ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ನಡೆದ ತಾಯಿ-ಮಗಳ ಸಾವಿನ ಘಟನೆ ನಗರದ ಜನರನ್ನು ಬೆಚ್ಚಿಬೀಳಿಸಿದೆ. ಬೆಸ್ಕಾಂ ಅಧಿಕಾರಗಳ ನಿರ್ಲಕ್ಷ್ಯದಿಂದ ತಾಯಿ ಮತ್ತು ಹಸುಗೂಸು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆಗೆ ನಗರದ ಜನ ಕಂಬನಿ ಮಿಡಿದಿದ್ದಾರೆ.
ಘಟನೆಯು ಜನರಿಗೆ ಬೆಂಗಳೂರಿನಲ್ಲಿ ಬದುಕುವುದೇ ಕಷ್ಟ ಎನ್ನಿಸುವಂತೆ ಮಾಡಿದೆ. ರಸ್ತೆಯಲ್ಲಿ ನಡೆದರೇ ಅಪಘಾತದ ಭೀತಿ, ರಸ್ತೆಯಲ್ಲಿ ವಾಹನದಲ್ಲಿ ತೆರಳಿದರೆ ಬಲಿಗಾಗಿ ಕಾದಿರುವ ರಸ್ತೆಗುಂಡಿಗಳ ಆತಂಕದಲ್ಲಿ ಜನರು ಬದುಕು ದೂಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸುರಕ್ಷಿತವಾಗಿ ಓಡಾಡಲಿಕ್ಕೆ ಅಂತ ನಿರ್ಮಾಣ ಮಾಡಿರುವ ಪಾದಚಾರಿ ಮಾರ್ಗಗಳ ಮೇಲೆ ಓಡಾಡಿದರೆ, ಎಲ್ಲೆಂದರೆಲ್ಲಿ ಬಿದ್ದಿರುವ ಕೇಬಲ್ ವೈರ್‌ಗಳು, ವಿದ್ಯುತ್ ತಂತಿಗಳೂ ತಮ್ಮನ್ನು ಜೀವ ಕಿತ್ತುಕೊಳ್ಳುವ ಭೀತಿ ಎದುರಾಗಿದೆ.
ಭಾನುವಾರ ಬೆಳಗ್ಗೆ ವೈಟ್‌ಫೀಲ್ಡ್‌ನಲ್ಲಿರುವ ಹೋಪ್ ಫಾರ್ಮ್ ಬಳಿ ಪಾದಚಾರಿ ಮಾರ್ಗದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ–ಮಗು ಮೃತಪಟ್ಟಿದ್ದಾರೆ.
ಸೌಂದರ್ಯ ಮತ್ತು ಅವರ 9 ತಿಂಗಳ ಪುತ್ರಿ ಸುವೀಕ್ಷಾ ಮೃತರಾಗಿದ್ದಾರೆ. ತಮಿಳುನಾಡಿನಲ್ಲಿ ನೆಲೆಸಿದ್ದ ಸೌಂದರ್ಯ ಅವರು ತನ್ನ ತಾಯಿಯನ್ನು ನೋಡಲು ತಮ್ಮ ಮತಿ ಮತ್ತು ಮಗುವಿನೊಂದಿಗೆ ಬೆಂಗಳೂರಿಗೆ ಬಂದಿದ್ದರು. ಹೋಪ್ ಫಾರ್ಮ್ ಜಂಕ್ಷನ್ ಬಳಿಯ ಬಿಎಂಟಿಸಿ ಬಸ್ ನಿಲ್ದಾಣದಿಂದ ಪಾದಚಾರಿ ಮಾರ್ಗದ ಮೂಲಕ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಮಾರ್ಗದಲ್ಲಿ ತಂಡಾಗಿ ಬಿದಿದ್ದ ವಿದ್ಯುತ್ ತಂತಿಯ ಮೇಲೆ ಕಾಲಿಟ್ಟಿದ್ದಾರೆ. ಇದರಿಂದ ವಿದ್ಯುತ್ ತಗುಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅವರ ಪತಿ ಪಾದಚಾರಿ ಮಾರ್ಗದ ಕೆಳಗಡೆ ನಡೆದುಕೊಂಡು ಹೋಗುತ್ತಿದ್ದರು. ಅವರು ಪ್ರಾಣಾಪಯದಿಂದ ಪಾರಾಗಿದ್ದಾರೆ.
