ಮುಖ್ಯಮಂತ್ರಿ ಮನೆ ಕೂಗಳತೆ ದೂರದಲ್ಲಿ ಕೆಜಿಗಟ್ಟಲೇ ಚಿನ್ನಾಭರಣ ಕಳ್ಳತನ ಮಾಡಿದ್ದ ಕಳ್ಳನೊಬ್ಬನನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ.
ಪ್ರದೀಪ್ ಬಂಧಿತ ಆರೋಪಿ. ಈತ ಮೂಲತಃ ಅಸ್ಸಾಂನವನಾಗಿದ್ದು, ಕಳ್ಳತನ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದನು. ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ, ಮೆಜೆಸ್ಟಿಕ್‌ನ ಲಾಡ್ಜ್‌ವೊಂದರಲ್ಲಿ ತಂಗಿದ್ದನು.
ಪೊಲೀಸ್ ಠಾಣೆ ಹಾಗೂ ಸದಾ ಪೊಲೀಸ್ ಭದ್ರತೆಯಿಂದಲೇ ಕೂಡಿರುವ ಮುಖ್ಯಮಂತ್ರಿ ನಿವಾಸದ ಕೂಗಳತೆ ದೂರದಲ್ಲಿರುವ, ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯ ಮಾರ್ವಾಡಿ ಮನೆಯೊಂದರಲ್ಲಿ ಆತನ ಕಳ್ಳತನ ಮಾಡಿದ್ಧಾನೆ. ಮನೆಯ ಕಿಟಕಿಯಿಂದ ಮನೆಯೊಳಗೆ ನುಗ್ಗಿ 2.1 ಕೆಜಿ ಚಿನ್ನಾಭರಣ ಕದ್ದಿದ್ದಾನೆ.
ಮನೆ ಮಾಲೀಕರಾದ ಮಂಜುಳಾ ದೇವಿ ಅವರ ಕುಟುಂಬಸ್ಥರು ಕಾರ್ಯಕ್ರಮ ಹಿನ್ನೆಲೆ ಕಳೆದ ತಿಂಗಳು 17ರಂದು ರಾಜಸ್ಥನಕ್ಕೆ ತೆರಳಿದ್ದರು. ಫೆ.4ರಂದು ಮರಳಿ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.
ಪಕ್ಕದ ಮನೆಯ ಕಾಂಪೌಂಡ್ ಹತ್ತಿ, ಗ್ರಿಲ್ ಮುರಿದು ಒಳನುಗ್ಗಿರುವ ಖದೀಮ ಮನೆಯಲ್ಲಿದ್ದ ₹90 ಲಕ್ಷ ಮೌಲ್ಯದ 2 ಕೆಜಿ 250 ಗ್ರಾಂನ ಚಿನ್ನದ ಬಿಸ್ಕತ್, ಆಭರಣಗಳು ಹಾಗೂ ಬೆಳ್ಳಿ ವಸ್ತುಗಳನ್ನ ಎಗರಿಸಿದ್ದಾನೆ.
ಕಳ್ಳತನದ ಬಗ್ಗೆ ಮಂಜುಳಾ ಅವರು ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಶೇಷಾದ್ರಿಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮನೆಯ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆ ನಡೆಸಿ, ಆರೋಪಿಯನ್ನು ಪತ್ತೆ ಮಾಡಿದ್ದಾರೆ. 250 ಸಿಸಿಟಿವಿ ಪರಿಶೀಲನೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಾಲಕನನ್ನು ಕಂಬಕ್ಕೆ ಕಟ್ಟಿ ಹಲ್ಲೆ; ಬಾಲಕನ ವಿರುದ್ಧವೂ ಪ್ರಕರಣ ದಾಖಲು
ಆರೋಪಿ ಚಿನ್ನಾಭರಣ ಕದ್ದ ದುಡ್ಡಿನಲ್ಲಿಯೇ ಅಸ್ಸಾಂಗೆ ಹೋಗಿ ಕಾರು ಖರೀದಿ ಮಾಡಿದ್ದಾನೆ. ಈತ ಈ ಹಿಂದೆ ಸದಾಶಿವನಗರದಲ್ಲಿಯೂ ಕಳ್ಳತನ ಮಾಡಿದ್ದನು. ಆದರೆ, ಅಲ್ಲಿ ಆತನಿಗೆ ಏನು ಸಿಕ್ಕಿರಲಿಲ್ಲ. ಹಾಗಾಗಿ, ಶೇಷಾದ್ರಿಪುರಂನ ಮನೆಯನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡಿದ್ದನು.
ಸದ್ಯ ಆರೋಪಿಯನ್ನ ಬಂಧಿಸಿರುವ ಶೇಷಾದ್ರಿಪುರಂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Nice Job From Police