ಎದೆನೋವು ಎಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ ಮಹಿಳೆಯ ಮಾಂಗಲ್ಯ ಸರ ಕಳ್ಳತನವಾದ ಘಟನೆ ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ನಡೆದಿದೆ.
ರಾಧಾ ಎಂಬ ಮಹಿಳೆಯ ಮಾಂಗಲ್ಯ ಸರ್ ಕಳ್ಳತನವಾಗಿದೆ. ಫೆಬ್ರವರಿ 8 ರಂದು ಮಹಿಳೆಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ, ಮೂಡಲಪಾಳ್ಯದಲ್ಲಿರುವ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ, ಇಸಿಜಿ ಮಾಡಬೇಕಾದಾಗ ನರ್ಸ್ ಅಕ್ಷತಾ ಎಂಬುವವರು ಮಾಂಗಲ್ಯ ಸರವನ್ನು ತೆಗೆಯಲು ಹೇಳಿದ್ದಾರೆ.
ರಾಧಾ ಮಾಂಗಲ್ಯ ಸರ ತೆಗೆದ ಬಳಿಕ ತಮ್ಮ ಪತಿಗೆ ಆ ಮಾಂಗಲ್ಯ ಸರವನ್ನು ಕೊಡಲು ನರ್ಸ್‌ಗೆ ಹೇಳಿದ್ದಾರೆ. ನರ್ಸ್ ಅಲ್ಲೇ ದಿಂಬಿನ ಕೆಳಗೆ ಇಡಿ ಎಂದು ಸೂಚಿಸಿದ್ದಾರೆ.
ನರ್ಸ್ ಹೇಳಿದಂತೆ ರಾಧಾ ತನ್ನ ಮಾಂಗಲ್ಯ ಸರವನ್ನು ದಿಂಬಿನ ಕೆಳಗಡೆ ಇಟ್ಟು ಇಸಿಜಿ ಮಾಡಿಸಿಕೊಂಡಿದ್ದಾರೆ. ಬಳಿಕ, ಸರವನ್ನು ಮರೆತು ಹೋಗಿದ್ದಾರೆ. ಮನೆಗೆ ತೆರಳಿದ ರಾಧಾ ಸರವನ್ನು ಮರೆತು ರಾತ್ರಿ ನಿದ್ದೆ ಮಾಡಿದ್ದಾರೆ.
ಬಳಿಕ, ಮರುದಿನ ಸ್ನಾನಕ್ಕೆ ಹೋದಾಗ ಮಹಿಳೆಗೆ ಸರದ ಬಗ್ಗೆ ಅರಿವಾಗಿದೆ. ಕೂಡಲೇ ನೆನಪು ಮಾಡಿಕೊಂಡು ಆಸ್ಪತ್ರೆಗೆ ಹೋಗಿ ವಿಚಾರಿಸಿದಾಗ ಆಸ್ಪತ್ರೆ ಸಿಬ್ಬಂದಿ ಸರಿಯಾಗಿ ಉತ್ತರಿಸಿಲ್ಲ.
ಈ ವೇಳೆ, ಸಿಸಿಟಿವಿ ಪರಿಶೀಲನೆ ಮಾಡಿದಾಗ ನರ್ಸ್ ಒಬ್ಬರು ಸರವನ್ನು ಯಾರಿಗೂ ಗೊತ್ತಾಗದಂತೆ ಹಿಡಿದುಕೊಂಡು ಹೋಗುತ್ತಿರುವುದು ಅನುಮಾನ ಹುಟ್ಟು ಹಾಕಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ; ಕೆ.ಆರ್ ಪುರದಲ್ಲಿ 15 ದಿನಕ್ಕೊಮ್ಮೆ ಕಾವೇರಿ ನೀರು
ಸಿಸಿಟಿವಿ ದೃಶ್ಯಗಳೊಂದಿಗೆ ಗೋವಿಂದರಾಜ್ ನಗರ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಮಾಂಗಲ್ಯ ಸರದ ಕಳ್ಳತನದ ಹಿಂದೆ ಆಸ್ಪತ್ರೆ ಸಿಬ್ಬಂದಿ ಕೈವಾಡ ಇರುವ ಬಗ್ಗೆ ಮಹಿಳೆ ಶಂಕೆ ವ್ಯಕ್ತಪಡಿಸಿದ್ದಾರೆ.