ಅತ್ತಿಬೆಲೆ ಅಗ್ನಿ ದುರಂತ | ಮ್ಯಾಜಿಸ್ಟೀರಿಯಲ್ ತನಿಖೆಗೆ ಸರ್ಕಾರ ಆದೇಶ

Date:

Advertisements

ರಾಜ್ಯ ರಾಜಧಾನಿ ಬೆಂಗಳೂರಿನ ಆನೇಕಲ್ ತಾಲೂಕಿನ ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ನಡೆದ ಅಗ್ನಿ ದುರಂತದಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ಈ ಪ್ರಕರಣವನ್ನು ಮ್ಯಾಜಿಸ್ಟೀರಿಯಲ್ ತನಿಖೆ ನಡೆಸುವಂತೆ ಅ.17ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪ್ರಕರಣದ ಸಮಗ್ರ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನಾಗಿ ಹಿರಿಯ ಐಎಎಸ್ ಅಧಿಕಾರಿ, ಬೆಂಗಳೂರು ಪ್ರಾದೇಶಿಕ ಆಯುಕ್ತ ಅಮಲಾನ್​ ಆದಿತ್ಯಾ ಬಿಸ್ವಾಸ್ ಅವರನ್ನು ನೇಮಿಸಿದೆ. ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ, ವರದಿ ನೀಡುವಂತೆ ಸರ್ಕಾರ ಸೂಚಿಸಿದೆ.

ಪಟಾಕಿ ಗೋದಾಮಿನಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಾವಿಗೆ ಕಾರಣಗಳು, ಘಟನಾವಳಿಗಳ ಸರಣಿ, ಸನ್ನಿವೇಶಗಳ ಬಗ್ಗೆ ಹಾಗೂ ಶ್ರೀ ಬಾಲಾಜಿ ಟ್ರೇಡರ್ಸ್, ಪಟಾಕಿ ದಾಸ್ತಾನು ಮಳಿಗೆಗಳ ಬಗ್ಗೆ ಸ್ಫೋಟಕ ಕಾಯ್ದೆ-1884ರ ಸೆಕ್ಷನ್ 6ಬಿ ರನ್ವಯ ಸ್ಥಳ ತನಿಖೆ ನಡೆಸಿ, ಸೂಕ್ತ ದಾಖಲಾತಿಗಳನ್ನು ಪಡೆದುಕೊಳ್ಳಬೇಕು. ನಿಯಮಾನುಸಾರ ಪರಿಶೀಲಿಸಿ ಪರವಾನಗಿ ನೀಡಲಾಗಿದೆಯೇ, ಈ ಪರವಾನಗಿ ನೀಡುವಿಕೆಯಲ್ಲಿ ಲೋಪ ಉಂಟಾಗಿದ್ದಲ್ಲಿ ಅವುಗಳ ಕುರಿತು ಹಾಗೂ ಲೋಪಕ್ಕೆ ಕಾರಣರಾದವರ ಬಗ್ಗೆ ಮಾಹಿತಿ ಪಡೆಯಬೇಕು. ಅಗ್ನಿ ಅವಘಡವು ಆಕಸ್ಮಿಕವಾಗಿ ಉಂಟಾಗಿದೆಯೇ ಅಥವಾ ನಿರ್ಲಕ್ಷತೆಯಿಂದ ಉಂಟಾಗಿದೆಯೇ ಎಂಬ ಬಗ್ಗೆ ಮತ್ತು ಅವಘಡದಲ್ಲಿ ಉಂಟಾದ ನಷ್ಟದ ಕುರಿತಾದ ಅಂಶಗಳನ್ನೂ ಒಳಗೊಂಡಂತೆ ಸಮಗ್ರವಾಗಿ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಬೇಕು ಎಂದು ಸರ್ಕಾರ ಸೂಚಿಸಿದೆ.

Advertisements

ಏನಿದು ಘಟನೆ?

ಅ.7 ರಂದು ಸಂಜೆ 3.50 ಸುಮಾರಿಗೆ ಅತ್ತಿಬೆಲೆಯ ಎನ್‌ಎಚ್‌ 44 ರಸ್ತೆಯಲ್ಲಿರುವ ಶ್ರೀ ಬಾಲಾಜಿ ಟ್ರೇಡರ್ಸ್‌ ಪಟಾಕಿ ಅಂಗಡಿ ಗೋದಾಮಿನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಈ ಅವಘಡದಲ್ಲಿ ತಮಿಳುನಾಡು ಮೂಲದ 14 ಮಂದಿ ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಇಬ್ಬರು ಆಸ್ಪತ್ರೆಯಲ್ಲಿ ಮರಣ ಹೊಂದಿದ್ದರು.

