ಅಮೋಘ ಆಟವನ್ನು ಕಂಡು ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಲಕ್ಷಣ್ ಅವರಿಗೆ ‘ವೆರಿ ವೆರಿ ಸ್ಪೆಷಲ್’ (VVS) ಎಂಬ ಬಿರುದು ನೀಡಿದ್ದರು.

VVS with Dean joens

ಮ್ಯಾಟಿಂಗ್ ಪಿಚ್‌ಗಳಲ್ಲಿ ಆಡಿ ಬೆಳೆದ ಲಕ್ಷ್ಮಣ್ ಅವರದು ‘ಮಣಿಕಟ್ಟಿನ’ ಕಲಾತ್ಮಕ ಆಟ. ಚೆಂಡನ್ನು ಅವರು ಫ್ಲಿಕ್ ಮಾಡುತ್ತಿದ್ದ ಅಥವಾ ಡ್ರೈವ್ ಮಾಡುತ್ತಿದ್ದ ಶೈಲಿ ಬ್ಯಾಟಿಂಗ್‌ಗಿಂತಲೂ ಒಂದು ಸುಂದರ ಕಲೆಯಂತೆ ಭಾಸವಾಗುತ್ತಿತ್ತು. ಎದುರಾಳಿಗಳು ಎಷ್ಟೇ ಸ್ಲೆಡ್ಜಿಂಗ್ ಮಾಡಿದರೂ, ಪಿಚ್ ಎಷ್ಟೇ ಕಠಿಣವಾಗಿದ್ದರೂ ಅತ್ಯಂತ ಶಾಂತಚಿತ್ತದಿಂದಲೇ ಬ್ಯಾಟ್ ಬೀಸುತ್ತಿದ್ದ ಅವರ ಶೈಲಿ ವಿಶಿಷ್ಟವಾಗಿತ್ತು. ಖ್ಯಾತ ಕ್ರೀಡಾ ಬರಹಗಾರ ಸೈಮನ್ ಬಾರ್ನ್ಸ್ ಅವರು ಲಕ್ಷ್ಮಣ್ ಅವರ ಕಲಾತ್ಮಕ ಆಟವನ್ನು ಟೆನಿಸ್ ದಿಗ್ಗಜ ರೋಜರ್ ಫೆಡರರ್ ಅವರ ಸೌಂದರ್ಯಾತ್ಮಕ ಆಟಕ್ಕೆ ಹೋಲಿಸಿದ್ದರು.

ಲಕ್ಷ್ಮಣ್ ಅವರ ಅಂತಾರಾಷ್ಟ್ರೀಯ ಸಾಧನೆಗಳ ಅಂಕಿ-ಅಂಶಗಳು ಸದಾ ಸ್ಮರಣೀಯ. ಅವರು 134 ಟೆಸ್ಟ್ ಪಂದ್ಯಗಳನ್ನು ಆಡಿ 45.97ರ ಸರಾಸರಿಯಲ್ಲಿ 17 ಶತಕ ಹಾಗೂ 56 ಅರ್ಧಶತಕಗಳೊಂದಿಗೆ ಒಟ್ಟು 8,781 ರನ್ ಕಲೆಹಾಕಿದ್ದಾರೆ. ಅದೇ ರೀತಿ 86 ಏಕದಿನ ಪಂದ್ಯಗಳಲ್ಲಿ 6 ಶತಕಗಳೊಂದಿಗೆ 2,338 ರನ್ ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ಅವರೊಂದಿಗೆ ಸೇರಿ ಭಾರತೀಯ ಕ್ರಿಕೆಟ್‌ನ ‘ಫ್ಯಾಬ್ ಫೋರ್’ (Fab 4) ಬಳಗದ ಆಧಾರಸ್ತಂಭವಾಗಿದ್ದ ಅವರು 2002ರಲ್ಲಿ ಪ್ರತಿಷ್ಠಿತ ‘ವಿಸ್ಡನ್ ಕ್ರಿಕೆಟರ್ ಆಫ್ ದಿ ಇಯರ್’ ಗೌರವಕ್ಕೂ ಪಾತ್ರರಾಗಿದ್ದರು.

2012ರ ಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಲಕ್ಷ್ಮಣ್, ಆ ಬಳಿಕವೂ ಕ್ರಿಕೆಟ್‌ನಿಂದ ದೂರ ಉಳಿಯಲಿಲ್ಲ. ಕ್ರಿಕೆಟ್ ಕಾಮೆಂಟೇಟರ್ ಆಗಿ, ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಆಗಿ ಅಪಾರ ಯಶಸ್ಸು ಕಂಡರು. ಬಂಗಾಳ ಕ್ರಿಕೆಟ್ ಸಂಸ್ಥೆಯ ‘ವಿಷನ್ 2020’ ಯೋಜನೆಯಲ್ಲಿ ಬ್ಯಾಟಿಂಗ್ ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು. ಸಚಿನ್ ಮತ್ತು ಗಂಗೂಲಿ ಅವರೊಂದಿಗೆ ಬಿಸಿಸಿಐನ ಉನ್ನತ ‘ಕ್ರಿಕೆಟ್ ಸಲಹಾ ಸಮಿತಿ’ಯ (CAC) ಸದಸ್ಯರಾಗಿಯೂ ಸೇವೆ ಸಲ್ಲಿಸಿ, ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

VVS Lakshman 2

2021ರ ಡಿಸೆಂಬರ್‌ನಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಇದೀಗ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ – CoE) ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ನಂತರ, ಭಾರತೀಯ ಕ್ರಿಕೆಟ್‌ಗೆ ಅವರ ಕೊಡುಗೆ ಇನ್ನಷ್ಟು ವಿಸ್ತಾರವಾಯಿತು. ಕೇವಲ ಗಾಯಗೊಂಡ ಆಟಗಾರರ ಪುನರ್ವಸತಿಗಷ್ಟೇ ಸೀಮಿತವಾಗಿದ್ದ ಈ ಕೇಂದ್ರವನ್ನು, ದೇಶೀಯ ಆಟಗಾರರು, 19-ವಯೋಮಿತಿ ಆಟಗಾರರು, ಮಹಿಳಾ ಕ್ರಿಕೆಟ್ ಹಾಗೂ ಈಶಾನ್ಯ ರಾಜ್ಯಗಳ ಪ್ರತಿಭೆಗಳನ್ನು ಪೋಷಿಸುವ, ಕ್ರೀಡಾ ವಿಜ್ಞಾನವನ್ನು ಅಳವಡಿಸಿಕೊಂಡ ಬಹುದೊಡ್ಡ ವ್ಯವಸ್ಥೆಯನ್ನಾಗಿ ರೂಪಾಂತರಿಸುವಲ್ಲಿ ಲಕ್ಷ್ಮಣ್ ಹಗಲಿರುಳು ಶ್ರಮಿಸಿದ್ದಾರೆ.

ಕೋಚ್ ಅಥವಾ ಮೆಂಟರ್ ಆಗಿ ಲಕ್ಷ್ಮಣ್ ಅವರ ಯಶಸ್ಸಿನ ಗುಟ್ಟು ಅವರ ಸಂವಹನ ಕಲೆ ಮತ್ತು ಯುವ ಆಟಗಾರರ ಮಾನಸಿಕತೆಯನ್ನು ಅರಿಯುವ ಗುಣ. “ಕೋಚಿಂಗ್ ಎಂದರೆ ನಮಗೆಷ್ಟು ಗೊತ್ತಿದೆ ಎಂದು ಆಟಗಾರರಿಗೆ ತೋರಿಸಿಕೊಳ್ಳುವುದಲ್ಲ, ಬದಲಾಗಿ ಆಟಗಾರನ ಒಳಗಿರುವ ಸಾಮರ್ಥ್ಯವನ್ನು ಆತನೇ ಕಂಡುಕೊಳ್ಳುವಂತೆ ಮಾಡುವುದು” ಎಂಬುದು ಅವರ ಕೋಚಿಂಗ್ ತತ್ವ. ಈ ಹಿಂದೆ ಭಾರತ ‘ಎ’ ಹಾಗೂ 19-ವಯೋಮಿತಿ ತಂಡಗಳ ಜೊತೆ ನಿರಂತರವಾಗಿ ಬೆರೆತು ಅವರಲ್ಲಿದ್ದ ಲೋಪಗಳನ್ನು ತಿದ್ದಿ, ಭಾರತದ ಭವಿಷ್ಯದ ಬೆಂಚ್ ಸ್ಟ್ರೆಂತ್ ಅನ್ನು ಭದ್ರಪಡಿಸುವಲ್ಲಿ ಅವರು ಸಾಧಿಸಿದ ಯಶಸ್ಸು ಅಪಾರ.

