‘ನಿನಗೆ ಕೆಲಸದ ಅನುಭವವಿದೆ ಹಾಗಾಗಿ, ಹೆಚ್ಚು ಕೆಲಸ ಮಾಡು’ ಎಂದು ಹೇಳಿದ ಸಹೋದ್ಯೋಗಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಸದ್ಯ ಆರೋಪಿಯನ್ನು ಬೇಗೋರು ಪೊಲೀಸರು ಬಂಧಿಸಿದ್ದಾರೆ.
ಗುಲ್ಫಾಮ್ ಮೃತ ವ್ಯಕ್ತಿ. ಈತನು ಮೂಲತಃ ಉತ್ತರ ಪ್ರದೇಶದ ಬರೇಲಿಯ ಮುರ್ಷಿದಾಬಾದ್ ಗ್ರಾಮದವನು. ದಿಲ್ಖುಷ್ ಬಂಧಿತ ಆರೋಪಿ. ಈತನು ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದಾನೆ.
ಬಂಧಿತ ಆರೋಪಿ ಫ್ಯಾಬ್ರಿಕೇಟರ್ ಆಗಿ ದೇವರಚಿಕ್ಕನಹಳ್ಳಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಮೃತ ವ್ಯಕ್ತಿಯೂ ಅಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದನು.
ನಿನಗೆ ಕೆಲಸದ ಅನುಭವವಿದೆ ಹಾಗಾಗಿ, ನೀನು ಹೆಚ್ಚು ಕೆಲಸ ಮಾಡು ಎಂದು ಮೃತ ಗುಲ್ಫಾಮ್, ದಿಲ್ಖುಷ್ ಮೇಲೆ ಒತ್ತಡ ಹೇರುತ್ತಿದ್ದನು. ಈ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿತ್ತು ಎಂದು ತಿಳಿದುಬಂದಿದೆ. ಒಂದು ದಿನ ಗುಲ್ಫಾಮ್ ಮಲಗಿದ್ದಾಗ ಆತನ ಮೇಲೆ ದಿಲ್ಖುಷ್ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದನು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗೀಸರ್ ಗ್ಯಾಸ್ ಸೋರಿಕೆಯಿಂದ ಯುವತಿ ಸಾವು
ಘಟನಾ ಸ್ಥಳಕ್ಕೆ ಆಗಮಿಸಿ ಬೇಗೋರು ಪೊಲೀಸರು ಪರಿಶೀಲನೆ ನಡೆಸಿ, ತನಿಖೆ ಮುಂದುವರೆಸಿದ್ದರು. ಈ ವೇಳೆ, ಘಟನೆ ನಡೆದ ಬಳಿಕ ಗುಲ್ಫಾಮ್ ಜತೆಗೆ ಮಲಗುತ್ತಿದ್ದ ವ್ಯಕ್ತಿ ದಿಲ್ಖುಷ್ ವಾರಾಣಾಸಾಗಿ ತೆರಳಿದ್ದನು. ಇದರಿಂದ ಅನುಮಾನಗೊಂಡ ಪೊಲೀಸರು ವಾರಣಾಸಿಗೆ ತೆರಳಿ ದಿಲ್ಖುಷ್ನನ್ನು ಅವನ ನಿವಾಸದಲ್ಲಿ ಬಂಧಿಸಿದ್ದಾರೆ. ಆತನ ಕೂಡ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಬೇಗೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.