ವಾಹನ ಸವಾರರೊಬ್ಬರಿಗೆ ಕಾರಿನಿಂದ ಡಿಕ್ಕಿ ಹೊಡೆದು ಬೀಳಿಸಿ, ಉದ್ದೇಶಪೂರ್ವಕವಾಗಿ ಅವರ ಮೇಲೆ ವಾಹನ ಚಲಾಯಿಸಿ ಕೊಲೆ ಮಾಡಿದ ಘಟನೆ ರಾಜಧಾನಿ ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ನಡೆದಿದೆ.
ಅಕ್ಟೋಬರ್ 18ರ ಮಧ್ಯರಾತ್ರಿ 12:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಈ ಹತ್ಯೆಯ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಕಾರ್ಪಿಯೋ ವಾಹನ ಚಾಲಕ ದ್ವಿಚಕ್ರ ವಾಹನ ಸವಾರನನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಿರುವ ದೃಶ್ಯಾವಳಿಗಳನ್ನು ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಅಸ್ಗರ್ ಎಂದು ಗುರುತಿಸಲಾಗಿದೆ. ಈ ಪ್ರಕರಣದ ಪ್ರಾಥಮಿಕ ಶಂಕಿತನನ್ನು ಅಮರೀನ್ ಎಂದು ಗುರುತಿಸಲಾಗಿದೆ.
ಕೊಲೆಯಾದ ವ್ಯಕ್ತಿ ಅಸ್ಗರ್ ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದನು. ಅಸ್ಗರ್ ಅವರಿಂದ ಆರೋಪಿ ಅಮರೀನ್ ವಾಹನ ಪಡೆದಿದ್ದನು. ಅಸ್ಗರ್ ಮತ್ತು ಅಮರೀನ್ ನಡುವೆ ₹4 ಲಕ್ಷ ಹಣಕಾಸಿನ ವಿವಾದವಿತ್ತು. ಈ ಹಣಕಾಸಿನ ವಿವಾದ ಇದೀಗ ಹಿಂಸಾತ್ಮಕ ರೂಪಕ್ಕೆ ತಿರುಗಿ ಅಮರೀನ್, ಅಸ್ಗರ್ ಅವರ ಜೀವವನ್ನು ಬಲಿ ತೆಗೆದುಕೊಂಡಿದ್ದಾನೆ.
A man drove a Scorpio #SUV deliberately running over another man in #Bengaluru. The gruesome act was captured on a mobile phone by a passerby and has since gone viral on social media
The incident reportedly occurred in the #PulikeshiNagar area at around 12:30 a.m. on October 18. pic.twitter.com/a3e4Zr8swL
— Madhuri Adnal (@madhuriadnal) November 1, 2023
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮರೀನ್ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಸರ್ಕಾರಿ ಮತ್ತು ಅನುದಾನಿತ ಕನ್ನಡ ಶಾಲೆಗಳ ಸಬಲೀಕರಣಕ್ಕೆ ಪ್ರಾಧಿಕಾರ ರಚನೆಯಾಗಬೇಕು: ನಿರಂಜನಾರಾಧ್ಯ.ವಿ.ಪಿ
ಘಟನೆ ದಿನ
ಅಕ್ಟೋಬರ್ 18ರ ಮಧ್ಯರಾತ್ರಿ 12:30ರ ಸುಮಾರಿಗೆ ಆರೋಪಿ ಅಮರೀನ್ ಎಸ್‌ಯುವಿ ವಾಹನದ ಮೂಲಕ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಅಸ್ಗರ್ ಅವರನ್ನು ಹಿಂಬಾಲಿಸುತ್ತಾ ಬಂದಿದ್ದಾನೆ. ಈ ವೇಳೆ, ಡಿಕ್ಕಿ ಹೊಡೆದು ಉರುಳಿಸಿದ್ದಾನೆ. ಕೆಳಗೆ ಬಿದ್ದ ಅಸ್ಗರ್ ಅವರು ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ರಸ್ತೆಯ ಉದ್ದಗಲಕ್ಕೂ ಓಡಾಡಿದ್ದಾರೆ. ಆದರೂ ಬಿಡದ ಆರೋಪಿ ಅಮರೀನ್ ತನ್ನ ಎಸ್‌ಯುವಿ ಕಾರನ್ನು ಉದ್ದೇಶಪೂರ್ವಕವಾಗಿ ಅಸ್ಗರ್ ಮೇಲೆ ಹರಿಸಿದ್ದಾನೆ. ನಡು ರಸ್ತೆಯಲ್ಲಿ ರಾತ್ರಿಯ ಕಗತ್ತಲಲ್ಲಿ ದಾರುಣವಾಗಿ ಹತ್ಯೆ ಮಾಡಿದ್ದಾನೆ.
ಈ ಘಟನೆ ಸಂದರ್ಭದಲ್ಲಿ ಅಸ್ಗರ್ ಅವರ ಸಹಾಯಕ್ಕೆ ಯಾರು ತೆರಳಿಲ್ಲ ಎಂಬುದು ಸಾರ್ವಜನಿಕರು ಮಾಡಿದ ವಿಡಿಯೋ ಮೂಲಕ ತಿಳಿದು ಬರುತ್ತದೆ.