ಬೆಳಗಿನ ಜನದಟ್ಟಣೆಯ ಸಮಯದಲ್ಲಿ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ಮತ್ತು ಗರುಡಾಚಾರ್‌ಪಾಳ್ಯ ಮೆಟ್ರೋ ನಿಲ್ದಾಣಗಳ ನಡುವೆ ಫೆಬ್ರುವರಿ 26ರಿಂದ (ಸೋಮವಾರ) ಹೆಚ್ಚುವರಿ ಮೆಟ್ರೋ ರೈಲು ಸೇವೆ ಒದಗಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಯೋಜಿಸಿದೆ.
ಟ್ರಿನಿಟಿ, ಇಂದಿರಾನಗರ, ಬೆನ್ನಿಗಾನಹಳ್ಳಿ ಮತ್ತು ಕೆಆರ್ ಪುರ ಮೆಟ್ರೋ ನಿಲ್ದಾಣಗಳ ಕಡೆಗೆ ಹೋಗುವ ಪ್ರಯಾಣಿಕರ ಅವಶ್ಯಕತೆ ಪೂರೈಸಲು ಇದು ಸಹಾಯವಾಗಲಿದೆ.
”ಈ ಮಾರ್ಗದಲ್ಲಿ ಬೆಳಗ್ಗೆ 8.45 ರಿಂದ 10.20 ಗಂಟೆಯವರೆಗೆ, ಪ್ರತಿ ಮೂರು ನಿಮಿಷಕ್ಕೆ ಮೆಟ್ರೋ ರೈಲು ಸೇವೆಗಳು ವಾರದ ಎಲ್ಲ ದಿನಗಳಲ್ಲಿ (ಶನಿವಾರ, ಭಾನುವಾರ ಮತ್ತು ಸಾಮಾನ್ಯ ರಜಾ ದಿನಗಳನ್ನು ಹೊರತುಪಡಿಸಿ) ಲಭ್ಯವಿರುತ್ತವೆ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಫೆ.24 ರಂದು ಐಐಎಸ್‌ಸಿಯಲ್ಲಿ ಓಪನ್ ಡೇ ಕಾರ್ಯಕ್ರಮ; ಸಂಚಾರ ಮಾರ್ಗ ಬದಲಾವಣೆ
”ಇದಲ್ಲದೆ, ಭಾರತೀಯ ರೈಲ್ವೆ / ಇಂಟರ್‌ಸಿಟಿ ಬಸ್‌ಗಳ ಮೂಲಕ ಬೆಂಗಳೂರು ನಗರಕ್ಕೆ ಮುಂಜಾನೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ, ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಎಲ್ಲ ದಿಕ್ಕುಗಳಿಗೆ ಮೊದಲ ರೈಲು ಭಾನುವಾರ ಹೊರತುಪಡಿಸಿ ವಾರದ ಎಲ್ಲ ದಿನಗಳಲ್ಲಿ ಬೆಳಗ್ಗೆ 5 ಗಂಟೆಗೆ ಪ್ರಾರಂಭವಾಗಲಿದೆ. ಸಾರ್ವಜನಿಕರು ಮೇಲಿನ ಬದಲಾವಣೆಗಳನ್ನು ಉಪಯೋಗಿಸುವಂತೆ ಕೋರಿದೆ.
Enclosed is the Media Release regarding increase in MORNING PEAK HOUR frequency and early start of train services from interchange Nadaprabhu Kempegowda station – Majestic. FKI pic.twitter.com/QHym8VtEco
— ನಮ್ಮ ಮೆಟ್ರೋ (@OfficialBMRCL) February 23, 2024