ಬೆಂಗಳೂರು ನಗರ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬನಶಂಕರಿ 2ನೇ ಹಂತ ದೇವೇಗೌಡ ಪೆಟ್ರೋಲ್ ಬಂಕ್ ವೃತ್ತ, ಎಂ ಕೆ ಪುಟ್ಟಲಿಂಗಯ್ಯ ರಸ್ತೆಯ ನಾನಾ ಕಡೆಗಳಲ್ಲಿ ಅಕ್ರಮವಾಗಿ ಅಳವಡಿಸಲಾಗಿದೆ.
‘ಶ್ರೀ ಕಾರ್ತಿಕ್ ವೆಂಕಟೇಶ ಮೂರ್ತಿ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು’ ಎಂಬ ಬ್ಯಾನರ್‌ಗಳನ್ನು ಅಕ್ರಮವಾಗಿ ಅಳವಡಿಸಿ ನಗರದ ಸೌಂದರ್ಯ ಹಾಳುಮಾಡಿದ್ದಾರೆ. ಈ ಹಿನ್ನೆಲೆ, ಸಾರ್ವಜನಿಕ ಸ್ವತ್ತಿನಲ್ಲಿ ಈ ರೀತಿ ಬ್ಯಾನರ್ ಹಾಕಿದವರ ವಿರುದ್ಧ ಪ್ಲೈಯಿಂದ ಸ್ಕ್ವಾಡ್ ತಂಡದ ನಾಯಕ ಅವೀಶ್ ಹೆಚ್.ಎಂ ರವರು ಮೇ 10ರಂದು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
“ಇಂತಹ ಅಕ್ರಮ ಮತ್ತು ಅನಧಿಕೃತ ಬ್ಯಾನರ್‌ಗಳು ಆಸ್ತಿ ವಿರೂಪ ಕಾಯ್ದೆ ಮತ್ತು ಬಿಬಿಎಂಪಿ ಕಾಯ್ದೆಯ ಉಲ್ಲಂಘನೆಯಾಗಿದ್ದು, ಬಿಬಿಎಂಪಿಯಲ್ಲಿ ಎಲ್ಲಿಯಾದರೂ ಇಂತಹ ಅನಧಿಕೃತ ಪೋಸ್ಟರ್ ಅಥವಾ ಬ್ಯಾನರ್‌ಗಳನ್ನು ಹಾಕಿದರೆ ಎಫ್‌ಐಆರ್ ದಾಖಲಿಸಲಾಗುತ್ತದೆ” ಎಂದು ಪಾಲಿಕೆ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅಕ್ರಮವಾಗಿ ಬ್ಯಾನರ್ ಅಳವಡಿಕೆ : ಎಫ್‌ಐಆರ್ ದಾಖಲು
ಅಕ್ರಮ ಬ್ಯಾನರ್ ಮತ್ತು ಪ್ರದರ್ಶನಗಳ ಬಗ್ಗೆ ದೂರುಗಳನ್ನು ಸ್ಥಳ ಮತ್ತು ಚಿತ್ರದ ಸಮೇತ ಪಾಲಿಕೆಯ ವ್ಯಾಟ್ಸ್‌ಆಪ್ ನಂಬರ್ 94806 85700 ಗೆ ಕಳುಹಿಸಲು ಎಲ್ಲ ನಾಗರಿಕರಲ್ಲಿ ವಿನಂತಿ ಮಾಡಿದೆ.