ರಾಜ್ಯ ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿ ವಶಪಡಿಸಿಕೊಂಡಿದ್ದಾರೆ.
ನವೆಂಬರ್ 25 ರಂದು ಅನ್ಯ ದೇಶದಿಂದ ಬೆಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕರೊಬ್ಬರನ್ನು ತಡೆ ಹಿಡಿದು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಟ್ರೇ ಒಂದರ ಕಾಗದದ ಕೆಳಗೆ ಚಿನ್ನದ ಪೇಸ್ಟ್ ಅನ್ನು ಹಚ್ಚಿ ಅಂಟಿಸಲಾಗಿತ್ತು. 298.25 ಗ್ರಾಂ ತೂಕದ ಚಿನ್ನವನ್ನು ಟ್ರೇಗಳಲ್ಲಿ ಅಂಟಿಸಿರುವುದು ಪತ್ತೆಯಾಗಿದೆ. ಹಾಗೂ 2 ಮರ್ಕ್ಯುರಿ ಲೇಪಿತ ಚಿನ್ನದ ರಾಡ್‌ಗಳನ್ನು ಚಾಕುಗಳ ಟೊಳ್ಳಾದ ಹಿಡಿಕೆಗಳಲ್ಲಿ ಮರೆಮಾಡಲಾಗಿದೆ.
#IndianCustomsAtWork Based on profiling, pax arriving at KIA from Dubai via 6E-1486 was intercepted by Bengaluru Customs. 2 Mercury coated gold rods concealed in hollow handles of Knives and gold paste sprayed on paper & pasted on trays weighing 298.25gms gold detected. pic.twitter.com/tN2RAJmn8F
— Bengaluru Customs (@blrcustoms) November 25, 2023
6E-1486 ಮೂಲಕ ದುಬೈನಿಂದ ಕೆಐಎಗೆ ಆಗಮಿಸಿದ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.