ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಂಗಾಮದಲ್ಲಿ 10 ತಂಡಗಳ ಹಣಾಹಣಿ ನಡೆಯುತ್ತಿದೆ. ಈಗಾಗಲೇ, ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ಕೆಕೆಆರ್ ತಂಡ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದೆ. ಆದರೀಗ, ಫ್ಲೇ ಆಫ್ ಕನಸನ್ನು ಇನ್ನು ಜೀವಂತವಾಗಿರಿಸಿಕೊಂಡಿರುವ ಆರ್‌ಸಿಬಿಗೆ ಉಳಿದಿರುವ ಎರಡು ಪಂದ್ಯಗಳು ನಿರ್ಣಾಯಕವಾಗಿವೆ.
ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ)ಯ ಎರಡು ನಿರ್ಣಾಯಕ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಹೈವೋಲ್ಟೆಜ್ ಅಂತಾನೇ ಕರೆಯಿಸಿಕೊಳ್ಳುತ್ತಿರುವ ಈ ಪಂದ್ಯ ಇಂದು ಅಂದರೆ, ಮೇ 12ರಂದಯ ಸಂಜೆ 7:30ಕ್ಕೆ ನಡೆಯಲಿದೆ. ಪ್ಲೇ ಆಫ್‌ಗೆ ಏರಲು ಉಭಯ ತಂಡಗಳಿಗೂ ಈ ಪಂದ್ಯ ನಡೆಯುವುದು ಅತ್ಯವಶ್ಯಕವಾಗಿದೆ.
ಆದರೆ, ರಾಜ್ಯಾದ್ಯಂತ ಮಳೆ ಸುರಿಯುತ್ತಿದ್ದು, ನಗರದಲ್ಲಿ ಸಾಯಂಕಲದಿಂದ ಮೋಡ ಕವಿದ ವಾತಾವರಣವಿದೆ. ಬೆಂಗಳೂರಿಗೂ ವರುಣ ಆಗಮಿಸುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ಪಂದ್ಯ ನಡೆಯುವವ ವೇಳೆಯೂ ಮಳೆಯಾಗಬಹುದು ಎನ್ನಲಾಗಿದೆ. ಮಳೆ ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆಗಳು ಹೆಚ್ಚಾಗಿದೆ.
ಮೇ 12ರ ಮಧ್ಯಾಹ್ನದಿಂದಲೇ ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಧಾರಕಾರ ಮಳೆ ಸುರಿಯುತ್ತಿದೆ. ಹೀಗಾಗಿ, ಇಂದಿನ ಪಂದ್ಯದಲ್ಲಿ ಗೆದ್ದು ಆರ್‌ಸಿಬಿ ಪ್ಲೇಆಫ್ಗೆ ಹತ್ತಿರವಾಗುವುದನ್ನು ನೋಡಬೇಕೆಂದುಕೊಂಡಿದ್ದ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿದೆ.
2ನೇ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್‌ಸಿಬಿ ಎದುರಾಗಲಿದ್ದು, ಎರಡು ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. ಪ್ಲೇ ಆಫ್ಗಾಗಿ ರೇಸ್ನಲ್ಲಿರುವ ತಂಡಗಳ ಪೈಕಿ ಎರಡೂ ಪೈಪೋಟಿಯಲ್ಲಿವೆ. ಡೆಲ್ಲಿ 12ರಲ್ಲಿ ತಲಾ 6 ಗೆಲುವು ಸೋಲು ಕಂಡಿದೆ. ರನ್ರೇಟ್ನಲ್ಲಿ -0.316 ಹೊಂದಿದ್ದು, ಆರ್‌ಸಿಬಿ ವಿರುದ್ಧ ಗೆದ್ದಲ್ಲಿ ಪಾಯಿಂಟ್ಸ್ ಮತ್ತು ರನ್ರೇಟ್ ಉತ್ತಮವಾಗಲಿದೆ. ಆಗ, ಲಖನೌ ವಿರುದ್ಧದ ಪಂದ್ಯದ ಫಲಿತಾಂಶದ ಮೇಲೆ ತಂಡದ ಹಣೆಬರಹ ಗೊತ್ತಾಗಲಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಾರಿನ ಎಕ್ಸಿಲೇಟರ್ ತುಳಿದ ಬಾಲಕ; ಆಟವಾಡುತ್ತಿದ್ದ ಮಗು ಸಾವು
ಇತ್ತ ಆರ್‌ಸಿಬಿ ಸತತ 5 ಸೋಲುಗಳನ್ನು ಕಂಡ ಬಳಿಕ ಟೂರ್ನಿಯಲ್ಲಿ ಎಲಿಮಿನೇಟ್ ಆಗುವ ಮೊದಲ ತಂಡವಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದ ಫಾಫ್ ಡು ಪ್ಲೆಸಿಸ್ ನೇತೃತ್ವದ ಪಡೆ ಸತತ 4 ಗೆಲುವು ದಾಖಲಿಸಿತು. ಆಡಿರುವ 12ರಲ್ಲಿ 5 ಪಂದ್ಯ ಗೆದ್ದಿದ್ದು, 7ರಲ್ಲಿ ಸೋತು 10 ಪಾಯಿಂಟ್ಸ್ ಹೊಂದಿದೆ. ಆರ್ಆರ್ ವಿರುದ್ಧ ಇಂದು ಚೆನ್ನೈ ಸೋಲಬೇಕು. ಡೆಲ್ಲಿ ವಿರುದ್ಧ ದೊಡ್ಡ ಅಂತರದಲ್ಲಿ ತಾನು ಗೆಲ್ಲಬೇಕು. ಕೊನೆಯ ಪಂದ್ಯ ಸಿಎಸ್ಕೆ ವಿರುದ್ಧ ನಡೆಯಲಿದ್ದು, ಅಲ್ಲಿ ಗೆಲುವೊಂದೇ ಮಂತ್ರವಾಗಿದೆ. ಆಗ ಮಾತ್ರ ಪ್ಲೇಆಫ್ ಹಾದಿಯಲ್ಲಿ ಉಳಿಯಲು ಸಾಧ್ಯ.