ಆಟಗಾರನಾಗಿದ್ದಾಗ ಸವಾಲಿನ ಸಂದರ್ಭಗಳಲ್ಲಿ ತಂಡಕ್ಕೆ ಆಧಾರವಾಗುತ್ತಿದ್ದ ಅವರ ಗುಣ, ಇದೀಗ ಕೋಚ್ ಆಗಿಯೂ ಮುಂದುವರಿದಿದೆ. 2001ರಲ್ಲೇ ‘ಅರ್ಜುನ ಪ್ರಶಸ್ತಿ’ ಹಾಗೂ 2011ರಲ್ಲಿ ‘ಪದ್ಮಶ್ರೀ’ ಪುರಸ್ಕೃತರಾಗಿರುವ ಅವರು ವಿವೇಕ, ತಾಳ್ಮೆ ಮತ್ತು ಕ್ರೀಡಾಸ್ಫೂರ್ತಿಯ ಸಾಕಾರಮೂರ್ತಿ. ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ, ಶ್ರೇಯಸ್ ಅಯ್ಯರ್ ಹಾಗೂ ಯುವ ಅಚ್ಚರಿ ವೈಭವ್ ಸೂರ್ಯವಂಶಿಯಂತಹ ಅನುಭವಿ-ಯುವ ಪ್ರತಿಭೆಗಳ ಸಮ್ಮಿಶ್ರಣವಿರುವ ಭಾರತ ತಂಡಕ್ಕೆ, ‘ವಿ.ವಿ.ಎಸ್’ ಅವರ ಅನುಭವ ಮತ್ತು ತಂತ್ರಗಾರಿಕೆ ಪದಕ ಗೆಲ್ಲಿಸಲು ನಿರ್ಣಾಯಕ ಪಾತ್ರ ವಹಿಸಬಹುದು.

VVS Lakshman 4
blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಗಾಯಕ ದೇವದಾಸಗೆ ಒಲಿದ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ

ಕರ್ನಾಟಕ ಜಾನಪದ ಅಕಾಡೆಮಿಯು 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು,...

ಬಡತನ ಮೆಟ್ಟಿ ಬಿಲ್ಲುಗಾರಿಕೆ ಒಲಿಸಿಕೊಂಡ ದೇವಮ್ಮ: ಒಲಂಪಿಕ್ಸ್‌ ಕನಸಿಗೆ ಸ್ಪೂರ್ತಿ ತುಂಬಿದ ಎಂ.ಬಿ ಪಾಟೀಲ್‌

ಬಡತನದ ನಡುವೆಯೂ ಬಿಲ್ಲುಗಾರಿಕೆಯಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಕಲ್ಯಾಣ ಕರ್ನಾಟಕದ ಪ್ರತಿಭೆ...

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ ಲಾರೆನ್ಸ್ ಬಿಷ್ಣೋಯ್‌ವರೆಗೆ!

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ...

CJP ನಾಯಕರ ನ್ಯಾಯಾಂಗ ಬಂಧನ ವಿಸ್ತರಣೆಗೆ ಪೊಲೀಸರ ಮನವಿ; ಮ್ಯಾಜಿಸ್ಟ್ರೇಟ್ ಮುಂದೆ ಹಾಜರು

CJP ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ಸೋಮವಾರ...