ರಾಜ್ಯ ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2023ರ ಜನವರಿ 1 ರಿಂದ ಡಿಸೆಂಬರ್ 31ರವರೆಗೆ ಬರೋಬ್ಬರಿ 37.2 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ಬಾರಿ ಶೇ.35.3ರಷ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೆಐಎ, “2023ರ ಏಪ್ರಿಲ್ 29ರಂದು 1,16,688 ಪ್ರಯಾಣಿಕರು ಪ್ರಯಾಣಿಸಿದ್ದು, ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ದಾಖಲಿಸಿದೆ. ಸರಕು ಸಾಗಣೆಯಲ್ಲೂ ಮುಂದಿರುವ ಬೆಂಗಳೂರು ವಿಮಾನ ನಿಲ್ಲಾಣ 2023 ರಲ್ಲಿ 53,751 ಮೆಟ್ರಿಕ್ ಟನ್‌ನೊಂದಿಗೆ ಸತತ ಮೂರನೇ ವರ್ಷವೂ ಬಿಎಲ್‌ಆರ್ ಕಾರ್ಗೋ ವಿಭಾಗ ಮೊದಲ ಸ್ಥಾನದಲ್ಲಿದೆ” ಎಂದು ಹೇಳಿದೆ.
“ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2023ರಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ವಿಮಾನ ನಿಲ್ದಾಣವು ಒಟ್ಟು 37.2 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಸಲ್ಲಿಸಿದೆ. 2022ಕ್ಕೆ ಹೋಲಿಸಿದರೆ, 35.3% ಹೆಚ್ಚಳವಾಗಿದೆ. ಹೆಚ್ಚುವರಿಯಾಗಿ, ಬಿಎಲ್‌ಆರ್ ವಿಮಾನ ನಿಲ್ದಾಣವು ಸತತ ಮೂರನೇ ವರ್ಷ ಭಾರತದಲ್ಲಿ ಹಾಳಾಗುವ ಸರಕುಗಳನ್ನು ನಿರ್ವಹಿಸಲು ವಿಶ್ವಾಸಾರ್ಹ ಕೇಂದ್ರವಾಗಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವುದನ್ನು ಮುಂದುವರೆಸಿದೆ. ತಡೆರಹಿತ ಸರಕು ಕಾರ್ಯಾಚರಣೆಗಳಿಗೆ ಬದ್ಧತೆ ತೋರುತ್ತಿದೆ” ಎಂದಿದೆ.
We’re happy to announce that in CY 2023, we welcomed 37.20 million passengers, a 35.3% increase from the previous year. Cargo Volumes in CY 2023 were 422,644 MT ( Metric Tonnes); both of which are the highest numbers handled since airport opening day. BLR Cargo continues to be… pic.twitter.com/aTNYzAkv6o
— BLR Airport (@BLRAirport) January 12, 2024
“2023ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಒಟ್ಟು 37.2 ಮಿಲಿಯನ್ ಪ್ರಯಾಣಿಕರ ಪೈಕಿ 32.7 ಮಿಲಿಯನ್ ದೇಶೀಯ ಪ್ರಯಾಣಿಕರು ಮತ್ತು 4.5 ಮಿಲಿಯನ್ ಅಂತಾರಾಷ್ಟ್ರೀಯ ಪ್ರಯಾಣಿಕರು ಪ್ರಯಾಣಿಸಿದ್ದಾರೆ” ಎಂದು ತಿಳಿಸಿದೆ.
ದುಬೈ, ಸಿಂಗಾಪುರ್ ಮತ್ತು ದೋಹಾ ಅಂತಾರಾಷ್ಟ್ರೀಯ ಪ್ರಯಾಣಿಕರು ಆಯ್ಕೆಮಾಡಿದ ಪ್ರಮುಖ ಸ್ಥಳಗಳಾಗಿದ್ದು, ದೆಹಲಿ, ಮುಂಬೈ ಮತ್ತು ಹೈದರಾಬಾದ್ ಪ್ರಮುಖ ದೇಶೀಯ ಮಾರ್ಗಗಳಾಗಿವೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜ.17ರಂದು ಟಿ-20 ಕ್ರಿಕೆಟ್ : ಹೆಚ್ಚುವರಿ ಬಸ್ ಸೇವೆ ಒದಗಿಸಿದ ಬಿಎಂಟಿಸಿ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ 2023ರ ಸೆಪ್ಟೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಟ್ರಮಿನಲ್ 1 ರಿಂದ ಟ್ರಮಿನಲ್ 2ಗೆ ಬದಲಾಯಿಸಿತು.
2023ನೇ ಸಾಲಿನಲ್ಲಿ ಕಡಿಮೆಯಾದ ಪ್ರಯಾಣದ ಮಿತಿಗಳು, ಸುಧಾರಿತ ಆರ್ಥಿಕ ಪರಿಸ್ಥಿತಿಗಳು ಮತ್ತು ವ್ಯಾಪಾರ ಪ್ರಯಾಣಕ್ಕಾಗಿ ಹೆಚ್ಚಿದ ಬೇಡಿಕೆಯಿಂದ ಕಳೆದ ಸಾಲಿನಲ್ಲಿ ಪ್ರಯಾಣದ ಸಂಖ್ಯೆ ಏರಿಕೆಗೆ ಕಾರಣವಾಗಿದೆ.
ಮಾರ್ಚ್ 17, 2023 ರಂದು ಅತ್ಯಧಿಕ ಸಂಖ್ಯೆಯ ಏರ್ ಟ್ರಾಫಿಕ್ ಮೂಮೆಂಟ್ (ಎಟಿಎಂ) ಕಂಡು ಬಂದಿದ್ದು ಒಂದೇ ದಿನದಲ್ಲಿ ಬರೋಬ್ಬರಿ 748 ಎಟಿಎಂ ನನ್ನು ತಲುಪಿದೆ.