ಬೆಂಗಳೂರು | ನಾಯಿ ಕಚ್ಚಿದ್ದಕ್ಕೆ ಪೊಲೀಸರಿಗೆ ದೂರು ನೀಡಿದ ಮಹಿಳೆ; ಆಕೆಯ ವಾಹನಗಳಿಗೆ ಬೆಂಕಿ ಹಚ್ಚಿದ ನಾಯಿಯ ಮಾಲೀಕ

Date:

Advertisements

ಸಾಕು ನಾಯಿಯೊಂದು ದಾಳಿ ಮಾಡಿದೆ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದಕ್ಕೆ ಕೋಪಗೊಂಡ ಶ್ವಾನ ಮಾಲೀಕ ಮಹಿಳೆ ಮತ್ತು ಆಕೆಯ ಮಗನ ಎರಡು ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪುಷ್ಪ (43) ನಾಯಿಯಿಂದ ದಾಳಿಗೆ ಒಳಗಾದವರು. ನೆರೆಹೊರೆಯವರಾದ ಕೊತ್ತನೂರಿನಲ್ಲಿ ರೆಸ್ಟೋರೆಂಟ್ ನಡೆಸುತ್ತಿರುವ ಎಚ್‌ಎಂಟಿ ರಾಜಣ್ಣ ಅಲಿಯಾಸ್ ನಾಗರಾಜ್, ಅವರ ಪುತ್ರಿ ಗಾಯತ್ರಿ ಕಾವ್ಯ ಹಾಗೂ ಮಗ ಬಾಬು ಮಹಿಳೆಯ ವಾಹನಗಳಿಗೆ ಬೆಂಕಿ ಹಾಕಿದವರು ಎಂದು ಗುರುತಿಸಲಾಗಿದೆ.

ಜೂನ್ 13 ರಂದು ಮನೆಕೆಲಸದಾಕೆ ಪುಷ್ಪ ಅವರು ಕೆಲಸಕ್ಕೆ ಹೋಗುತ್ತಿದ್ದಾಗ ಸಾಕು ನಾಯಿ ಆಕೆಯ ಮೇಲೆ ಹಲವು ಬಾರಿ ದಾಳಿ ನಡೆಸಿದೆ. ಇದನ್ನು ಕಣ್ಣಾರೆ ಕಂಡ ಬಾಬು ಮತ್ತು ಗಾಯತ್ರಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ, ನಡೆದ ಘಟನೆ ಬಗ್ಗೆ ಪೊಲೀಸ್ ದೂರು ನೀಡದಂತೆ ಪುಷ್ಪ ಮತ್ತು ಆಕೆಯ ಮಗನಿಗೆ ಮನವಿ ಮಾಡಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.

Advertisements

“ನಾಗರಾಜ್ ಮತ್ತು ಅವರ ಪತ್ನಿ ಗೌರಮ್ಮ ಗಾಯಗೊಂಡಿರುವ ಪುಷ್ಪ ಅವರ ವೈದ್ಯಕೀಯ ವೆಚ್ಚವನ್ನು ಭರಿಸುವುದು ಜತೆಗೆ ಅವರು ಕೆಲಸ ಮಾಡಲು ಸಾಧ್ಯವಾಗುವವರೆಗೆ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಅವರು ನೀಡಿದ ಭರವಸೆಯಂತೆ ನಡೆದುಕೊಂಡಿಲ್ಲ. ಒಂದು ತಿಂಗಳು ಕಳೆದರೂ ವೈದ್ಯಕೀಯ ವೆಚ್ಚ ಭರಿಸಲು ಕುಟುಂಬದಿಂದ ಹಣ ಬಂದಿಲ್ಲ” ಎಂದು ಪುಷ್ಪ ಹೇಳಿದ್ದಾರೆ.

“ಹಾಗಾಗಿ, ವೈದ್ಯಕೀಯ ವೆಚ್ಚಕ್ಕೆ ನನ್ನ ಬಳಿ ಯಾವುದೇ ಹಣವಿಲ್ಲದ ಕಾರಣ, ನಾನು ಚಿಟ್ ಫಂಡ್‌ನಿಂದ ಹಣವನ್ನು ಹಿಂತೆಗೆದುಕೊಂಡಿದ್ದೇನೆ. ಅದರಲ್ಲಿ ನಾಗರಾಜ್ ಅವರ ಕುಟುಂಬವೂ ಸೇರಿದೆ. ಚಿಟ್ ಫಂಡ್‌ ಹಣದಿಂದ ಚಿಕಿತ್ಸೆ ಮತ್ತು ಆಸ್ಪತ್ರೆಯ ಬಿಲ್​​ ಪಾವತಿ ಮಾಡಿದ್ದೇನೆ. ಕುಟುಂಬವು ವೈದ್ಯಕೀಯ ವೆಚ್ಚ ಪಾವತಿಸಲು ನಿರಾಕರಿಸಿದ್ದರಿಂದ ಜುಲೈನಲ್ಲಿ ಪೊಲೀಸ್ ದೂರು ದಾಖಲಿಸಿದ್ದೇನೆ” ಎಂದು ತಿಳಿಸಿದ್ದಾರೆ.

“ಈ ಘಟನೆಯ ನಂತರ ಎಚ್‌ಎಂಟಿ ರಾಜಣ್ಣ ಅವರ ಮಗ ಬಾಬು ಅವರು ಸೋಮವಾರ ನನ್ನ ಮನೆ ಬಳಿ ಬಂದು ಚಿಟ್ ಫಂಡ್ ಹಣ ವಾಪಸ್ ಮಾಡುವಂತೆ ಕಿರುಕುಳ ನೀಡಿದ್ದಾರೆ. ಹಣ ಮರುಪಾವತಿ ಮಾಡಲು ಸ್ವಲ್ಪ ಸಮಯಬೇಕು ಎಂದು ಕೇಳಿದ್ದೇನೆ. ಆದರೆ, ಆತ ನನಗೆ ಮತ್ತು ನನ್ನ ಮಗನಿಗೆ ಬೆದರಿಕೆ ಹಾಕಿ, ಕೆಟ್ಟ ಮಾತಿನಿಂದ ನಿಂದಿಸಿದ್ದಾನೆ” ಎಂದು ದೂರಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಂವಿಧಾನವನ್ನು ಗೌರವಿಸುವುದಾದರೆ ಜಗದೀಶ್‌ ಗುಡಗಂಟಿಯನ್ನು ಪಕ್ಷದಿಂದ ಉಚ್ಚಾಟಿಸಿ: ಬಿಜೆಪಿಗೆ ಎಎಪಿ ಸವಾಲು

“ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಸೈರನ್ ಸದ್ದು ಕೇಳಿ ಎದ್ದೆವು. ಎರಡೂ ವಾಹನಗಳಿಗೆ ಬೆಂಕಿ ಹಚ್ಚಿರುವುದನ್ನು ಕಂಡು ನಾವು ಮೆಲಗಡೆ ಮನೆಯಿಂದ ಕೆಳಗೆ ಓಡಿ ಬಂದೆವು. ನಾವು ಇತರ ನೆರೆಹೊರೆಯವರೊಂದಿಗೆ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದೆವು. ಅಷ್ಟರಲ್ಲಿ ವಾಹನಗಳು ಸುಟ್ಟುಹೋಗಿವೆ” ಎಂದು ಪುಷ್ಪಾ ವಿವರಿಸಿದ್ದಾರೆ.

ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X