ಬೆಳಿಗ್ಗೆ ಕೆಲಸಕ್ಕೆ ಸೇರಿಕೊಂಡು ಮಧ್ಯಾಹ್ನದ ವೇಳೆಗೆ ಮಾಲೀಕನ ಮಗುವನ್ನೇ ಅಪಹರಿಸಿದ ಪ್ರಕರಣವೊಂದು ಬೆಂಗಳೂರಿನ ಕಾವೇರಿಪುರದಲ್ಲಿ ಡಿ.28ರಂದು ನಡೆದಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿ ವಸೀಂ ಎಂಬಾತ ಕಳೆದ ಗುರುವಾರ ಶಫೀವುಲ್ಲಾ ಎಂಬವರ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಮಧ್ಯಾಹ್ನದ ವೇಳೆಗೆ ಅವರ ಮಗುವನ್ನು ಅಪಹರಿಸಿ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಶಫೀವುಲ್ಲಾ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಶಫೀವುಲ್ಲಾ ಪತ್ನಿಯಿಂದ ವಿಚ್ಛೇದನ ಪಡೆದು ಮಗಳೊಂದಿಗೆ ಬೆಂಗಳೂರಿನ ಬನಶಂಕರಿ ಠಾಣೆ ವ್ಯಾಪ್ತಿಯ ಕಾವೇರಿಪುರದಲ್ಲಿ ವಾಸವಾಗಿದ್ದರು. ಶಫೀವುಲ್ಲ ಅವರು ಫರ್ನಿಚರ್ ಶಾಪ್ ಇಟ್ಟುಕೊಂಡಿದ್ದರು. ಈ ಹಿಂದೆ ಈತ ಶಫೀವುಲ್ಲ ಅವರ ಫರ್ನೀಚರ್ ಶಾಪ್‌ನಲ್ಲಿ ಕೆಲಸಕ್ಕೆ ಸೇರಿದ್ದ ವಸೀಂ ಎಂಬಾತ ಕೇಲವೇ ದಿನಗಳಲ್ಲಿ ಕೆಲಸ ಬಿಟ್ಟಿದ್ದನು.
ಮತ್ತೆ ಮಾಲೀಕನಿಗೆ ಕೆಲಸ ಕೊಡಿ ಎಂದು ಅಂಗಲಾಚಿ ಕಣ್ಣೀರು ಹಾಕಿದ್ದನು. ಹೀಗಾಗಿ, ಮಾಲೀಕ ಆತನಿಗೆ ಮತ್ತೆ ಕೆಲಸ ಕೊಟ್ಟಿದ್ದರು. ಕೆಲಸಕ್ಕಾಗಿ ಆರೋಪಿ ವಸೀಂ ಎಂಬಾತ ಡಿಸೆಂಬರ್ 28ರ ಬೆಳಿಗ್ಗೆ ಕೆಲಸಕ್ಕೆ ಸೇರಿದ್ದನು. ಮಧ್ಯಾಹ್ನ ಶಫೀವುಲ್ಲ್ ಅವರ ನಾಲ್ಕು ವರ್ಷದ ಮಗುವಿಗೆ ಚಾಕಲೇಟ್ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದಾನೆ.
ಈ ಸುದ್ದಿ ಓದಿದ್ದೀರಾ? 60 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಅರಣ್ಯ ಒತ್ತುವರಿ ತೆರವು
“ಕೆಲಸಕ್ಕೆ ಸೇರಿದ ದಿನವೇ ಮಗುವಿಗೆ ಚಾಕಲೇಟ್ ಕೊಡಿಸುವುದಾಗಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ” ಎಂದು ಶಫೀವುಲ್ಲಾ ಆರೋಪಿಸಿದ್ದಾರೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಶಫೀವುಲ್ಲಾ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.