ಭ್ರೂಣ ಹತ್ಯೆ ಪ್ರಕರಣಗಳು ಒಂದಾಂದ ಮೇಲೊಂದರಂತೆ ಬೆಳಕಿಗೆ ಬರುತ್ತಿರುವುದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಸದ್ಯ ರಾಜ್ಯದಲ್ಲಿ ಭ್ರೂಣ ಹತ್ಯೆಯ ಕೃತ್ಯದ ಬಗ್ಗೆ ಭಾರೀ ಸುದ್ದಿಯಾಗುತ್ತಿದೆ. ಈ ಪ್ರಕರಣದಲ್ಲಿ ಕೆಲ ವೈದ್ಯರು, ನರ್ಸ್‌ಗಳು ಬಂಧನವಾಗಿದ್ದಾರೆ. ಈ ನಡುವೆ, ತನ್ನ ಗರ್ಭದಲ್ಲಿ ಬೆಳೆಯುತ್ತಿದ್ದ ಭ್ರೂಣವನ್ನು ಪ್ರಿಯಕರ ಹತ್ಯೆ ಮಾಡಿಸಿದ್ದಾನೆ ಎಂದು ಯುವತಿಯೊಬ್ಬಳು ಆರೋಪಿಸಿದ್ದಾಳೆ.
ಫೇಸ್ಬುಕ್ನಲ್ಲಿ ತನ್ನ ಪ್ರಿಯಕರ ಬಾಲಕೃಷ್ಣ ಸುನೀಲ್ ಎಂಬಾತನ ವಿರುದ್ಧ ಆರೋಪ ಮಾಡಿದ್ದಾರೆ. ಆತ ತನ್ನ ಗರ್ಭದಲ್ಲಿ ಭ್ರೂಣವನ್ನು ಹತ್ಯೆ ಮಾಡಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಹಾಸನ ಜಿಲ್ಲಾ ಪೊಲೀಸರು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿ ಪ್ರಿಯಕರನ ವಿರುದ್ಧ ದೂರು ನೀಡಿದ್ದಾಳೆ.
ಈ ಸುದ್ದಿ ಓದಿದ್ದೀರಾ? ಮುಂದಿನ ಎರಡು ದಿನ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ
ಯುವತಿ ಪೋಸ್ಟ್‌ನಲ್ಲಿ ಏನಿದೆ?
ಬಾಲಕೃಷ್ಣ ಸುನೀಲ್ ಎಂಬಾತ ಕಳೆದ ಆರು ವರ್ಷಗಳಿಂದ ನನ್ನನ್ನು ಪ್ರೀತಿಸಿ, ಮದುವೆ ಆಗುತ್ತೀನಿ ಎಂದು ಮೋಸ ಮಾಡಿದ್ದಾನೆ. ಬೆಂಗಳೂರಿನಲ್ಲಿ ಗಂಡ ಹೆಂಡತಿಯರಂತೆ ಒಟ್ಟಿಗೆ ಇದ್ದೆವು. ಅಲ್ಲದೇ, ನನ್ನನ್ನು ಮದುವೆ ಆಗುವುದಾಗಿ ವಂಚಿಸಿ, ದೈಹಿಕವಾಗಿ ಬಳಸಿಕೊಂಡು ಗರ್ಭಿಣಿಯಾಗುವಂತೆ ಮಾಡಿ, ಕೊನೆಗೆ ಭ್ರೂಣ ಹತ್ಯೆ ಮಾಡಿದ್ದಾನೆ. ಇದರ ಜತೆಗೆ ನನ್ನಲ್ಲಿದ್ದ ಹಣವನ್ನೂ ದೋಚಿದ್ದಾನೆ.
ಇದೀಗ ಬೇರೊಬ್ಬ ಯುವತಿಯೊಂದಿಗೆ ಮದುವೆ ಮಾಡಿಕೊಂಡು ಹಾಸನದ ಸಕಲೇಶಪುರದ ಅಗಲಟ್ಟಿ ಎಂಬ ಊರಿನಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದು, ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾಳೆ.