ರಾಜ್ಯದಲ್ಲಿ ಬಿರು ಬೇಸಿಗೆಗೆ ಬೆಂದು ಹೋಗಿದ್ದ ಜನಕ್ಕೆ ಇದೀಗ ಮಳೆ ತಂಪೆರೆದಿದೆ. ಏ.12ರಂದು ದಾವಣಗೆರೆ, ಬೆಳಗಾವಿ, ವಿಜಯಪುರ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಜನರ ಮೊಗದಲ್ಲಿ ಮಂದಹಾಸ ಮೂಡಿದೆ.
ಬೆಳಗಾವಿ ಸುತ್ತ ಮುತ್ತಲಿನ ವೀರಭದ್ರನಗರ, ಡಿಸಿ ಕಚೇರಿ, ಚೆನ್ನಮ್ಮ ವೃತ್ತ, ಮಹಾಂತೇಶ ನಗರ, ಶ್ರೀನಗರ ಸೇರಿದಂತೆ ಹಲವೆಡೆ ಜೋರು ಮಳೆ ಸುರಿಯುತ್ತಿದೆ. ಕಳೆದ 45 ನಿಮಿಷಗಳಿಂದ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ ಎಂದು ‘ಆಲ್ ಅಬೌಟ್ ಬೆಳಗಾವಿ’ ಟ್ವೀಟ್ ಮಾಡಿದೆ.
ಹಾಸನ ಜಿಲ್ಲೆಯ ಬಿಕ್ಕೋಡು, ಬೇಲೂರು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಗ್ರಾಮದಲ್ಲಿ ಈ ವರ್ಷದ ಮೊದಲ ಮಳೆ ಸುರಿದಿದೆ.
ಈ ಸುದ್ದಿ ಓದಿದ್ದೀರಾ? ಹಾಸನ | ಪ್ರಜ್ವಲ್ ಪರ ಪ್ರಚಾರ; ಬಿಜೆಪಿಗರ ಮೇಲೆ ಬಿಜೆಪಿಗರಿಂದಲೇ ಹಲ್ಲೆ?
ಬಳ್ಳಾರಿಯಲ್ಲಿ ಸಾಧಾರಣ ಮಳೆಯಾಗಿದೆ. ಅಲ್ಲದೇ, ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆ ಇದೆ.
ರಾಜ್ಯದ ಕೆಲವೆಡೆ ಮಳೆ ಸುರಿಯುತ್ತಿದ್ದಂತೆ, ಜನರಲ್ಲಿ ಮಂದಹಾಸ ಮೂಡಿದೆ. ಇಷ್ಟು ದಿನ ಬೇಸಿಗೆ ಬಿಸಿಗೆ ಹಾಗೂ ನೀರಿಲ್ಲದೇ ಪರದಾಡಿದ ಜನರಲ್ಲಿ ಸಂತಸ ಮೂಡಿದೆ.
Belagavi city area north part…. Veebhadra nagar , DC office , Chennamma circle , Mahantesh nagar , sreenagar untill kanbargi reported same intensity. Full of thunderstorm and heavy rain since 45 mins same intensity. VDO Courtesy Praful pic.twitter.com/0pupW1SwoU
— All About Belgaum | Belagavi News (@allaboutbelgaum) April 12, 2024
ಇನ್ನು ವರ್ಷದ ಮೊದಲ ಮಳೆಯನ್ನು ಖುಷಿಯಿಂದ ಬರಮಾಡಿಕೊಳ್ಳುತ್ತಿರುವ ಜನರು ತಮ್ಮ ತಮ್ಮ ಮೊಬೈಲ್‌ಗಳಲ್ಲಿ ಫೋಟೊ, ವಿಡಿಯೋ ಸೆರೆಹಿಡಿದು ಸಂಭ್ರಮಿಸುತ್ತಿದ್ದಾರೆ. ವಾಟ್ಸ್‌ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವಿಡಿಯೋ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.