ಬೆಂಗಳೂರು | ಸಾಂಪ್ರದಾಯಿಕ ಗರಡಿ ಮನೆಗೆ ಹೂಡಿಕೆ ಮಾಡಿದ ಕ್ರಿಕೆಟಿಗ ಧೋನಿ

Date:

Advertisements

ಕ್ರಿಕೆಟ್‌ ಇತಿಹಾಸದಲ್ಲಿ ಶ್ರೇಷ್ಠ ನಾಯಕ ಎಂದೆನಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ಅವರು ಇನ್ನುಮುಂದೆ ಬೆಂಗಳೂರಿನಲ್ಲೊಂದು ಉದ್ಯಮ ಆರಂಭಿಸಲಿದ್ದಾರೆ. ಹೌದು, ಆಧುನಿಕ ಗರಡಿ ಮನೆ ತಗ್ಡಾ ರಹೋ ಫಿಟ್ನೆಸ್‌ ಸ್ಟಾರ್ಟಪ್‌ಗೆ ಅವರು ಹೂಡಿಕೆ ಮಾಡಿದ್ದಾರೆ. ಆದರೆ, ಸ್ಟಾರ್ಟಪ್ ಮಾಲೀಕರು ಧೋನಿ ಮಾಡಿದ ಹೂಡಿಕೆಯ ಮೊತ್ತ ಅಥವಾ ಖರೀದಿಸಿದ ಷೇರುಗಳ ಸಂಖ್ಯೆಯ ಮಾಹಿತಿಯನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ.

ತಗ್ಡಾ ರಹೋ ವ್ಯಾಯಾಮ ಶಾಲೆಯು ಸಾಂಪ್ರದಾಯಿಕ ಶೈಲಿಯ ವ್ಯಾಯಾಮ ಪದ್ದತಿಗೆ ಆಧುನಿಕ ಸ್ಪರ್ಶ ನೀಡುವ ಕಂಪನಿಯಾಗಿದೆ. ಸಾಂಪ್ರದಾಯಿಕ ಗರಡಿ ಮನೆಗಳಲ್ಲಿರುವ ವ್ಯಾಯಾಮ ಸಲಕರಣೆಗಳನ್ನು ಬಳಸಿ ಫಿಟ್ನೆಸ್ ಕಲ್ಪಿಸಲಾಗುತ್ತದೆ. ಮನೀಶ್ ಮಲ್ಹೋತ್ರಾ ಅವರು ಸಂಸ್ಥಾಪಿಸಿದ ಈ ಫಿಟ್ನೆಸ್ ಸ್ಟಾರ್ಟಪ್​ನ ಮುಖ್ಯ ಕಚೇರಿ ಬೆಂಗಳೂರಿನಲ್ಲಿದೆ.

ಈ ತರಬೇತಿ ಕೇಂದ್ರಗಳನ್ನು ‘ಡಗ್‌ ಔಟ್’ ಎಂದು ಕರೆಯಲಾಗುತ್ತದೆ. ಈಗಾಗಲೇ, ಬೆಂಗಳೂರಿನ ಅಲಸೂರಿನ ಎಸ್​ಯುಎಫ್​ಸಿ ಗ್ರೌಂಡ್ಸ್ ಹಾಗೂ ಹೆಚ್​ಎಸ್​ಆರ್ ಲೇಔಟ್​ನಲ್ಲಿ ಡಗ್ ಔಟ್​ಗಳಿವೆ. ಈ ಸೆಂಟರ್‌ಗಳಲ್ಲಿ ಹಲವು ಜನ ಟ್ರೆನಿಂಗ್ ಪಡೆಯುತ್ತಿದ್ದಾರೆ. ಈ ಡಗ್‌ ಔಟ್‌ಗಳು ಬೆಳಗ್ಗೆ 6:30-10 ಹಾಗೂ ಸಂಜೆ 5ರಿಂದ 9ರವರೆಗೂ ತೆರೆದಿರುತ್ತವೆ.

Advertisements

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಕಲಿ ಟಿಕೆಟ್ ತೋರಿಸಿ ವಿಮಾನ ನಿಲ್ದಾಣದ ಟರ್ಮಿನಲ್ ಒಳಗೆ ಪ್ರವೇಶಿಸಿದ ಮಹಿಳೆ

ಸಾಂಪ್ರದಾಯಿಕ ಗರಡಿ ಮನೆಗಳಲ್ಲಿರುವ ವ್ಯಾಯಾಮ ಸಲಕರಣೆಗಳನ್ನು ಬಳಸಿ ಫಿಟ್ನೆಸ್‌ ತರಬೇತಿ ಕೊಡಲಾಗುತ್ತದೆ. ಸಾಂಪ್ರದಾಯಿಕ ಉಪಕರಣದ ಜೊತೆಗೆ ಆಧುನಿಕ ತಂತ್ರವನ್ನು ಕಲಿಸಿಕೊಡಲಾಗುತ್ತದೆ.

ಈ ಬಗ್ಗೆ ಮಾತನಾಡಿರುವ ಮಹೇಂದ್ರ ಸಿಂಗ್‌ ಧೋನಿ, “ತಗ್ಡಾ ರಹೋ ತುಂಬಾ ಕುತೂಹಲಕಾರಿ ಎಂದೆನಿಸುತ್ತಿದೆ. ಈ ತಗ್ದಾ ಜನರು ಮರೆತು ಹೋಗಿರುವ ದೈಹಿಕ ಕಸರತ್ತನ್ನು ಮರಳಿ ತರುತ್ತಿದೆ” ಎಂದು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X