ಮರದ ಕೊಂಬೆ ಮುರಿದು ಬೈಕ್ ಸವಾರನೊಬ್ಬನ ಬೆನ್ನು ಮೂಳೆ ಮುರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಾಗರಬಾವಿ ನಿವಾಸಿ ಚಂದನ್ ಗಾಯಗೊಂಡ ವ್ಯಕ್ತಿ. ಅವರು ರಿಚ್‌ಮಂಡ್ ರಸ್ತೆಯಲ್ಲಿರುವ ಫೈನಾನ್ಸ್ ಕಂಪನಿವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಮಾರ್ಚ್ 7ರಂದು ಬೆಳಿಗ್ಗೆ ಕಚೇರಿಗೆ ಹೋಗುತ್ತಿದ್ದಾಗ ರಸ್ತೆಗೆ ಚಾಚಿಕೊಂಡಿದ್ದ ಮರದ ಕೊಂಬೆ ಮುರಿದು ಚಂದನ್ ಮೇಲೆ ಬಿದ್ದಿದೆ.
ಘಟನೆಯಲ್ಲಿ ಅವರ ಕುತ್ತಿಗೆಗೆ ಗಾಯವಾಗಿದೆ ಮತ್ತು ಬೆನ್ನು ಮೂಳೆ ಮುರಿದಿದೆ. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಂದನ ಅವರು ಕಳೆದ ಹದಿನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮರದ ಕೊಂಬೆ ಬೀಳುವಂತಿದ್ದರೂ ತೆರುವು ಮಾಡದ ಖಾಸಗಿ ಶಾಲೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರುದ್ಧ ಆಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ರಧಾನಿ ಮೋದಿ ತನಿಖಾ ಸಂಸ್ಥೆ ಬಳಸಿ ಕೇಜ್ರಿವಾಲ್‌ರನ್ನು ಬಂಧಿಸಿದ್ದಾರೆ: ಮುಖ್ಯಮಂತ್ರಿ ಚಂದ್ರು
ಖಾಸಗಿ ಶಾಲೆಯ ಆವರಣದಲ್ಲಿದ್ದ ಈ ಮರದ ಕೊಂಬೆಯನ್ನು ತೆಗೆಯುವಂತೆ ಹಲವರು ಬಿಬಿಎಂಪಿಗೆ ದೂರು ನೀಡಿದ್ದರು. ಆದರೂ ಸಹ ಎಚ್ಚೆತ್ತುಕ್ಕೊಳ್ಳದ ಅಧಿಕಾರಗಳ ನಿರ್ಲಕ್ಷ್ಯದಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.