ಅಪಹರಣ ಪ್ರಕರಣವೊಂದರಲ್ಲಿ ಕನ್ನಡಪರ ಸಂಘಟನೆ ಅಧ್ಯಕ್ಷ ಪ್ರಕಾಶ್ ಅವರ ಹೆಸರು ಕೇಳಿ ಬಂದಿದ್ದು, ಇದೀಗ ಆರೋಪಿಗಳ ವಿರುದ್ಧ ಬೆಂಗಳೂರಿನ ಶಂಕರಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬ್ಯಾಂಕ್ ಉದ್ಯೋಗಿಯಾಗಿರುವ ಮಂಜುನಾಥ್ ಅವರನ್ನು ಪ್ರಕಾಶ್ ಮತ್ತು ಅವರ ತಂಡ ಅಪಹರಣ ಮಾಡಿ ಹಣ, ಮನೆ ದಾಖಲೆಗಳನ್ನು ಕಸಿದುಕೊಂಡ ಆರೋಪ ಕೇಳಿ ಬಂದಿದೆ. ಪ್ರಕಾಶ್ಗೆ ಸೇರಿದ ಕಚೇರಿಯಲ್ಲಿ ಮಂಜುನಾಥ್ ಅವರನ್ನು ಕರೆದುಕೊಂಡು ಹೋಗಿ ಥಳಿಸಲಾಗಿತ್ತು. ಇದೀಗ, ಅಪಹರಣ ಮಾಡಿದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಂಜುಳಾ ಎಂಬುವವರ ಬಳಿ ಬ್ಯಾಂಕ್ ಉದ್ಯೋಗಿ ಮಂಜುನಾಥ್ ಅವರು ₹8 ಲಕ್ಷ ಸಾಲ ಪಡೆದಿದ್ದರು. ಸಾಲ ಪಡೆದಿದ್ದ ಹಣವನ್ನು ವಾಪಾಸ ನೀಡದೆ ಮಂಜುನಾಥ್ ಸತಾಯಿಸುತ್ತಿದ್ದರು. ಹಾಗಾಗಿ, ಮಂಜುಳಾ ಅವರು ಪ್ರಕಾಶ್ ಜತೆಗೆ ಸೇರಿ ಆತನನ್ನು ಅಪಹರಣ ಮಾಡಿ ದಾಖಲೆಗಳನ್ನು ಕಿತ್ತುಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಭೇಟಿ ಮಾಡಿದ ಪ್ರೇಮ್, ರಕ್ಷಿತಾ
ಈ ಘಟನೆಗೆ ಸಂಬಂಧಿಸಿದಂತೆ ಸದ್ಯ ಮಂಜುಳಾ, ಪ್ರಕಾಶ್, ಚಲಪತಿ ಸೇರಿ 6 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.