ಜ್ಯುವೆಲರಿ ಶಾಪ್ ಮಾಲೀಕ ಮನೆಯಲ್ಲಿ ಇರದ ಸಮಯವನ್ನು ನೋಡಿಕೊಂಡ ಮನೆ ಕೆಲಸಗಾರ ಬರೋಬ್ಬರಿ 4 ಕೆಜಿ ಚಿನ್ನ, 34 ಕೆಜಿ ಬೆಳ್ಳಿ, 9 ಲಕ್ಷ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಈ ಬಗ್ಗೆ ನಗರದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.29 ರಂದು ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೇತರಾಮ್ ಮತ್ತು ರಾಕೇಶ್ ಬಂಧಿತ ಆರೋಪಿಗಳು. ಈತನು ಮೂಲತಃ ರಾಜಸ್ಥಾನದವನು ಎಂದು ತಿಳಿದುಬಂದಿದೆ.
ಬೆಂಗಳೂರಿನ ನಗ್ರತ್ ಪೇಟೆಯಲ್ಲಿನ ಕಂಚನ್ ಚಿನ್ನಾಭರಣಗಳ ಮಾಲೀಕ ಅರವಿಂದ್ ಕುಮಾರ್ ಥಾಡೆ ಅವರ ಮನೆಗೆ ಆರೋಪಿ ಕೇತರಾಮ್ ಕಳೆದ ಎರಡು ತಿಂಗಳ ಹಿಂದೆ ಅವರ ಮನೆಗೆ ಕೆಲಸಕ್ಕೆ ಸೇರಿದ್ದನು. ಅವರ ಮನೆಯ ಕೆಲಸ ಮಾಡಿಕೊಂಡು ಇದ್ದನು. ಈತನು ಮಾಲೀಕನೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದನು. ಮಾಲೀಕನ ಜತೆಗೆ ಇದ್ದ ಈತ, ಅವರ ಆರ್ಥಿಕ ವ್ಯವಹಾರಗಳ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡಿದ್ದನು.
ಅರವಿಂದ್ ಕುಮಾರ್ ಥಾಡೆ ಅವರು ತಮ್ಮ ಕುಟುಂಬದೊಂದಿಗೆ ದೀಪಾವಳಿ ಹಬ್ಬಕ್ಕೆ ಮುಂಬೈಗೆ ತೆರಳಿದ್ದಾರೆ. ಅವರು ತೆರಳುವ ವೇಳೆ, ಅವರ ಬ್ಯಾಗ್‌ನಲ್ಲಿಟ್ಟಿದ ಜ್ಯವೆಲ್ಲರಿ ಶಾಪ್ ಕೀಯನ್ನು ಅವರಿಗೆ ಗೊತ್ತಾಗದ ಹಾಗೇ ತೆಗೆದುಕೊಂಡಿದ್ದಾನೆ. ಇತ್ತ ಥಾಡೆ ಅವರ ಕುಟುಂಬ ಮುಂಬೈಗೆ ತೆರಳಿದ ನಂತರ, ರಾಜಸ್ಥಾನ ಮೂಲದ ಅವನದೇ ಊರಿನ ರಾಕೇಶ್ ಹೆಸರಿನ ತನ್ನ ಸ್ನೇಹಿತನನ್ನು ಕರೆಸಿಕೊಂಡಿದ್ದಾನೆ. ಅಕ್ಟೋಬರ್ 29ರಂದು ಅರವಿಂದ್ ಅವರ ಅಂಗಡಿ ಕೀ ತೆಗೆದು ಒಳಗೆ ನುಗ್ಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಜೆಪಿ ಸಂಸದ ದೇವೇಂದ್ರಪ್ಪ ಪುತ್ರನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ಎಫ್‌ಐಆರ್ ದಾಖಲು
ಜ್ಯುವೆಲ್ಲರಿ ಶಾಪ್‌ನಲ್ಲಿದ್ದ ಬರೋಬ್ಬರಿ 4 ಕೆಜಿ ಚಿನ್ನ, 34 ಕೆಜಿ ಬೆಳ್ಳಿ, 9 ಲಕ್ಷ ನಗದು ಕಳ್ಳತನ ಮಾಡಿ, ಪರಾರಿಯಾಗಿದ್ದಾರೆ.
ಥಾಡೆ ಅವರ ಪುತ್ರನಿಗೆ ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣೆಗೆ ಥಾಡೆ ಅವರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಕೇತುರಾಮ್ ಮತ್ತು ರಾಕೇಶ್ ನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.