ರಾಜ್ಯ ರಾಜಧಾನಿ ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಕಾಲೇಜಿ (ಕಿಮ್ಸ್) ನಲ್ಲಿ ಮಹಿಳಾ ವೈದ್ಯೆಯೊಬ್ಬರಿಗೆ ಜೂನಿಯರ್ ವೈದ್ಯ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಜೂನಿಯರ್ ವೈದ್ಯ ಡಾ.ರಾಜು ಎಂಬಾತ ಕಿಮ್ಸ್ ಆಸ್ಪತ್ರೆಯ ಫಾರ್ಮಾ ಕಾಗ್ನಸಿ ವಿಭಾಗದ ಮುಖ್ಯಸ್ಥೆಯಾಗಿರುವ ಮಹಿಳಾ ವೈದ್ಯೆ ಜತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ. ಅಲ್ಲದೇ, ಮಹಿಳಾ ವೈದ್ಯೆಯನ್ನು ಹಿಂಬಾಲಿಸಿ, ಆಕೆಯ ಮೈ ಕೈ ಮುಟ್ಟುತ್ತಾನೆ. ಎದೆಯ ಮೇಲಿನ ಬಟ್ಟೆ ಎಳೆದಿದ್ದಾನೆ. ಜತೆಗೆ ಮಹಿಳಾ ವೈದ್ಯೆಯ ಬಗ್ಗೆ ಕಾಲೇಜಿನಲ್ಲಿ ಕೆಟ್ಟದಾಗಿ ಹೇಳಿಕೊಂಡು ಬರುತ್ತಿದ್ದಾನೆ ಎಂದು ವೈದ್ಯೆ ಆರೋಪಿಸಿ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕುಡಿಯುವ ನೀರಿನ ನಲ್ಲಿಯಲ್ಲಿ ಕೆಸರು ನೀರು: ನಿವಾಸಿಗಳು ಆಕ್ರೋಶ
ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ, ವೈದ್ಯೆ ಮಾಡಿರುವ ಆರೋಪ ಸಾಬೀತಾದರೆ ವೈದ್ಯ ರಾಜು ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ.