ಬೆಂಗಳೂರು ಕೇಂದ್ರಿತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) ನಾನಾ ಹುದ್ದೆಗಳ ಭರ್ತಿಗೆ ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಇಸ್ರೋದಲ್ಲಿ ಇಂಜಿನಿಯರ್, ತಾಂತ್ರಿಕ ಸಹಾಯಕರು, ಡ್ರಾಫ್ಟ್‌ಮ್ಯಾನ್, ಡ್ರೈವರ್ ಸೇರಿದಂತೆ ಒಟ್ಟು 224 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಸೈಂಟಿಸ್ಟ್ ಎಂಜಿನಿಯರ್ -5, ಟೆಕ್ನಿಕಲ್ ಸಹಾಯಕ – 55, ಸೈಂಟಿಫಿಕ್ ಸಹಾಯಕ – 6, ಲೈಬ್ರರಿ ಅಸಿಸ್ಟಂಟ್ – 1, ಟೆಕ್ನಿಷಿಯನ್ ಬಿ ಮತ್ತು ಡ್ರಾಫ್ಟ್ ಮ್ಯಾನ್ ಬಿ – 142, ಫೈರ್ ಮ್ಯಾನ್ ಎ -3, ಕುಕ್ – 4, ಡ್ರೈವರ್ - 8 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಮಾರ್ಚ್ 1 ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.
ಆಸಕ್ತ ಅಭ್ಯರ್ಥಿಗಳು www.isro.gov.in ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ
ಸೈಂಟಿಸ್ಟ್, ಎಂಜಿನಿಯರ್, ಟೆಕ್ನಿಕ್ ಮತ್ತು ಸೈಂಟಿಫಿಕ್ ಸಹಾಯಕರ ಹುದ್ದೆಗೆ ಅಭ್ಯರ್ಥಿಗಳು ₹250 ಅರ್ಜಿ ಶುಲ್ಕ ಹಾಗೂ ಉಳಿದ ಹುದ್ದೆಗೆ ಅರ್ಜಿ ಶುಲ್ಕ ₹100 ಇದೆ. ಪ್ರೊಸೆಸಿಂಗ್ ಶುಲ್ಕ ₹500 ರೂಪಾಯಿ ಆಗಿದೆ. ಮಹಿಳಾ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾತ್ರ ಪ್ರೋಸಸಿಂಗ್ ಶುಲ್ಕವನ್ನು ಮರುಪಾವತಿಸಲಾಗುತ್ತದೆ ಎಂದು ಹೇಳಿದೆ.
ಟೆಕ್ನಿಷಿಯನ್-ಬಿ, ಡ್ರಾಟ್ಸ್‌ಮನ್-ಬಿ, ಕುಕ್, ಫೈರ್‌ಮ್ಯಾನ್-ಎ, ಲಘು ವಾಹನ ಚಾಲಕ-ಎ ಮತ್ತು ಹೆವಿ ವೆಹಿಕಲ್ ಡ್ರೈವರ್-ಎ ಅರ್ಜಿ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ. ಆರಂಭದಲ್ಲಿ ಎಲ್ಲ ಅಭ್ಯರ್ಥಿಗಳು ಏಕರೂಪವಾಗಿ ₹500 ಪಾವತಿಸಬೇಕು.
ವಿದ್ಯಾರ್ಹತೆ ವಿವರ
ಸೈಂಟಿಸ್ಟ್ ಇಂಜಿನಿಯರ್ ಹುದ್ದೆಗೆ ಅಭ್ಯರ್ಥಿಗಳು ಬಿಇ, ಬಿಟೆಕ್, ಎಂಇ ಅಥವಾ ಎಂಟೆಕ್, ಎಂಎಸ್ಸಿ ಪದವಿ ಪಡೆದಿರಬೇಕು. ಟೆಕ್ನಿಕಲ್ ಸಹಾಯಕರ ಹುದ್ದೆಗೆ ಅಭ್ಯರ್ಥಿ ಇಂಜಿನಿಯರಿಂಗ್ ಡಿಪ್ಲೊಮಾ ಪದವಿ, ಸೈಂಟಿಫಿಕ್ ಸಹಾಯಕರ ಹುದ್ದೆಗೆ ಬಿಎಸ್ಸಿ ಪದವಿ, ಲೈಬ್ರರಿ ಸಹಾಯಕರ ಹುದ್ದೆಗೆ ಪದವಿ ಅಥವಾ ಸ್ನಾತಕೋತ್ತರ ಪದವಿ, ಟೆಕ್ನಿಷಿಯನ್ ಬಿ ಮತ್ತು ಡ್ರಾಫ್ಟ್ ಮ್ಯಾನ್ ಬಿ, ಫೈರ್ ಮ್ಯಾನ್ ಎ, ಕುಕ್, ಡ್ರೈವರ್ ಹುದ್ದೆಗೆ ಅಭ್ಯರ್ಥಿಗಳು 10ನೇ ತರಗತಿ ಅಥವಾ ಐಟಿಐ ಉತ್ತೀರ್ಣರಾಗಿರಬೇಕು.
ವಯೋಮಿತಿ
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ದಾಖಲೆಗಳ ಅಗತ್ಯ
ಅಗತ್ಯವಿರುವ ದಾಖಲೆಗಳಲ್ಲಿ ಇತ್ತೀಚಿನ ಬಣ್ಣದ ಪಾಸ್‌ಪೋರ್ಟ್ ಗಾತ್ರದ ಫೋಟೋ, ಸಹಿ, ಅರ್ಹತಾ ಪ್ರಮಾಣಪತ್ರಗಳು ಮತ್ತು ಎಸ್‌ಸಿ/ಎಸ್‌ಟಿ/ಅಂಗವಿಕಲತೆ/ ಮಾಜಿ ಸೈನಿಕರ ಪ್ರಮಾಣಪತ್ರ (ಅನ್ವಯವಾಗುವಂತೆ) ದಾಖಲೆಗಳ ಅಗತ್ಯವಿದೆ. ಫೆಬ್ರವರಿ 10 ರಂದು ಪ್ರಾರಂಭಗೊಂಡಿರುವ ನೇಮಕಾತಿ ಪ್ರಕ್ರಿಯೆ 2024ರ ಮಾರ್ಚ್ 1ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋ | ಮೂರನೇ ಹಂತದ ಯೋಜನೆಗೆ ₹1,003.47 ಕೋಟಿ ಅನುದಾನಕ್ಕೆ ಬೇಡಿಕೆ
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ, ಕಂಪ್ಯೂಟರ್ ಆಧಾರಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಅಭ್ಯರ್ಥಿಗಳು isro.gov.in ಈ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.