ಮಳೆಯ ಅಭಾವ ಮತ್ತು ಅಂತರ್ಜಲ ಮಟ್ಟ ಕುಸಿತದಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಕುಡಿಯುವ ನೀರಿಗೂ ಜನರು ಪರಿತಪಿಸುವಂತಾಗಿದೆ. ಇದೀಗ, ಧೋಬಿ ಘಾಟಗಳನ್ನು ನಂಬಿ ಜೀವನ ಸಾಗಿಸುತ್ತಿರುವ ದೋಬಿಗಳ ಮೇಲೆ ಈ ನೀರಿನ ಸಮಸ್ಯೆ ತೀವ್ರ ಹೊಡೆತ ನೀಡುತ್ತಿದೆ. ಸಾಮಾನ್ಯವಾಗಿ ಬೇಸಿಗೆ ಸಮಯದ ಕಾಲಾರಂಭದಲ್ಲಿ ದೋಬಿಗಳು ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.
ನಗರದಲ್ಲಿ ಸುಮಾರು 40 ಧೋಬಿ ಘಾಟ್‌ಗಳಿವೆ ಮತ್ತು ಹೆಚ್ಚಿನ ಘಾಟ್‌ಗಳು ನೀರಿನ ಸಮಸ್ಯೆಗಳನ್ನು ಎದುರಿಸುತ್ತಿವೆ. ಲಭ್ಯವಿರುವ ನೀರಿನ ಸಮಾನ ಬಳಕೆಗೆ ಕೆಲವರು ಪಾಳಿಯಲ್ಲಿ ಕೆಲಸ ಮಾಡಿದರೆ, ಇನ್ನು ಕೆಲವರು ನೀರಿನ ಟ್ಯಾಂಕರ್‌ಗಳನ್ನು ಬುಕ್ ಮಾಡುತ್ತಿದ್ದಾರೆ.
“ಕಾರ್ಮಿಕರು ಕೇವಲ ಒಂದು ಬೋರ್‌ವೆಲ್ ಮೇಲೆ ಅವಲಂಬಿತರಾಗಿದ್ದಾರೆ. ನಮಗೆ ನೀರು ಕೊಡುವ ಇತರ ಮೂರು ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಈಗ ಒಂದೇ ಬೋರ್‌ವೆಲ್ ಇದೆ. ಆ ಬೋರ್‌ವೆಲ್‌ನಲ್ಲಿಯೂ ಇದೀಗ ಕಡಿಮೆ ನೀರು ಇದೆ” ಎಂದು ರಾಜಾಜಿನಗರ ದೋಬಿ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ ದಿ ಹಿಂದೂಗೆ ಹೇಳಿರುವುದು ವರದಿಯಾಗಿದೆ.
“ನೀರನ್ನು ಸಂರಕ್ಷಿಸುವ ಸಲುವಾಗಿ ಘಾಟ್‌ನಲ್ಲಿ ಬಟ್ಟೆ ತೊಳೆಯುವ ಮತ್ತು ಒಣಗಿಸುವ ಕೆಲಸದಲ್ಲಿ ತೊಡಗಿರುವ 35 ಕಾರ್ಮಿಕರು ಈಗ ಪ್ರತಿ ಶಿಫ್ಟ್‌ಗೆ ಐದರಿಂದ ಹತ್ತು ಜನರ ಸಣ್ಣ ಗುಂಪುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ದಿನನಿತ್ಯ ಕಾರ್ಮಿಕರು ಜನರಿಂದ 4,500 ರಿಂದ 5,000 ಆರ್ಡ್‌ರ್ ತೆಗೆದುಕೊಳ್ಳುತ್ತಿದ್ದರು. ಇದೀಗ, ನೀರಿನ ಸಮಸ್ಯೆ ಇರುವ ಹಿನ್ನೆಲೆ, ಆರ್ಡರ್ ತೆಗೆದುಕೊಳ್ಳುವುದನ್ನು 2,000 ರಿಂದ 2,500 ಕ್ಕೆ ಕಡಿತ ಮಾಡಿದ್ದಾರೆ. ಇದರಿಂದ ಅವರ ಆದಾಯವು ದಿನಕ್ಕೆ ₹1,000 ದಿಂದ ₹500 ರೂಪಾಯಿಗಳಿಗೆ ಕುಸಿಯುವಂತೆ ಮಾಡಿದೆ” ಎಂದರು.
