ಪ್ರೀತಿಸಿದ ಹುಡುಗಿಗೆ ಅಕ್ರಮ ಸಂಬಂಧ ಇರುವದನ್ನು ಕಣ್ಣಾರೆ ಕಂಡ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಆನೇಕಲ್‌ನಲ್ಲಿ ನಡೆದಿದೆ. ಅಲ್ಲದೇ, ಮಗನ ಆತ್ಮಹತ್ಯೆಗೆ ಯುವತಿಯೇ ಪ್ರಚೋದನೆ ನೀಡಿದ್ದಾಳೆ ಎಂದು ಮೃತ ಯುವಕನ ಪೋಷಕರು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅನ್ಬರಾಸನ್ ಮೃತ ಯುವಕ. ದಿವ್ಯಾ ಆರೋಪಿ.
ಆರೋಪಿ ದಿವ್ಯಾ ಬೆಂಗಳೂರಿನ ಟೆಕ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮೃತ ಅನ್ಬರಾಸನ್ ಫ್ಲಿಪ್ ಕಾರ್ಟ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.
ದಿವ್ಯಾಗೆ ಈ ಹಿಂದೆ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಬಳಿಕ, ಸ್ವಲ್ಪ ದಿನಗಳ ಅಂತರದಲ್ಲೇ ಅನ್ಬರಾಸನ್ ಎಂಬ ಯುವಕನನ್ನು ಪ್ರೀತಿಸಲು ಆರಂಭಿಸಿದ್ದರು. ಚಿಕ್ಕನಾಗಮಂಗಲದಲ್ಲಿ ಬಾಡಿಗೆ ಮನೆ ಮಾಡಿ ಗಂಡ ಹೆಂಡತಿ ಎಂದು ಹೇಳಿ ಕಳೆದ ಆರು ತಿಂಗಳಿನಿಂದ ವಿವಾಹೇತರ ಸಹಜೀವನದಲ್ಲಿದ್ದರು.
ಅನ್ಬರಾಸನ್ ಜತೆಗೆ ಪ್ರೀತಿಯಲ್ಲಿರುವಾಗಲೇ ಸಂತೋಷ್ ಎಂಬ ಯುವಕನ ಜತೆಗೆ ವಿದ್ಯಾ ಪ್ರೀತಿಯಲ್ಲಿ ಬಿದ್ದಿದ್ದಳು. ತಮ್ಮ ಮನೆಯಲ್ಲಿ ಸಂತೋಷ್ ಮತ್ತು ವಿದ್ಯಾ ಜೊತೆಯಲ್ಲಿರುವುದನ್ನು ಕಂಡ ಅನ್ಬರಾಸನ್ ಆಕೆಗೆ ತಿಳುವಳಿಕೆ ಹೇಳಿದ್ದನು ಎನ್ನಲಾಗಿದೆ.
ಆದರೂ ಕೇಳದ ವಿದ್ಯಾ ಸಂತೋಷ್ ಎಂಬಾತನೊಂದಿಗೆ ಪ್ರೀತಿ ಮುಂದುವರೆಸಿದ್ದಳು. ಇದರಿಂದ ಮನನೊಂದ ಅನ್ಬರಾಸನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕುಡಿಯುವ ನೀರಿನ ನಲ್ಲಿಯಲ್ಲಿ ಕೆಸರು ನೀರು: ನಿವಾಸಿಗಳು ಆಕ್ರೋಶ
ಸದ್ಯ ವಿದ್ಯಾ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಎಂದು ಪೋಷಕರು ದೂರು ನೀಡಿದ್ದಾರೆ.
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಸಂತೋಷ್ ಹಾಗೂ ವಿದ್ಯಾ ವಿರುದ್ಧ ಪ್ರಕರಣ ದಾಖಲಾಗಿದೆ. ಸ್ನೇಹಿತನ ಜೊತೆ ಅನ್ಬರಸನ್ ಹಾಗೂ ವಿದ್ಯಾ ಮಾತನಾಡಿರುವ ಕಾಲ್ ರೇಕಾರ್ಡ್ ಸದ್ಯ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ.