ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ‘ಬೈಕ್‌ಗೆ ಢಿಕ್ಕಿ ಹೊಡೆದಿದ್ದೀರಿ’ ಎಂದು ಕಾರನ್ನು ಅಡ್ಡಗಟ್ಟಿ ಸುಲಿಗೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇದೀಗ, ನಗರದ ಸರ್ಜಾಪುರ-ಅತ್ತಿಬೆಲೆ ರಸ್ತೆಯಲ್ಲಿ ಟೆಕ್ಕಿಯೊಬ್ಬರ ಕಾರನ್ನು ಅಡ್ಡಗಟ್ಟಿ ಸುಲಿಗೆ ಮಾಡಲು ಯತ್ನಿಸಿದ ಮೂವರನ್ನು ಬೆಂಗಳೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಚರಣ್ ಪಾಲ್ ಸಿಂಗ್ ಟೆಕ್ಕಿ. ಇವರು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾನುವಾರ ಸಾಯಂಕಾಲ ಬೆಂಗಳೂರಿನ ಸರ್ಜಾಪುರ-ಅತ್ತಿಬೆಲೆ ರಸ್ತೆಯಲ್ಲಿ ಕಾರಿನಲ್ಲಿ ಸಹೋದ್ಯೋಗಿಗಳ ಜತೆಗೆ ತೆರಳುತ್ತಿದ್ದರು.
ಈ ವೇಳೆ, ಸ್ಕೋಟರ್‌ನಲ್ಲಿ ಬಂದ ನಾಲ್ವರು ಕಿಡಿಗೇಡಿಗಳು ‘ನಮ್ಮ ಬೈಕ್‌ಗೆ ಡಿಕ್ಕಿ ಹೊಡೆದಿದ್ದೀರಿ, ಹಣ ನೀಡಿ’ ಎಂದು ಕಾರ್‌ನ್ನು ಅಡ್ಡಗಟ್ಟಿ ಹಣ ನೀಡುವಂತೆ ಕೇಳಿದ್ದಾರೆ.
ಈ ಸಮಯದಲ್ಲಿ ಚರಣ್ ಸಿಂಗ್ ಹಾಗೂ ಸಹೋದ್ಯೋಗಿಗಳು ಕಾರಿನಲ್ಲಿಯೇ ಕುಳಿತಿದ್ದರು. ಚರಣ್ ಅವರು ನಾವು ಯಾವುದೇ ವಾಹನಕ್ಕೆ ಢಿಕ್ಕಿ ಹೊಡೆದಿಲ್ಲ ಹಣ ನೀಡುವುದಿಲ್ಲ ಎಂದು ಹೇಳಿದರೂ ಕೇಳದ ನಾಲ್ವರು ಕಿಡಿಗೇಡಿಗಳು ಕಾರಿನ ಗಾಜನ್ನು ಓಡೆದು ಬೆದರಿಕೆ ಹಾಕಲು ಮುಂದಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ದೇವಾಲಯಗಳಲ್ಲಿ ಜ.10 ರಿಂದ ವಸ್ತ್ರಸಂಹಿತೆ ಜಾರಿ
ಕಾರು ಮುಂದೆ ತೆರಳದಂತೆ ಓರ್ವ ಕಿಡಿಗೇಡಿ ವಾಹನದ ಮುಂದೆ ನಿಂತರೇ, ಮತ್ತೋರ್ವ ಕಿಟಕಿಯ ಬಳಿ ಬಂದು ಬೆದರಿಕೆ ಹಾಕುತ್ತಿದ್ದನು. ಚರಣ ಅವರು ಭಯದಿಂದ ಕಾರನ್ನು ಚಾಲನೆ ಮಾಡಿ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಈ ವೇಳೆ, ಆರೋಪಿಗಳು ಸಹ ವಾಹನವನ್ನು ಹಿಂಬಾಲಿಸಿದ್ದಾರೆ. ಇಡೀ ಘಟನೆ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
@CPBlr @DgpKarnataka @blrcitytraffic The following incident took place on the Sarjapur-Attible road. Old extortion gangs have become live. Please take strict action. 🙏@siddaramaiah @DKShivakumar Sirs,
Sarjapur-Attible Road is a property hub for many of the IT folks where they… pic.twitter.com/eWHVkAXRr6— Citizens Movement, East Bengaluru (@east_bengaluru) January 8, 2024
ಈ ಬಗ್ಗೆ ಸಾಫ್ಟ್‌ವೇರ್ ಎಂಜಿನಿಯರ್ ಚರಣ್ ಪಾಲ್ ಸಿಂಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವು ಜನ ಕಮೆಂಟ್ ಮಾಡಿದ್ದಾರೆ.