ರಾಜ್ಯ ರಾಜಧಾನಿ ಬೆಂಗಳೂರಿನ ‘ನಮ್ಮ ಮೆಟ್ರೋ’ ರೈಲಿನಲ್ಲಿ ಯುವಕ-ಯುವತಿ ಅಸಭ್ಯವಾಗಿ ವರ್ತಸಿದ ಘಟನೆ ವರದಿಯಾಗಿದೆ.
ಸದ್ಯ ಅಸಭ್ಯವಾಗಿ ವರ್ತನೆ ಮಾಡಿದ ಯುವಕ-ಯುವತಿ ವಿರುದ್ಧ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದ ಮೂಲಕ ಬೆಂಗಳೂರು ಮೆಟ್ರೋ ರೈಲು ಸಂಚಾರ ನಿಗಮ (ಬಿಎಂಆರ್‌ಸಿಎಲ್)ಕ್ಕೆ ದೂರು ನೀಡಿದ್ದಾರೆ.
“ನಮ್ಮ ಮೆಟ್ರೋದಲ್ಲಿ ಏನಾಗತಾ ಇದೆ. ನಮ್ಮ ಮೆಟ್ರೋ ಬೆಂಗಳೂರು ಕ್ರಮೇಣ ಬದಲಾಗಿ ದೆಹಲಿ ಮೆಟ್ರೋ ಆಗಿ ಬದಲಾವಣೆಯಾಗುತ್ತಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳಿ. ಹುಡುಗಿ ಹುಡುಗನಿಗೆ ಮುತ್ತು ನೀಡುತ್ತಿದ್ದಾಳೆ” ಎಂದು ಬರೆದುಕೊಂಡು ಕೆಪಿಎಸ್‌ಬಿ 52 ಎಂಬ ಎಕ್ಸ್ (ಟ್ವಿಟರ್) ಖಾತೆ ಮೂಲಕ ಪೋಸ್ಟ್ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ: ಗೃಹ ಸಚಿವ ಜಿ ಪರಮೇಶ್ವರ್
ನಮ್ಮ ಮೆಟ್ರೋದ ಬಾಗಿಲು ಬಳಿ ಯುವಕ-ಯುವತಿ ನಿಂತು ತಬ್ಬಿಕೊಂಡಿದ್ದು, ಯುವತಿ ಯುವಕನಿಗೆ ಮುತ್ತು ನೀಡುತ್ತಿರುವ ದೃಶ್ಯವನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ. ಬಿಎಂಆರ್ಸಿಎಲ್ಗೆ ಈ ವಿಡಿಯೋ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.