ಒಳಉಡುಪು ಮತ್ತು ಜೀನ್ಸ್ ಸೊಂಟದ ಪಟ್ಟಿಯ ನಡುವೆ ಚಿನ್ನದ ಪೇಸ್ಟ್ ಅಡಗಿಸಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ರಾಜ್ಯದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಡಗಿನ 24 ವರ್ಷದ ಯುವಕನೊಬ್ಬ ದುಬೈನಿಂದ ಇಂಡಿಗೋ ಏರ್‌ಲೈನ್ಸ್ ಫ್ಲೈಟ್ 6E 1486 ಮೂಲಕ ಡಿ.10 ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ.
#IndianCustomsAtWork 10.12.2023 Pax arriving at KIA from Dubai by flight 6E-1486 was arrested by Bengaluru Air Customs for smuggling 907 grams of foreign origin gold valued at Rs. 55 lakhs. Gold paste was concealed in between layers of underwear and waistline of pants. pic.twitter.com/WmCCX08zdL
— Bengaluru Customs (@blrcustoms) December 11, 2023
ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರನ್ನು ತಪಾಸಣೆ ಮಾಡುವ ವೇಳೆ, ಯುವಕನ ಮೇಲೆ ಅನುಮಾನಗೊಂಡ ಅಧಿಕಾರಿಗಳು ಯುವಕನನ್ನು ತಪಾಸಣೆ ಮಾಡಲು ಮುಂದಾಗಿದ್ದಾರೆ. ಈ ವೇಳೆ, ಆತನ ಲಗೇಜ್ ತಪಾಸಣೆ ನಡೆಸಿದ್ದಾರೆ. ಬಳಿಕ ಯುವಕ ಧರಿಸಿದ್ದ ಕಪ್ಪು ಬಣ್ಣದ ಜೀನ್ಸ್ ಪರಿಶೀಲಿಸಿದಾಗ, ಸೊಂಟ ಭಾಗದಲ್ಲಿರುವ ಪಟ್ಟಿಯ ನಡುವೆ ಚಿನ್ನದ ಪೇಸ್ಟ್ ಅನ್ನು ಒಂದು ಬಿಳಿ ಬಣ್ಣದ ಚಿಕ್ಕ ಚೀಲದಲ್ಲಿ ಇಟ್ಟು ಹೋಲಿಗೆ ಹಾಕಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸ್ನೇಹಿತನ ಜತೆಗೆ ರಾತ್ರಿ ಕಳೆಯಲು ಪತ್ನಿಗೆ ಒತ್ತಾಯಿಸಿದ ಪತಿ ವಿರುದ್ಧ ದೂರು ದಾಖಲು
ತಪಾಸಣೆ ವೇಳೆ, ಯುವಕನಿಂದ ₹55 ಲಕ್ಷ ಮೌಲ್ಯದ 907ಗ್ರಾಂ ಚಿನ್ನದ ಪೇಸ್ಟ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಳ್ಳಸಾಗಣೆ ಮತ್ತು ಕಸ್ಟಮ್ಸ್ ಸುಂಕ ವಂಚನೆಗಾಗಿ ಆತನನ್ನು ಬಂಧಿಸಿದ್ದಾರೆ.