ಬೆಂಗಳೂರಿನ ಹೆಬ್ಬಾಳದಲ್ಲಿರುವ ಸಿಂಧಿ ಶಾಲೆಯ ಪಠ್ಯವೊಂದರಲ್ಲಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಕುರಿತಾದ ಪಠ್ಯವೊಂದನ್ನು ಅಳವಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.
‘ಸಿಂಧ್ ವಿಭಜನೆಯ ನಂತರದ ಜೀವನ, ವಲಸೆ, ಸಮುದಾಯ ಮತ್ತು ಕಲಹ’ ಎಂಬ ಶಿರ್ಶಿಕೆಯಡಿ ತಮನ್ನಾ ಪಠ್ಯ ಇದೆ. ಇದಕ್ಕೆ ವಿದ್ಯಾರ್ಥಿಗಳ ಪೋಷಕರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
“ತಮನ್ನಾ ಅವರು ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಾರೆ. ಅಂಥ ಸಿನಿಮಾಗಳಲ್ಲಿ ಅವರು ಪೋರ್ನ್ ರೀತಿಯ ದೃಶ್ಯಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಅಂಥವರು ಮಕ್ಕಳಿಗೆ ಆದರ್ಶವಾಗಬೇಕೇ?” ಎಂದು ಪಾಲಕರು ಪ್ರಶ್ನೆ ಮಾಡಿದ್ದಾರೆ.
“ತಮನ್ನಾ ಅವರಿಂದ ಮಕ್ಕಳು ಕಲಿಯುವುದಾದರೂ ಏನಿದೆ?” ಎಂದು ಶಾಲೆಯ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ.
ಸಿಂಧಿ ಶಾಲೆಯ ಪಠ್ಯೇತರ ಪಠ್ಯದಲ್ಲಿ ಈ ಪಾಠ ಅಳವಡಿಕೆ ಮಾಡಲಾಗಿದೆ. 7ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಪಾಠ ನೀಡಲಾಗಿದೆ. ಈ ಕುರಿತು ಕೆಲವು ಫೋಟೋಗಳು ಲಭ್ಯವಾಗಿದೆ. ಪಾಠದಲ್ಲಿ ತಮನ್ನಾ ಅವರ ಬಗ್ಗೆ ನೀಡಲಾಗಿದೆ. ಅವರು ಹುಟ್ಟಿದ್ದು ಅವರು ಮಾಡಿದ ಸಿನಿಮಾ ಇವುಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತೆರಿಗೆ ಕಟ್ಟುತ್ತಿರುವವರ ಮೇಲೆ ಹೊರೆ ಹೊರಿಸುತ್ತಿರುವ ಬಿಬಿಎಂಪಿ: ಎಎಪಿ ಆಕ್ರೋಶ
ಸಿಂಧ್ ಸಮುದಾಯ ಸಾಧಕರ ಪರಿಚಯಿಸಲು ಹೋಗಿ ಎಡವಟ್ಟು ಮಾಡಿದ್ದಾರೆ ಎನ್ನಲಾಗುತ್ತಿದೆ. ನಟಿ ಮಾಡಿದ ಸಿನಿಮಾಗಳ ಬಗ್ಗೆ ಹಾಗೂ ತೆಲುಗು, ತಮಿಳಿನಲ್ಲಿ ಅವರು ಅಭಿನಯಿಸಿರುವ ಬಗ್ಗೆ ಪಠ್ಯದಲ್ಲಿ ನೀಡಲಾಗಿದೆ.
ಈ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗ ಹಾಗೂ ಖಾಸಗಿ ಶಾಲೆಗಳ ಒಕ್ಕೂಟಕ್ಕೆ ಪೋಷಕರು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.