ವಿರಾಟ್ ಕೊಹ್ಲಿ ಮಾಲೀಕತ್ವದ ಬೆಂಗಳೂರಿನ ಪಬ್ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲು

Date:

ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಲೀಕತ್ವದ ಬೆಂಗಳೂರಿನಲ್ಲಿರುವ ಒನ್ 8 ಕಮ್ಯೂನ್ ಪಬ್ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸಿದ ಆರೋಪದ ಮೇಲೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಎಂಜಿ ರಸ್ತೆ ಸಮೀಪ ಚಿನ್ನಸ್ವಾಮಿ ಸ್ಟೇಡಿಯಂ ಎದುರಿರುವ ರತ್ನಮ್ ಕಾಂಪ್ಲೆಕ್ಸ್​​ನ 6ನೇ ಮಹಡಿಯಲ್ಲಿ ಒನ್ 8 ಕಮ್ಯೂನ್ ಪಬ್ ಇದೆ. ಈ ಹಿಂದೆ 2024ರ ಜುಲೈ ತಿಂಗಳಲ್ಲಿಯೂ ಈ ಪಬ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಹಿಂದೆ ನಿಗದಿತ ಅವಧಿಗಿಂತಲೂ ಅಧಿಕ ಅವಧಿಯವರೆಗೂ ತೆರೆದಿರುವ ಕಾರಣ ಎಫ್‌ಐಆರ್‌ ದಾಖಲಿಸಲಾಗಿತ್ತು.

ಇದನ್ನು ಓದಿದ್ದೀರಾ? ಬೆಂಗಳೂರು | ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ ವಿರುದ್ಧ ಎಫ್ಐಆರ್ ದಾಖಲು

ಅದಕ್ಕೂ ಮುನ್ನ ಬಿಬಿಎಂಪಿ ನೋಟಿಸ್ ನೀಡಿತ್ತು. ಅಗ್ನಿ ಸುರಕ್ಷತೆ ಅಳವಡಿಸಿಲ್ಲ ಮತ್ತು ಅಗ್ನಿಶಾಮಕ ದಳದ ಪ್ರಮಾಣ ಪತ್ರ ಪಡೆದಿಲ್ಲ ಎಂದಿರುವ ಬಿಬಿಎಂಪಿ, ಸುರಕ್ಷತಾ ಕ್ರಮಗಳನ್ನು ಅಳವಡಿಸದ ಕಾರಣ ಒನ್ 8 ಕಮ್ಯೂನ್​ ಪಬ್​ ಕಾನೂನು ಉಲ್ಲಂಘನೆ ಮಾಡಿದೆ ಎಂದು ನೋಟಿಸ್ ನೀಡಿತ್ತು.

ಇದೀಗ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು(ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ನಿಯಂತ್ರಣ)ಕಾಯ್ದೆ (COTPA Act) ಅಡಿ ಪ್ರಕರಣ ದಾಖಲಿಸಲಾಗಿದೆ.

ಪ್ರತ್ಯೇಕ ಸ್ಥಳ ಮೀಸಲಿಡದೆಯೇ ಧೂಮಪಾನಕ್ಕೆ ಅವಕಾಶ ನೀಡಿದ ಕಾರಣಕ್ಕೆ ಪಬ್‌ನ ಮ್ಯಾನೇಜರ್, ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೇ 29ರಂದು ಪೊಲೀಸರು ಪಬ್‌ಗೆ ದಾಳಿ ನಡೆಸಿದ್ದು ಎನ್​ಸಿಆರ್ ದಾಖಲಿಸಿಕೊಂಡಿದ್ದರು. ಅದಾದ ಬಳಿಕ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

[Float-Menu id="1"]

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರ್‌ಸಿಬಿ ಸಂಭ್ರಮಾಚರಣೆಗೆ 11 ಮಂದಿ ಬಲಿ: ಸರ್ಕಾರದ ವಿರುದ್ಧ ಸಿಪಿಐಎಂ, ಸಿಪಿಐಎಂಎಲ್‌ ಆಕ್ರೋಶ

ಐಪಿಎಲ್ 18ನೇ ಆವೃತ್ತಿಯ ಫೈನಲ್‌ನಲ್ಲಿ ಗೆದ್ದ ಆರ್‌ಸಿಬಿ ತಂಡದ ಸಂಭ್ರಮಾಚರಣೆ ಸಮಯದಲ್ಲಿ...

ಬೆಂಗಳೂರು | ಒಂದೇ ದಿನ ಮೆಟ್ರೋದಲ್ಲಿ 9 ಲಕ್ಷ ಜನ ಪ್ರಯಾಣ!

ನಿನ್ನೆ (ಜೂ.4) ವಿಧಾನ ಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವ...

ಕಾಲ್ತುಳಿತ | ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡ ಹೈಕೋರ್ಟ್

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೊರಭಾಗದಲ್ಲಿ ಆರ್​ಸಿಬಿ ಐಪಿಎಲ್ ವಿಜಯೋತ್ಸವ ಆಚರಣೆ ವೇಳೆ...

ಕರ್ನಾಟಕ ರಣಜಿ ಗೆದ್ದಾಗ ಆರ್‌ಸಿಬಿ ಅಭಿಮಾನಿಗಳು ಹೀಗೆ ಬರುತ್ತಾರೆಯೇ: ಕ್ರಿಕೆಟರ್‌ ಸೈಯದ್‌ ಕಿರ್ಮಾನಿ ಪ್ರಶ್ನೆ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಆಯೋಜಿಸಿದ್ದ ವಿಜಯೋತ್ಸವ ಕಾರ್ಯಕ್ರಮ ವೇಳೆ ಉಂಟಾದ...

Download Eedina App Android / iOS

X