ಬೆಂಗಳೂರು | ಹುಡುಗಿಯರನ್ನ ರೇಗಿಸಿದ ಯುವಕನಿಗೆ ಚಾಕು ಇರಿದ ವ್ಯಕ್ತಿಯ ಬಂಧನ

Date:

Advertisements

ಯುವತಿಯರನ್ನು ರೇಗಿಸಿದ ಯುವಕನಿಗೆ ವಾರ್ನ್‌ ಮಾಡಲು ತೆರಳಿ ವ್ಯಕ್ತಿಯೋರ್ವ ಚಾಕುವಿನಿಂದ ಇರಿದು ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನಡೆದಿದೆ.

ಈ ಘಟನೆ ಕಳೆದ ಒಂದು ವಾರದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುದೀಪ್ ಹಲ್ಲೆ ಮಾಡಿದ ವ್ಯಕ್ತಿ. ಈತ ವೃತ್ತಿಯಲ್ಲಿ ಆಟೋ ಚಾಲಕ. ವಿವೇಕ್ ರಾವ್ ಹಲ್ಲೆಗೊಳಗಾದ ವ್ಯಕ್ತಿ. ಈತ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ.

ಏನಿದು ಘಟನೆ?

Advertisements

ಸುದೀಪ್ ಹಾಗೂ ಹಲ್ಲೆಗೊಳಗಾದ ವ್ಯಕ್ತಿ ಇಬ್ಬರು ಒಂದೇ ಏರಿಯಾದವರು. ಸುದೀಪ್​ಗೆ ಇತ್ತೀಚೆಗೆ ಮದುವೆ ನಿಶ್ಚಯವಾಗಿತ್ತು. ತಾನು ಮದುವೆಯಾಗುವ ಹುಡುಗಿ ಹಾಗೂ ಆಕೆಯ ಸ್ನೇಹಿತೆ ಮಲ್ಲವ್ವ ಜತೆಗೆ ಆಟೋದಲ್ಲಿ ತೆರಳುತ್ತಿದ್ದರು.

ಈ ವೇಳೆ, ಇಬ್ಬರು ಹುಡುಗಿಯರನ್ನ ವಿವೇಕ್ ರಾವ್​ ರೇಗಿಸಿದ್ದಾನೆ. ಅಲ್ಲದೇ, ಮಲ್ಲವ್ವ ನಿಮ್ಮವ್ವ ಎಲ್ಲವ್ವ ಎಂದು ರೇಗಿಸಿದ್ದಾನೆ ಎನ್ನಲಾಗಿದೆ.

ಇದರಿಂದ ಕೋಪಗೊಂಡ ಸುದೀಪ್ ಆತನನ್ನು ಪ್ರಶ್ನೆ ಮಾಡಿದ್ದಾನೆ. ಈ ವೇಳೆ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಸುದೀಪ್ ಆತನಿಗೆ ಚಾಕುವಿನಿಂದ ಇರಿದಿದ್ದಾನೆ.

ಸದ್ಯ ಗಾಯಾಳು ವಿವೇಕ್ ರಾವ್​ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಮಾಗಡಿ ರಸ್ತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕುಡಿಯುವ ನೀರಿನ ನಲ್ಲಿಯಲ್ಲಿ ಕೆಸರು ನೀರು: ನಿವಾಸಿಗಳು ಆಕ್ರೋಶ

ಬೆಂಗಳೂರು | ಸ್ನೇಹಿತನಿಗೆ ತಡರಾತ್ರಿ ಡೆಬಿಟ್ ಕಾರ್ಡ್‌ ಕೊಡಲು ಬಂದ ಟೆಕ್ಕಿಯ ಬೈಕ್ ಕಳ್ಳತನ

ತಡರಾತ್ರಿ ಸ್ನೇಹಿತನಿಗೆ ಡೆಬಿಟ್ ಕಾರ್ಡ್‌ ಕೊಡಲು ಬಂದ ಟೆಕ್ಕಿಯ ಬೈಕ್‌ ಅನ್ನು ಪುಂಡರ ಗ್ಯಾಂಗ್‌ವೊಂದು ಅಡ್ಡಗಟ್ಟಿ ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಚಂದ್ರ ಲೇಔಟ್​ನ ಬಿಸಿಸಿ ಲೇಔಟ್​ನಲ್ಲಿ ನಡೆದಿದೆ

ಬುಧವಾರ ತಡರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಟೆಕ್ಕಿ ಇಮ್ಯಾನುಯೆಲ್ ಬೈಕ್ ಕಳೆದುಕೊಂಡವರು. ಈ ಬಗ್ಗೆ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಮತ್ತು ಆಟೋ ನಂಬರ್ ಪ್ಲೇಟ್ ಆಧರಿಸಿ ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಏನಿದು ಘಟನೆ?

ಟೆಕ್ಕಿ ಬುಧವಾರ ತಡರಾತ್ರಿ 1 ಗಂಟೆಗೆ ತನ್ನ ಸ್ನೇಹಿತನಿಗೆ ಡೆಬಿಟ್ ಕಾರ್ಡ್‌ ನೀಡಲು ನಗರದ ಚಂದ್ರಾಲೇಔಟ್‌ನ ಬಿಸಿಸಿ ಲೇಔಟ್‌ಗೆ ತೆರಳಿದ್ದಾರೆ. ಈ ಸಮಯದಲ್ಲಿ ಟೆಕ್ಕಿಯನ್ನು ಅಡ್ಡಗಟ್ಟಿದ ಪುಂಡರ ಗ್ಯಾಂಗ್‌ವೊಂದು ಆತನಿಂದ ಹಣ ಕಸಿದುಕೊಳ್ಳಲು ಹುಡುಕಾಡಿದ್ದಾರೆ. ಆತನ ಬಳಿ ಹಣ ಇಲ್ಲದಿದ್ದಾಗ ಆತನ ಮೇಲೆ ಹಲ್ಲೆ ನಡೆಸಿ ಬೈಕ್ ಕದ್ದು ಹೋಗಿದ್ದಾರೆ.

ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೈಕ್ ಕದ್ದುಕೊಂಡು ಹೋದ ಆರೋಪಿಗಳು ದೂರು ದಾಖಲಾಗುತ್ತಿದ್ದಂತೆ ಮತ್ತೆ ಬೈಕ್‌ ಅನ್ನು ಅದೇ ದಿನ ಸಂಜೆ ವೇಳೆ ಅದೇ ಸ್ಥಳಕ್ಕೆ ಬೈಕ್ ತಂದು ನಿಲ್ಲಿಸಿ ಪರಾರಿಯಾಗಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X