ಚಿಕ್ಕಬಳ್ಳಾಪುರ | 3 ಕೋಟಿ ಮೌಲ್ಯದ ಮೊಬೈಲ್‌ಗಳ ಕಳವು; 7 ಜನ ಆರೋಪಿಗಳ ಬಂಧನ

Date:

Advertisements

ಸುಮಾರು 3 ಕೋಟಿ ಮೌಲ್ಯದ ಮೊಬೈಲ್‌ ಫೋನ್‌ಗಳನ್ನು ನೋಯ್ಡಾದಿಂದ ಬೆಂಗಳೂರಿಗೆ ಕಂಟೇನರ್‌ ಮೂಲಕ ತಂದಿದ್ದ ಲಾರಿಯನ್ನು ನಡುರಸ್ತೆಯಲ್ಲೇ ಬಿಟ್ಟು, ಅದರಲ್ಲಿದ್ದ ಮೊಬೈಲ್‌ ಫೋನ್‌ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಲಾರಿ ಚಾಲಕ ಮತ್ತು ಇತರೆ 6 ಮಂದಿ ಆರೋಪಿಗಳನ್ನು ಸೆನ್‌ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹರಿಯಾಣ ಮೂಲದ ರಾಹುಲ್‌ ಅಲಿ, ಇಮ್ರಾನ್‌, ಮೊಹಮದ್‌ ಮುಸ್ತಾಫ ಅಲಿಯಾಸ್‌ ಭುರ್ರ, ಅನೂಪ್‌ ರಾಯ್‌, ಅಭಿಜಿತ್‌ ಪೌಲ್‌, ಸಕೃಲ್ಲಾ, ಯೂಸಫ್‌ ಖಾನ್‌ ಬಂಧಿತ ಆರೋಪಿಗಳು.

IMG 20250428 WA0007 1

ಘಟನೆ ಹಿನ್ನೆಲೆ : 2024ರ ನವೆಂವರ್‌ 22ರಂದು ನೋಯ್ಡಾದಿಂದ ಬೆಂಗಳೂರಿಗೆ ಕಂಟೇನರ್‌ ವಾಹನದಲ್ಲಿ ಸೇಫ್‌ ಸೀಡ್‌ ಕ್ಯಾರಿಯರ್ಸ್‌ ಪ್ರೈ.ಲಿ ಮಾಲೀಕರು ರೆಡ್ಮಿ ಮೊಬೈಲ್ 170 ಬಾಕ್ಸ್‌ಗಳು(3400 ಮೊಬೈಲ್‌ ಫೋನ್)‌, ಪೊಕೊ ಮೊಬೈಲ್‌ 163 ಬಾಕ್ಸ್‌ಗಳನ್ನು(3260 ಮೊಬೈಲ್‌ ಫೋನ್‌ಗಳು) ತಂದಿದ್ದು, ಕಂಟೇನರ್‌ ಲಾರಿ ಚಾಲಕ ಹಾಗೂ ಆತನ ಸಹಚರರು ಕಂಟೇನರ್‌ನಲ್ಲಿದ್ದ ಮೊಬೈಲ್‌ ಫೋನ್‌ಗಳನ್ನು ಕಳವು ಮಾಡಿಕೊಂಡು ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿ ಗೊಲ್ಲರಹಳ್ಳಿ ಗ್ರಾಮದ ಬಳಿಯ ಹೆಚ್‌ಪಿ ಡಾಬಾ ಬಳಿ ಕಂಟೇನರ್‌ ವಾಹನವನ್ನು ಬಿಟ್ಟು ಪರಾರಿಯಾಗಿದ್ದರು.

Advertisements

ಈ ಕುರಿತು ಸೇಫ್‌ ಸೇಡ್‌ ಕ್ಯಾರಿಯರ್ಸ್‌ ಪ್ರೈ.ಲಿ ಮಾಲೀಕರು ಪೆರೇಸಂದ್ರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೂಡಲೇ ಎಚ್ಚೆತ್ತ ಇನ್ಸ್ಪೆಕ್ಟರ್‌ ನಯಾಜ್‌ ಅವರು ಪ್ರಕರಣದ ಎ1 ಆರೋಪಿ ರಾಹುಲ್‌ ಎಂಬಾತನನ್ನು ಬಂಧಿಸಿದ್ದರು. ಬಳಿಕ ಜನವರಿಯಲ್ಲಿ ಕೇಸನ್ನು ಚಿಕ್ಕಬಳ್ಳಾಪುರ ಸೆನ್‌ ಠಾಣೆಗೆ ವರ್ಗಾಯಿಸಲಾಗಿತ್ತು. ತನಿಖೆ ಮುಂದುವರಿಸಿದ ಸೆನ್‌ ಠಾಣೆ ರವಿಕುಮಾರ್‌ ಹಾಗೂ ಸೂರ್ಯ ಪ್ರಕಾಶ್‌ ಉಳಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ಒಟ್ಟು 56 ಮೊಬೈಲ್‌ಗಳು ಹಾಗೂ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಕಳವು ಮಾಡಿರುವ ಮೊಬೈಲ್‌ಗಳನ್ನು ದೇಶದ ಎಲ್ಲಾ ರಾಜ್ಯಗಳಿಗೂ ಬಿಡಿ ಬಿಡಿಯಾಗಿ ಮಾರಾಟ ಮಾಡಿದ್ದು, ಒಟ್ಟು 4084 ಮೊಬೈಲ್‌ಗಳ ಐಎಂಇಐ ನಂಬರ್‌ಗಳನ್ನು ಡಿಒಟಿ ಮೂಲಕ ಬ್ಲಾಕ್‌ ಮಾಡಲಾಗಿದೆ ಎಂದು ಎಸ್ಪಿ ಕುಶಾಲ್‌ ಚೌಕ್ಸೆ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X