ಮೈ ತುಂಬಾ ಸಾಲ ಮಾಡಿಕೊಂಡ ಅಸಿಸ್ಟೆಂಟ್ ಲೋಕೋ ಪೈಲಟ್ ಸಾಲ ತೀರಿಸೋದಕ್ಕೆ ರೈಲ್ವೆ ಪ್ರಯಾಣಿಕರ ವಸ್ತುಗಳ ಕಳ್ಳತನ ಮಾಡುತ್ತಿದ್ದನು. ಅರಸೀಕೆರೆ ರೈಲ್ವೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ.
ಅಸಿಸ್ಟೆಂಟ್ ಲೋಕೋ ಪೈಲಟ್ ಪಡಿ ಸ್ವರಾಜ್ ಬಂಧಿತ ಆರೋಪಿ. ರೈಲ್ವೆ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಈತನಿಂದ ₹3 ಲಕ್ಷದ 33 ಸಾವಿರದ 489 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಪಡಿ ಸ್ವರಾಜ್ ಕಳೆದ ಒಂದು ವರ್ಷದ ಹಿಂದೆ ಬಡ ಕುಟುಂಬದ ಹುಡುಗಿಯನ್ನು ಮದುವೆಯಾಗಿದ್ದನು. ಈ ವೇಳೆ, ಸುಮಾರು 13 ಲಕ್ಷ ಸಾಲ ಮಾಡಿಕೊಂಡಿದ್ದನು. ಸಾಲದ ಕಿರಿಕಿರಿಗೆ ಬೇಸತ್ತ ಈತ ಸಾಲ ತೀರಿಸಲಾಗದೇ ಕಳ್ಳತನ ಮಾಡಲು ಪ್ರಾರಂಭ ಮಾಡಿದ್ದನು.
ಬೆಂಗಳೂರಿನಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ಓರ್ವ ಪ್ರಯಾಣಿಕರು ಮಲಗಿದ್ದಾಗ ಅವರ ಲ್ಯಾಪ್ ಟಾಪ್ ಬ್ಯಾಗ್ ಕಳ್ಳತನವಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡಾಗ ಪಡಿ ಸ್ವರಾಜ್ ಕೈಚಳಕ ಬಯಲಾಗಿದೆ.
ಈ ಸುದ್ದಿ ಓದಿದ್ದೀರಾ? ತಪಾಸಣೆಯಿಂದ ಸಿಟ್ಟಾದ ಪ್ರಯಾಣಿಕನೊಬ್ಬ ‘ಬ್ಯಾಗ್ನಲ್ಲಿ ಬಾಂಬ್’ ಇದೆ ಎಂದ: ಪೊಲೀಸರ ವಶಕ್ಕೆ ಆರೋಪಿ
ಅನುಮಾನಗೊಂಡ ಪೊಲೀಸರು ಪರಿ ಸ್ವರಾಜ್ ಬ್ಯಾಗ್ ಪರಿಶೀಲನೆ ನಡೆಸಿದಾಗ ಆತನ ಬ್ಯಾಗ್ನಲ್ಲಿ ಮೊಬೈಲ್ ಫೋನ್, ಆಭರಣ ಪತ್ತೆಯಾಗಿದೆ. ಆರೋಪಿಯ ವಿಚಾರಣೆಯಿಂದ ಒಟ್ಟು 5 ಪ್ರಕರಣ ಬೆಳಕಿಗೆ ಬಂದಿದೆ.