ಕಳೆದ ಕೆಲವು ದಿನಗಳಿಂದ ಪ್ಯಾಲೆಸ್ತೀನ್-ಇಸ್ರೇಲ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಈ ಯುದ್ಧದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಪ್ಯಾಲೆಸ್ತೀನ್ ನಾಗರೀಕರ ಮೇಲೆ ಇಸ್ರೇಲ್ ದೌರ್ಜನ್ಯ ನಡೆಸುತ್ತಿದೆ. ಸಂಘರ್ಷವನ್ನು ಕೊನೆಗೊಳಿಸಬೇಕು. ಪ್ಯಾಲೆಸ್ರೀನಿಯರಿಗೆ ಅವರ ಹಕ್ಕುಗಳನ್ನು ನೀಡಬೇಕೆಂದು ಕಮ್ಯುನಿಷ್ಠ ಸಂಘಟಣೆಗಳ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಿಪಿಐ, ಸಿಪಿಐಎಂ, ಸಿಪಿಐಎಂಎಲ್ ಪಕ್ಷ ಸೇರಿದಂತೆ ಕಮ್ಯುನಿಷ್ಟ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ಪ್ಯಾಲೇಸ್ತಿನ ಪರ ಘೋಷಣೆ ಕೂಗಿದರು. ಭಾರತವು ಪ್ಯಾಲೆಸ್ತೀನ್ ಪರ ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಂಚಾರ ದಟ್ಟಣೆಗೆ ನಮ್ಮ ಮೆಟ್ರೋ ಮದ್ದು; ನಿತ್ಯ 7 ಲಕ್ಷ ಪ್ರಯಾಣಿಕರ ಓಡಾಟ
ಪ್ರತಿಭಟನೆ ನಡೆಸುತ್ತಿರುವ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.