ಸಾಕುವ ನಾಯಿ ವಿಚಾರಕ್ಕೆ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಜಗಳ ನಡೆದಿದ್ದು, ಬಾಡಿಗೆದಾರರ ಮೇಲೆ ಮಾಲೀಕ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಜೀವನ್ ಭೀಮಾ ನಗರದಲ್ಲಿ ಈ ಘಟನೆ ನಡೆದಿದೆ. ಫೆಬ್ರವರಿ 3 ರಂದು ಮಧ್ಯರಾತ್ರಿ 1 ಗಂಟೆಗೆ ಪ್ಲ್ಯಾಟ್ ಮಾಲೀಕರು ಬಾಡಿಗೆದಾರರ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಪ್ಲ್ಯಾಟ್ ಮಾಲೀಕರು ಬಾಡಿಗೆದಾರರ ಮಹಿಳೆಗೆ ಮನೆಯಲ್ಲಿ ನಾಯಿ ಸಾಕುವಂತಿಲ್ಲ ಎಂದು ಮೊದಲೇ ಸೂಚಿಸಿದ್ದರು. ಇದಕ್ಕೆ ಬಾಡಿಗೆದಾರರು ಒಪ್ಪಿರಲಿಲ್ಲ. ಹೀಗಾಗಿ, ಮನೆ ಖಾಲಿ ಮಾಡುವಂತೆ ಮಾಲೀಕ ಸೂಚಿಸಿದ್ದಾರೆ. ಈ ವೇಳೆ, ಜಗಳ ಆರಂಭವಾಗಿದೆ. ಫೆಬ್ರವರಿ 3 ರಂದು ಮಧ್ಯರಾತ್ರಿ 1 ಗಂಟೆಗೆ ಫ್ಲಾಟ್ಗೆ ಮಾಲೀಕರ ಕಡೆಯ ನಾಲ್ಕೈದು ಮಂದಿ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಎಂಟಿಸಿ ಬಸ್ ಢಿಕ್ಕಿ; ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೃತ್ಯು; ಚಾಲಕನ ಬಂಧನ
ನನ್ನ ಮೇಲೆ ತಡರಾತ್ರಿ ಗ್ಯಾಂಗ್‌ವೊಂದು ಹಲ್ಲೆ ನಡೆಸಿದೆ. ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಠಾಣೆಗೆ ಬಾಡಿಗೆದಾರ ಮಹಿಳೆ ದೂರು ನೀಡಿದ್ದಾರೆ. ಅಲ್ಲದೇ, ಪೊಲೀಸರು ಎಫ್ಐಆರ್ ದಾಖಲಿಸಿಲ್ಲ ಎಂದು ಆರೋಪಿಸಿದ್ದಾರೆ.
ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.