ದುರಂತದಲ್ಲಿ ಗಾಯಗೊಂಡಿದ್ದ ನವೀನ್ ರೆಡ್ಡಿ, ರಾಜೇಶ್, ವೆಂಕಟೇಶ್ ಅವರನ್ನು ಬೆಂಗಳೂರಿನ ಸೆಂಟ್‌ಜಾನ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಗಾಯಾಳು ದಿನೇಶ್ ರವರು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಗಾಯಾಳುಗಳ ಪೈಕಿ ದಿನೇಶ್ (17) ಮತ್ತು ವೆಂಕಟೇಶ್ (25) ಚಿಕಿತ್ಸೆಯಿಂದ ಗುಣಮುಖರಾಗದೆ ಮೃತಪಟ್ಟಿದ್ದಾರೆ.

ಪ್ರಕರಣದ ಕುರಿತು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ 285, 286, 337, 338, 427, 304 ಐಪಿಸಿ ಜೊತೆಯಲ್ಲಿ ಸ್ಫೋಟಕ ಕಾಯ್ದೆ-1884, ಕಲಂ 9ಬಿ ಅನ್ವಯ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಶ್ರೀ ಬಾಲಾಜಿ ಟ್ರೇಡರ್ಸ್ ಮಾಲೀಕ ವಿ.ರಾಮಸ್ವಾಮಿರೆಡ್ಡಿ ಮತ್ತು ಅನಿಲ್‌ ಕುಮಾರ್ ಎಂಬುವವರನ್ನು ಬಂಧಿಸಲಾಗಿದೆ. ಮೊತ್ತೊಬ್ಬ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಅ.7ರಂದು ರಾತ್ರಿ 9 ಗಂಟೆಗೆ ಶಂಕರ್ ಎಂಬುವವರು ತಮಿಳುನಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?

“ನಾನು ಪರಿಶಿಷ್ಟ ಜನಾಂಗದ ಆದಿ ದ್ರಾವಿಡ ಜಾತಿಗೆ ಸೇರಿದವರು. ಶ್ರೀ ಬಾಲಾಜಿ ಟ್ರೇಡರ್ಸ್ ಮಾಲೀಕ ನವೀನ್ ರೆಡ್ಡಿ ರವರು ಫೋನ್ ಮಾಡಿ ಸೇಲ್ಸ್ ಮ್ಯಾನ್ ಕೆಲಸಕ್ಕೆ ಬರುವಂತೆ ಹೇಳಿದ್ದರು. ಹಾಗಾಗಿ, ನಮ್ಮ ಸಂಬಂಧಿಗಳಾದ ಇತರೆ 9 ಜನರೊಂದಿಗೆ 8 ದಿನಗಳ ಹಿಂದೆ ಪಟಾಕಿ ಅಂಗಡಿಗೆ ಕೆಲಸಕ್ಕೆ ಬಂದಿದ್ದೇವೆ. ನಮಗೆ ಉಳಿದು ಕೊಳ್ಳಲು ಪಟಾಕಿ ಅಂಗಡಿ ಮುಂಭಾಗದಲ್ಲಿ ರೂಮ್ ಮಾಡಿಕೊಟ್ಟಿದ್ದರು” ಎಂದು ದೂರುದಾರ ಶಂಕರ್ ಹೇಳಿದ್ದಾರೆ.

“ಅ.7ರಂದು ಮಧ್ಯಾಹ್ನ ಒಂದು ಕಂಟೈನರ್‌ ಲಾರಿಯಲ್ಲಿ ಪಟಾಕಿ ಲೋಡ್ ಬಂದಿತ್ತು. ಪಟಾಕಿ ಬಾಕ್ಸ್‌ಗಳನ್ನು ಗೋದಾಮಿನ ಒಳಗೆ ತೆಗೆದುಕೊಂಡು ಹೋಗುತ್ತಿದ್ದೆವು. ನಾನು ಹೊರಗಡೆ ಇದ್ದಾಗ 120 & 220 ಶಾಟ್‌ಸ್‌ನ ಪಟಾಕಿ ಬಾಕ್ಸ್‌ಗಳಿಂದ ಸ್ಪಾರ್ಕ್ ಬಂದಿದೆ. ಈ ಸಮಯದಲ್ಲಿ ಮಾಲೀಕರ ಕೈಗೆ ಬೆಂಕಿ ತಗುಲಿ ಸ್ವಲ್ಪ ಏಟಾಯಿತು. ನಮ್ಮ ಸಂಬಂಧಿಗಳೆಲ್ಲಾ ಗೋದಾಮಿನ ಒಳಗಿದ್ದರು. ಪಟಾಕಿ ಬಾಕ್ಸ್‌ಗಳನ್ನು ಅಡ್ಡಾದಿಡ್ಡಿಯಾಗಿ ಇಟ್ಟಿದ್ದರಿಂದ ಸ್ಥಳದಿಂದ ತಪ್ಪಿಸಿಕೊಂಡು ಓಡಿ ಹೋಗಲು ಸಾಧ್ಯವಾಗಿಲ್ಲ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

“ಅಗ್ನಿ ಅವಘಡದ ಮಾಹಿತಿ ತಿಳಿಯುತ್ತಿದ್ದಂತೆ, ಸ್ಥಳೀಯ ಪೊಲೀಸರು & ಅಗ್ನಿಶಾಮಕ ತಂಡದವರು ಸ್ಥಳಕ್ಕೆ ಬಂದು ಗೋದಾಮಿನ ಒಳಗಡೆ ಸಿಲುಕಿಕೊಂಡಿದ್ದ 4 ಜನ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಗೋದಾಮಿನ ಒಳಗಡೆ ಬೆಂಕಿಯಿಂದ ಬೆಂದು ಸುಮಾರು 14 ಜನ ಮರಣ ಹೊಂದಿದ್ದು, ಇವರನ್ನು ಗುರುತಿಸಲು ಸಾಧ್ಯವಾಗದಷ್ಟು ಸುಟ್ಟು ಹೋಗಿದ್ದಾರೆ. ಅಂಗಡಿ ಮಾಲೀಕರು ಈ ರೀತಿ ಸ್ಫೋಟ ಆಗುತ್ತದೆಂಬ ಮಾಹಿತಿ ಇದ್ದರೂ ಸಹ, ನಮಗೆ ಸರಿಯಾದ ತರಬೇತಿ ನೀಡಿಲ್ಲ ಹಾಗೂ ಇಂತಹ ಸಂದರ್ಭದಲ್ಲಿ ಬೆಂಕಿ ಆರಿಸಲು ಯಾವುದೇ ಉಪಕರಣಗಳನ್ನು ಇಟ್ಟಿಲ್ಲ ಗೋದಾಮಿನಿಂದ ತುರ್ತಾಗಿ ಹೊರಗಡೆ ಓಡಿಹೋಗುವಂತಹ ಬಾಗಿಲುಗಳನ್ನು ಹಾಕಿಸಿಲ್ಲ. ಹಾಗಾಗಿ, ಈ ಬೆಂಕಿ ಅನಾಹುತಕ್ಕೆ ಅಂಗಡಿ ಮಾಲೀಕರು ಹಾಗೂ ಜಮೀನಿನ ಮಾಲೀಕರು ಕಾರಣ” ಎಂದು ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟ್ರಾಫಿಕ್ ದಂಡಗಳಿಗೆ ಶೇ. 50 ರಿಯಾಯಿತಿ: ಬೆಂಗಳೂರು ಸಂಚಾರ ಪೊಲೀಸರ ಘೋಷಣೆ

ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಗುರುವಾರ ಬಾಕಿ ಇರುವ ಟ್ರಾಫಿಕ್ ದಂಡಗಳ...

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಬೆಂಗಳೂರಿನಲ್ಲಿ ಬೈಕ್‌ ಟ್ಯಾಕ್ಸಿ ಪುನರಾರಂಭ; ಸೀಮಿತ ಆ್ಯಪ್‌ಗಳಲ್ಲಿ ಮಾತ್ರ ಲಭ್ಯ

ಬೆಂಗಳೂರಿನಲ್ಲಿ ಗುರುವಾರದಿಂದ (ಆಗಸ್ಟ್‌ 21) ಮತ್ತೆ ಬೈಕ್‌ ಟ್ಯಾಕ್ಸಿ ಸೇವೆಗಳು ಪುನಾರಂಭವಾಗಿವೆ....

Download Eedina App Android / iOS

X