“ವೈಯಾಲಿಕಾವಲ್ ಧೋಬಿ ಘಾಟ್‌ನಲ್ಲಿ ಯಾವಾಗಲೂ ಸೀಮಿತ ನೀರಿನಿಂದ ಕಾರ್ಯನಿರ್ವಹಿಸಲಾಗುತ್ತಿದೆ. ಆದರೆ, ಸದ್ಯ ಈಗಿರುವ ನೀರಿನ ಸಮಸ್ಯೆ ಬಗ್ಗೆ ನಾವು ಮಾತನಾಡುವ ಹಾಗಿಲ್ಲ” ಎಂದು ಹೆಸರು ಹೇಳಲಿಚ್ಚಿಸದ ವ್ಯಕ್ತಿಯೊಬ್ಬರು ಹೇಳಿದರು.
“ಮೂರು ಬಾವಿಗಳಲ್ಲಿ ಎರಡು ಮಾತ್ರ ಕಾರ್ಯನಿರ್ವಹಿಸುತ್ತಿವೆ. ವೈಯಕ್ತಿಕ ಅಗತ್ಯಗಳಿಗಾಗಿ ಬಳಸುವ ಬೋರ್‌ವೆಲ್ ನೀರು ಸಹ ಸಾಕಾಗುವುದಿಲ್ಲ. ನಾವು ಮಳೆಗಾಗಿ ಕಾಯುತ್ತೇವೆ. ಆದರೆ, ಬಟ್ಟೆಗಳನ್ನು ಒಗೆಯಲು ಮತ್ತು ಒಣಗಿಸಲು ಸಾಧ್ಯವಾಗದ ಕಾರಣ ಮಳೆ ಕೂಡ ಒಳ್ಳೆಯದಲ್ಲ. ಹತ್ತಿರದ ಕೆಲವು ಆಸ್ಪತ್ರೆಗಳು ಮತ್ತು ಹೋಟೆಲ್‌ಗಳಿಂದ ಅವರ ದೈನಂದಿನ ಬೆಡ್‌ಶೀಟ್‌ಗಳು, ಹೊದಿಕೆಗಳು ಮತ್ತು ಟವೆಲ್‌ಗಳ ಹೊರೆ ಕಡಿಮೆಯಾಗಿಲ್ಲ” ಎಂದು ಘಾಟ್‌ನ ಹಿರಿಯ ಕಾರ್ಮಿಕರೊಬ್ಬರು ಹೇಳಿದರು.
“ಗವಿಪುರಂ ಧೋಬಿ ಘಾಟ್‌ನಲ್ಲಿ ಕಾರ್ಮಿಕರು ಟ್ಯಾಂಕರ್ ನೀರನ್ನು ಬಳಸುತ್ತಿದ್ದಾರೆ. ಆದರೆ, ಹಲಸೂರು ಕೆರೆಯ ಬಳಿಯ ಘಾಟ್ ಜನ ಇದೀಗ ತಮ್ಮ ಆವರಣದಲ್ಲಿನ ಸಿಹಿನೀರಿನ ಬಾವಿ ಮತ್ತು ಬೋರ್‌ವೆಲ್‌ನ ನೀರಿನಿಂದ ಬದುಕುವಂತಾಗಿದೆ. ಆದರೆ, ಏಪ್ರಿಲ್ ವೇಳೆಗೆ ಪರಿಸ್ಥಿತಿ ಸುಧಾರಿಸದಿದ್ದರೆ, ಮುಂದೆ ದೋಬಿಗಳ ಜೀವನ ಕಷ್ಟಕರವಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೂರು ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿದ ಮಲತಂದೆ ಮತ್ತು ತಾಯಿ
“ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ 14.7 ಮಿಮೀ ಮಳೆಯಾಗಬೇಕಿತ್ತು. ಆದರೆ, ಇದುವರೆಗೆ ಮಳೆಯಾಗಿಲ್ಲ” ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
“ಮುಂದಿನ ವಾರ (ಮಾರ್ಚ್ 15-22) ಶುಷ್ಕ ಹವಾಮಾನವನ್ನು ಮುನ್ಸೂಚಿಸುತ್ತದೆ. ಹಗಲಿನಲ್ಲಿ ಮೋಡಗಳು ರೂಪುಗೊಳ್ಳುತ್ತವೆ ಮತ್ತು ರಾತ್ರಿಯಲ್ಲಿ ಕರಗುತ್ತವೆ. ನಾಲ್ಕನೇ ವಾರದಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ” ಎಂದು ಹವಾಮಾನ ಇಲಾಖೆ ತಜ್ಞ ಎ ಪ್ರಸಾದ್ ಹೇಳಿದರು.