ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ‘ಟ್ರಾಫಿಕ್ ರೂಲ್ಸ್’ ಪಾಲಿಸದವರಿಗೆ ಸಂಚಾರ ವಿಭಾಗ ದಂಡ ವಿಧಿಸುತ್ತದೆ. ಇದೀಗ, ಬೈಕ್ ಚಾಲನೆ ವೇಳೆ ‘ನಂಬರ್ ಪ್ಲೇಟ್’ ಮರೆಮಾಚಿದ್ದ ಸವಾರನ ವಿರುದ್ಧ ಮಹದೇವಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೈಕ್ ಸವಾರ ಮಾಸ್ಕ್‌ನಿಂದ ಗಾಡಿಯ ನಂಬರ್ ಪ್ಲೇಟ್ ಅನ್ನು ಮರೆಮಾಚಿದ್ದರು. ಇದರ ಫೋಟೋ ಸೆರೆ ಹಿಡಿದು ಸಾರ್ವಜನಿಕರೊಬ್ಬರು ಬಿಟಿಪಿ ಪೇಜ್‌ನಲ್ಲಿ ಫೋಟೋ ಶೇರ್ ಮಾಡಿ ದೂರು ದಾಖಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿಶ್ವಕಪ್ ಪಂದ್ಯಾವಳಿಗಳಿಗೆ ಮೆಟ್ರೋದಲ್ಲಿ ವಿಶೇಷ ಟಿಕೆಟ್ ವ್ಯವಸ್ಥೆ
ಬಳಿಕ, ಎಚ್ಚೆತ್ತ ಸಂಚಾರ ಪೊಲೀಸರು ಸವಾರ ಲಕ್ಷ್ಮಣ ಎಂಬುವವರ ಬೈಕ್ ಪತ್ತೆ ಮಾಡಿ, ಜಪ್ತಿ ಮಾಡಿದ್ದಾರೆ. ಬೈಕ್ ಸವಾರನ ವಿರುದ್ಧ ಐಪಿಸಿ ಸೆಕ್ಷನ್ 417 ಹಾಗೂ 418ರ ಅಡಿ ಎಫ್ಐಆರ್ ದಾಖಲು ಮಾಡಿದ್ದಾರೆ. ಜತೆಗೆ ನಿಯಮ ಉಲ್ಲಂಘಿಸಿದ ಹಿನ್ನೆಲೆ, ಬರೋಬ್ಬರಿ ₹15 ಸಾವಿರ ದಂಡ ವಿಧಿಸಿದ್ದಾರೆ.