ಅಧಿಕಾರಿಗಳ ಅಮಾನತು
ಘಟನೆಗೆ ಸಂಬಂಧಿಸಿದಂತೆ, ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀರಾಮ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುಬ್ರಹ್ಮಣ್ಯ, ಸಹಾಯಕ ಎಂಜಿನಿಯರ್ ಚೇತನ್, ಕಿರಿಯ ಎಂಜಿನಿಯರ್ ರಾಜಣ್ಣ ಹಾಗೂ ಸ್ಟೇಷನ್ ಆಪರೇಟರ್ ಮಂಜುನಾಥ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ನಿರ್ಲಕ್ಷ್ಯದ ಆರೋಪದ ಮೇಲೆ ಬೆಸ್ಕಾಂ ಎಇ ಚೇತನ್, ಜೆಇ ರಾಜಣ್ಣ, ಸ್ಟೇಷನ್ ಆಪರೇಟರ್ ಮಂಜು ಸೇರಿದಂತೆ ಐವರನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದರು. ಇದೀಗ, ಠಾಣಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆದರೆ, ಪ್ರಕರಣದಲ್ಲಿ ಬೆಸ್ಕಾಂ ಎಇ, ಎಇಇಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಇಂಧನ ಸಚಿವ ಕೆ.ಜೆ.ಜಾರ್ಜ್, “ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಹೋಪ್ ಫಾರ್ಮ್ ಬಳಿ ವಿದ್ಯುತ್ ಶಾಕ್‌ಗೆ ಒಬ್ಬ ಮಹಿಳೆ ಮತ್ತು ಒಂದು ಮಗು ಸಾವನ್ನಪ್ಪಿರುವ ದುರ್ದೈವದ ಘಟನೆ ನಡೆದಿದೆ. ಈ ದುರದೃಷ್ಟಕರ ಸಾವುಗಳಿಗೆ ಕಾರಣವಾದ ಘಟನೆಯ ಕುರಿತು ವಿಚಾರಣೆ ಕೈಗೆತ್ತಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.
In a deeply unfortunate incident, a lady and a child have lost their lives to electrocution close to Hope Farm in Whitefield, Bengaluru. We have taken up an inquiry into the incident that has led to these unfortunate deaths and are awaiting the report. The line man, AE and AEE…
— KJ George (@thekjgeorge) November 19, 2023
“ಇದರ ವರದಿಯನ್ನು ಎದುರು ನೋಡುತ್ತಿದ್ದೇವೆ. ಈ ಅಪಘಾತಕ್ಕೆ ಕಾರಣರಾದ ಎಇ ಮತ್ತು ಎಇಇ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಮತ್ತು ಇದಕ್ಕೆ ಕಾರಣಾದವರು ಮತ್ತಾರೇ ಇದ್ದರೂ ನಿರ್ದಾಕ್ಷಿಣ್ಯಯವಾಗಿ ಕ್ರಮ ಜರುಗಿಸಲಾಗುವುದು. ಈ ದುರ್ಘಟನೆಯಲ್ಲಿ ಸಂಬಂಧಿಕರನ್ನು ಕಳೆದುಕೊಂಡ ಕುಟುಂಬ ಸದಸ್ಯರಿಗೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ ಪರಿಹಾರ ನೀಡಲಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ಲಾಸ್ಟಿಕ್ ಗೋದಾಮಿನಲ್ಲಿ ಅಗ್ನಿ ಅವಘಡ; ಒಂದು ದಿನ ಕಳೆದರೂ ನಿಯಂತ್ರಣಕ್ಕೆ ಬಾರದ ಬೆಂಕಿ
ಇನ್ನೂ ಈ ದುರಂತ ನಡೆದು ಒಂದು ಗಂಟೆ ಕಳೆದರೂ ಯಾವೊಬ್ಬ ಅಧಿಕಾರಿಯೂ ಘಟನಾ ಸ್ಥಳಕ್ಕೆ ಬಂದಿರಲಿಲ್ಲ ಎಂಬ ಆರೋಪ ಬೆಸ್ಕಾಂ ಅಧಿಕಾರಿಗಳ ಮೇಲಿದೆ.
ಸರಿಯಾಗಿ ತನಿಕೆ ಮಾಡಿ ತಪ್ಪುಮಾಡಿದವರ ಮೇಲೆ ಕ್ರಮ ಜರುಗಿಸಬೇಕು. ಅದು ಬಿಟ್ಟು ಹೀಗೆ ಅಡ್ಡಾದಿಡ್ಡಿಯಾಗಿ ಸರಕಾರದ ಕೆಲಸಗಾರರನ್ನು ನಡೆಸಿಕೊಳ್ಳುವುದು ಸರಿಯಲ್ಲ.
ತಂತಿಯನ್ನು ಎಳೆದು ಕಟ್ಟುವುದರಲ್ಲಿ ಗುತ್ತಿಗೆದಾರ ತಪ್ಪುಮಾಡಿರಬಹುದು.ತಂತಿಯೇ ಕಳಪೆಗುಣಮಟ್ಟದ್ದಾಗಿರಬಹುದು.ಅಂದರೆ ಅದನ್ನು ತಯಾರು ಮಾಡಿದ ಒದಗಿಸಿದವರ ಮೇಲೆ ಕ್ರಮವೇನು?
ದಿಢಿರ್ ಕ್ರಮ ಸರಿಯಲ್ಲ.