ಅಲಂಕಾರಿಕ ಅಗರಬತ್ತಿಯ ಕಂಟೈನರ್‌ನಲ್ಲಿ ₹17,23,117 ಮೌಲ್ಯದ 279.5 ಗ್ರಾಂ ಚಿನ್ನದ ತುಂಡುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಫೆಬ್ರುವರಿ 15ರಂದು ಕುವೈತ್‌ನಿಂದ ವಿಮಾನದ ಮೂಲಕ ಬೆಂಗಳೂರಿನ ಬಂದ ಓರ್ವ ಭಾರತೀಯ ಪ್ರಯಾಣಿಕನನ್ನು ತಡೆದು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
Bengaluru Air Customs intercepted pax attempting to smuggle crude gold cut pieces concealed inside a decorative incense Burner Container. The seized gold cut pieces totally weigh 279.5 gms valued at Rs. 17,23,117/-.#IndianCustomsAtWork pic.twitter.com/kRSJRpsKyk
— Bengaluru Customs (@blrcustoms) February 15, 2024
ಪರಿಶೀಲನೆ ವೇಳೆ, ಅಲಂಕಾರಿಕ ಧೂಪದ್ರವ್ಯ ಬರ್ನರ್ ಕಂಟೈನರ್‌ನಲ್ಲಿ ಬಚ್ಚಿಟ್ಟಿದ್ದ ಕಚ್ಚಾ ಚಿನ್ನದ ತುಣುಕುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದು ಪತ್ತೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಇಸ್ರೋದಲ್ಲಿ 224 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ತಪಾಸಣೆ ವೇಳೆ ಒಟ್ಟು 279.5 ಗ್ರಾಂ ತೂಕದ ₹17,23,117 ಮೌಲ್ಯದ ಚಿನ್ನದ ಕಟ್ ತುಂಡುಗಳು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.